ಇಂದು ಚಂಪಾ ಷಷ್ಠಿ ಸಂಭ್ರಮ – ಸುಬ್ರಹ್ಮಣ್ಯ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಸೇವೆ–ಪೂಜೆ

ಸ್ಕಂದ ಷಷ್ಠಿಯ ನಂತರ ಬರುವ ಆರನೇ ತಿಥಿಯನ್ನೇ ಚಂಪಾ ಷಷ್ಠಿಎಂದು ಕರೆಯುತ್ತಾರೆ. ಇದು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿ ದಿನವಾಗಿದ್ದು, ಸುಬ್ರಹ್ಮಣ್ಯ ಷಷ್ಠಿ ಎಂಬ ಹೆಸರಿನಿಂದಲೂ ಇದು ಪ್ರಸಿದ್ಧಿಯನ್ನು ಹೊಂದಿದೆ. ಈ ವರ್ಷ ಸುಬ್ರಹ್ಮಣ್ಯ ಷಷ್ಠಿ/ಚಂಪಾ ಷಷ್ಠಿ ನವೆಂಬರ್ 26ರಂದು ಅಂದರೆ ಇಂದು ನಡೆಯಲಿದ್ದು, ರಾಜ್ಯದಾದ್ಯಂತ ಇರುವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಗಳಲ್ಲಿ ಈ ದಿನ ವಿಶೇಷ ಸೇವೆ–ಪೂಜೆಗಳು ಹಾಗೂ ಪುನಸ್ಕಾರ ಕಾರ್ಯಕ್ರಮಗಳು ನಡೆಯುತ್ತವೆ.
ಇದನ್ನೂ ಓದಿ: ತೂಕ ಇಳಿಸಿಕೊಳ್ಳಲು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು? – ಚಪಾತಿ ಜೊತೆ ಅನ್ನ ಸೇವಿಸಬಹುದಾ?
ಸುಬ್ರಹ್ಮಣ್ಯ ಷಷ್ಠಿ ಸುಬ್ರಹ್ಮಣ್ಯಸ್ವಾಮಿಗೆ ಅರ್ಪಿಸಲಾದ ಪವಿತ್ರ ದಿನವಾಗಿದ್ದು, ದೇವಸೇನೆಯಾಧ್ಯಕ್ಷರಾಗಿರುವ ಸುಬ್ರಹ್ಮಣ್ಯಸ್ವಾಮಿಯು ತಾರಕಾಸುರನ ಮೇಲೆ ಸಾಧಿಸಿದ ಜಯವನ್ನು ಸ್ಮರಿಸುವ ಪರ್ವವಾಗಿಯೂ ಈ ದಿನವಾಗಿಯೂ ಆಚರಿಸಲ್ಪಡುತ್ತಾರೆ. ದುಷ್ಟ ಸಂಹಾರ ಮಾಡಿ ವಿಜಯವನ್ನು ಪಡೆದುಕೊಂಡ ಈ ದಿನದಲ್ಲಿ ಭಕ್ತರು ಧೈರ್ಯ, ಗೆಲುವು, ಸಮೃದ್ಧಿ ಮತ್ತು ಆಧ್ಯಾತ್ಮಿಕ ಪ್ರಗತಿಗಾಗಿ ಸುಬ್ರಹ್ಮಣ್ಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ದಿನದಂದು ಪೂಜೆ ಮಾಡುವುದರಿಂದ ಎಲ್ಲಾ ದುಃಖಗಳು ದೂರವಾಗುತ್ತವೆ ಮತ್ತು ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ.
ಧಾರ್ಮಿಕ ಪೌರಾಣಿಕ ನಂಬಿಕೆಯ ಪ್ರಕಾರ, ಕಾರ್ತಿಕೇಯನು ತನ್ನ ತಂದೆ ತಾಯಿ ಮತ್ತು ಕಿರಿಯ ಸಹೋದರ ಶ್ರೀ ಗಣೇಶನ ಮೇಲೆ ಕೋಪಗೊಂಡು ಕೈಲಾಸ ಪರ್ವತವನ್ನು ತೊರೆದನು, ಶಿವನ ಜ್ಯೋತಿರ್ಲಿಂಗವಾದ ಮಲ್ಲಿಕಾರ್ಜುನನು ಅಲ್ಲಿಗೆ ಬಂದನು ಮತ್ತು ಕಾರ್ತಿಕೇಯನು ಸ್ಕಂದ ಷಷ್ಠಿಯಂದು ತಾರಕಾಸುರ ಎಂಬ ರಾಕ್ಷಸನನ್ನು ಕೊಂದನು. ಷಷ್ಠಿಯ ದಿನಾಂಕದಂದೇ, ಕಾರ್ತಿಕೇಯನು ದೇವತೆಗಳ ಸೈನ್ಯದ ಒಡೆಯನಾದನು.
ಚಂಪಾ ಷಷ್ಠಿಯಂದು ಉಪವಾಸ ಮಾಡುವುದರಿಂದ ಸುಖ, ಶಾಂತಿ ಸಿಗುತ್ತದೆ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ. ಈ ವ್ರತವನ್ನು ಆಚರಿಸುವುದರಿಂದ ಹಿಂದಿನ ಜನ್ಮದ ಪಾಪಗಳು ನಿವಾರಣೆಗೊಳ್ಳುತ್ತದೆ ಎಂದು ನಂಬಲಾಗಿದೆ. ಚಂಪಾ ಷಷ್ಟಿಯ ದಿನದಂದು ಸುಬ್ರಮಣ್ಯ ಸ್ವಾಮಿಯನ್ನು ಪೂಜಿಸುವುದರಿಂದ ಅಜ್ಞಾನದಿಂದ ಮಾಡಿದ ಪಾಪಗಳಿಂದ ಮುಕ್ತಿ ದೊರೆಯುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇದರೊಂದಿಗೆ ಭಕ್ತರಿಗೆ ಐಶ್ವರ್ಯ, ಸಂಪತ್ತು ಲಭಿಸುತ್ತದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಬ್ರಹ್ಮರಥೋತ್ಸ
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಹರಿದು ಬಂದಿದೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವದಲ್ಲಿ ಭಕ್ತಿಪೂರ್ವಕವಾಗಿ ಭಾಗವಹಿಸಿದರು. ಚಂಪಾಷಷ್ಠಿ ಮಹೋತ್ಸವವು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ

ನೋಡಿರಿ

