ಚಾಮರಾಜನಗರ ಬಿಜೆಪಿ ಜಿಲ್ಲಾಧ್ಯಕ್ಷ ಸಹಕಾರ ನೀಡದಿದ್ದಕ್ಕೆ ಸೋಮಣ್ಣ ಸೋಲು – ಕೃತಜ್ಞತಾ ಸಭೆಯಲ್ಲಿ ಗಲಾಟೆ 

ಚಾಮರಾಜನಗರ ಬಿಜೆಪಿ ಜಿಲ್ಲಾಧ್ಯಕ್ಷ ಸಹಕಾರ ನೀಡದಿದ್ದಕ್ಕೆ ಸೋಮಣ್ಣ ಸೋಲು – ಕೃತಜ್ಞತಾ ಸಭೆಯಲ್ಲಿ ಗಲಾಟೆ 

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಘಟಾನುಘಟಿಗಳೇ ಈ ಬಾರಿ ಸೋಲು ಅನುಭವಿಸಿದ್ದಾರೆ. ಆಡಳಿತ ಪಕ್ಷ ಬಿಜೆಪಿ 66 ಕ್ಷೇತ್ರಗಳಲ್ಲಷ್ಟೇ ಗೆಲುವು ಸಾಧಿಸಿದೆ. ಬಿಜೆಪಿಯಲ್ಲಿ ಸಚಿವರಾಗಿದ್ದವರು ಕೂಡ ಮತದಾರರ ಮುಂದೆ ಮಂಡಿಯೂರಿದ್ದಾರೆ. ಅದರಲ್ಲಿ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ವಿ. ಸೋಮಣ್ಣ (V Somanna) ಕೂಡ ಒಬ್ಬರು.

ಚುನಾವಣೆಯಲ್ಲಿ ಮಾಜಿ ಸಚಿವ ವಿ. ಸೋಮಣ್ಣ ಎರಡು ದೋಣಿಗಳ ಮೇಲೆ ಕಾಲಿಟ್ಟಿದ್ರು. ರಾಜಧಾನಿ ಹೃದಯ ಭಾಗದ ಸ್ವಕ್ಷೇತ್ರ ಗೋವಿಂದರಾಜನಗರವನ್ನು ಬಿಟ್ಟು ಚಾಮರಾಜನಗರ (Chamrajnagar) ಹಾಗೂ ವರುಣಾ (Varuna) ಕ್ಷೇತ್ರದಲ್ಲಿ ಕಮಲ ಅರಳಿಸಲು ಅಖಾಡಕ್ಕಿಳಿದಿದ್ರು. ಆದರೆ ಎರಡು ಕ್ಷೇತ್ರಗಳಲ್ಲೂ ಮತದಾರರು ಸೋಮಣ್ಣರ ಕೈ ಹಿಡಿಯಲಿಲ್ಲ. ಇದರಿಂದ ತೀವ್ರವಾಗಿ ಬೇಸರಗೊಂಡಿದ್ದ ಸೋಮಣ್ಣ, ನಾನು ನಿರುದ್ಯೋಗಿಯಾಗಿದ್ದೇನೆ ಎಂದು ಹೇಳಿದ್ದರು. ಇನ್ನು ಚಾಮರಾಜನಗರ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಜತೆ ಬುಧವಾರ (ಮೇ.17) ವಿ. ಸೋಮಣ್ಣ ಕೃತಜ್ಞತಾ ಸಭೆ ನಡೆಸಿದ್ದು, ಈ ವೇಳೆ ಸೋಮಣ್ಣ ಬೆಂಬಲಿಗರು ಗಲಾಟೆ ಮಾಡಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯ ಸಿಎಂ.. ಡಿ.ಕೆ ಶಿವಕುಮಾರ್ ಡಿಸಿಎಂ..? – ನಾಳೆಯೇ ಪ್ರಮಾಣವಚನ ಸ್ವೀಕಾರ..?

ಸೋಮಣ್ಣ ಸೋಲಿನ ಹತಾಶೆಯಲ್ಲಿರುವ ಬೆಂಬಲಿಗರು ಜಿಲ್ಲಾ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದು, ಜಿಲ್ಲಾ ಬಿಜೆಪಿ ಏನು ಕೆಲಸ ಮಾಡಿಲ್ಲ. ಸೋಮಣ್ಣ ಅವರನ್ನು ಬೇಕು ಅಂತಲೇ ಸೋಲಿಸಿದ್ದಾರೆ ಎಂದು ಸಭೆಯಲ್ಲಿ ಜಿಲ್ಲಾಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾಕಂದ್ರೆ ಚಾಮರಾಜನಗರದಿಂದ ವಿ. ಸೋಮಣ್ಣ ಸ್ಪರ್ಧಿಸುವುದು ಬಹುತೇಕ ಫಿಕ್ಸ್​​​ ಆದಾಗ ಮಾತನಾಡಿದ್ದ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಸೋಮಣ್ಣ ಅವರು ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಪಕ್ಷದ ಕಾರ್ಯಕರ್ತರಿಗೆ ಸಹಕಾರ ನೀಡಿಲ್ಲ. ಸೋಮಣ್ಣ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಸೋಮಣ್ಣ ಅವರಿಗೆ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಶಕ್ತಿ ಇಲ್ಲ. ಅವರನ್ನು ಲಿಂಗಾಯತ ಸಮುದಾಯ ಅಥವಾ ಇತರ ಯಾವುದೇ ಸಮುದಾಯದವರು ಬೆಂಬಲಿಸುವುದಿಲ್ಲ ಎಂದು ಹೇಳಿದ್ದರು. ಇದಾದ ಬಳಿಕ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನ ಕರೆಸಿ ಮಾತನಾಡಿ ರುದ್ರೇಶ್ ಅವರನ್ನು ಶಾಂತಗೊಳಿಸಿದ್ದರು. ಇದಾದ ಬಳಿಕ ಚುನಾವಣೆ ನಡೆದಿದ್ದು, ಈ ಚುನಾವಣೆಯಲ್ಲಿ ವಿ.ಸೋಮಣ್ಣ ಪರ ರುದ್ರೇಶ್​​ ಕೆಲಸ ಮಾಡಿಲ್ಲ ಎಂದು ಸೋಮಣ್ಣ ಬೆಂಬಲಿಗರು ಆರೋಪ ಮಾಡುತ್ತಿದ್ದಾರೆ.

suddiyaana