ಇದು ಹುಲಿಯೋ, ನಾಯಿಯೋ!… ಹೇಗಿದೆ “ಡೈಗರ್” ಹವಾ?  

ಇದು ಹುಲಿಯೋ, ನಾಯಿಯೋ!… ಹೇಗಿದೆ “ಡೈಗರ್” ಹವಾ?  

ಬೆಳೆಗಳನ್ನು ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳುವುದು ರೈತರಿಗೆ ಸವಾಲಿನ ಸಂಗತಿ. ಕೃಷಿ ಪ್ರದೇಶಗಳಿಗೆ ಕಾಡು ಪ್ರಾಣಿಗಳು ಒಮ್ಮೆ ಎಂಟ್ರಿ ಸಾಕು, ಬೆಳೆಗಳನ್ನು ಸರ್ವನಾಶ ಮಾಡಿ ಬಿಡುತ್ತದೆ. ಇದಕ್ಕಾಗಿ ಅನೇಕ ರೈತರು ಗದ್ದೆಯಲ್ಲಿ ಬೆದರು ಗೊಂಬೆ, ಸೀರೆಗಳನ್ನು ಕಟ್ಟುತ್ತಾರೆ. ಆದರೆ ಇಲ್ಲೊಬ್ಬ ರೈತನ ಐಡಿಯಾ ಎಲ್ಲರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಫೋಟೋಗಳು ವೈರಲ್ ಆಗುತ್ತಿದೆ. ಕೋತಿ ಮತ್ತಿತರ ಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಲು ಮಾಡಿದ ರೈತನ ಈ ಹೊಸ ಉಪಾಯ ಒಂದು ಕ್ಷಣ ಜನರನ್ನು ಬೆಚ್ಚಿಬೀಳಿಸಿದೆ.

ಇದನ್ನೂ ಓದಿ: ಕಿಟಕಿಯಿಂದ ಚಲಿಸುತ್ತಿರುವ ಬಸ್ ಹತ್ತಿದ ಯುವತಿ – ಸೀಟಿಗಾಗಿ ಈ ಸಾಹಸ ಬೇಕಾ?  

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಜ್ಜಿಪುರ ಸುತ್ತಮುತ್ತ ಹುಲಿ ಮರಿಯೊಂದು ಓಡಾಡುತ್ತಿರುವಂತೆ ಭಾಸವಾಗಿದೆ. ರಸ್ತೆಯಲ್ಲಿ ಓಡಾಡುವವರು, ಸ್ಥಳೀಯರು ಇದನ್ನು ಕಂಡು ಶಾಕ್ ಆಗುತ್ತಿದ್ದಾರೆ. ಸೂಕ್ಷ್ಮದಿಂದ ಗಮನಿಸಿದಾಗ ಅದು ಸಾಮಾನ್ಯ ನಾಯಿ ಎಂದು ಗೊತ್ತಾಗಿದೆ. ಈ ನಾಯಿಯನ್ನು ಕಂಡು ಗ್ರಾಮಸ್ಥರು ಒಂದು ಕ್ಷಣ ಶಾಕ್ ಆಗಿದ್ದರು. ಅಲ್ಲದೇ ಈ ನಾಯಿಯನ್ನು ಕೆಲವರು  “ಡೈಗರ್” ಎಂದು ಕರೆದಿದ್ದಾರೆ.

ಸ್ಥಳೀಯರು ಹುಲಿ ಬಣ್ಣ ಬಳಿದಿರುವ ನಾಯಿ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಚಿಕ್ಕಮಗಳೂರು ಭಾಗದ ರೈತರೊಬ್ಬರು ಕಾಡಾನೆಗಳಿಂದ ಬೆಳೆಯನ್ನು ರಕ್ಷಿಸಲು ತೋಟದಲ್ಲಿ ಸೌಂಡ್ ಸಿಸ್ಟಮ್ ಅಳವಡಿಸಿದ್ದರು. ಈ ಫೋಟೋಗಳು ಸಹ ಈ ಹಿಂದೆ ವೈರಲ್ ಆಗಿದ್ದವು.

ತೆಲಂಗಾಣದ ರೈತನೋರ್ವ ತನ್ನ ಬೆಳೆಗೆ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಬಾಲಿವುಡ್ ನಟಿ ಸನ್ನಿ ಲಿಯೋನ್ ಫೋಟೋ ಹಾಕಿದ್ದರು.

suddiyaana