ಇದ್ರೆ ನೆಮ್ದಿಯಾಗಿರ್ಬೇಕ್.. ವಿ*ಷ ಕೊಡಿ ಜಡ್ಜ್ ಮುಂದೆ ಗೋಳಾಡಿದ ದರ್ಶನ್
ಡೆವಿಲ್ ದೌಲತ್ತು ಮುರಿದ ಜೈಲುವಾಸ

ಇದ್ರೆ ನೆಮ್ದಿಯಾಗಿರ್ಬೇಕ್.. ವಿ*ಷ ಕೊಡಿ  ಜಡ್ಜ್ ಮುಂದೆ ಗೋಳಾಡಿದ ದರ್ಶನ್ಡೆವಿಲ್ ದೌಲತ್ತು ಮುರಿದ ಜೈಲುವಾಸ

 

ಚಾಲೆಂಜ್‌ಸ್ಟಾರ್ ದರ್ಶನ್‌.. ಖಡಕ್ ಮಾತು ಖಡಕ್ ಡೈಲಾಗ್‌..ಯಾರನ್ನೂ ಕೇರ್ ಮಾಡೋ ಮನುಷ್ಯ ಅಲ್ಲ.. ತಾನ್ ನಡೆದಿದ್ದೇ ದಾರಿ ಅಂತ ನಡೆಯುತ್ತಿದ್ದ ನಟ..  ತೂಗುದೀಪ ಶ್ರೀನಿವಾಸ್ ಅವರಂತಹ ಮೇರು ನಟನ ಮಗನಾದರೂ ಕೂಡ ಕಡುಗಷ್ಟದಿಂದ ಮೇಲೆ ಬಂದವರು ದರ್ಶನ್.  ಚಿತ್ರರಂಗದಲ್ಲಿ ಲೈಟ್ ಬಾಯ್ ಆಗಿ ಸೇರಿಕೊಂಡು ದೊಡ್ಡ ಸ್ಟಾರ್ ನಟನಾಗಿ ಬೆೆಳೆದು ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ರು. 2024 ರ ಅರ್ಧ ವರ್ಷದ ತನಕ ಎಲ್ಲವು ಚೆನ್ನಾಗಿತ್ತು.. ಆದ್ರೆ ರೇಣುಕಾಸ್ವಾಮಿ ಕೊಲೆ ಕೇಸ್‌ ದರ್ಶನ್‌ನನ್ನ ಹುಚ್ಚನಂತೆ ಮಾಡಿದೆ. ಜೈಲಿನಿಂದ ಬಿಡುಗಡೆ ಈಗ ಮತ್ತೆ ಜೈಲಿನಲ್ಲಿರೋ ದಾಸ ವಿಷ ಕೊಡಿ ನಾನು ಸಾಯುತ್ತೇನೆ  ಅಂತ ಬೇಡಿಕೊಳ್ಳುವ ಪರಿಸ್ಥಿತಿಗೆ ಬಂದಿದ್ದಾರೆ..

ಯಾವುದ್ದಕ್ಕೂ ಬಗ್ಗದ ದರ್ಶನ್ .. ನ್ಯಾಯಾಧೀಶರ ಎದುರು ವಿಷ ಕೊಡುವಂತೆ ಮನವಿಯನ್ನು ಮಾಡಿದ್ರು. ಈ ಮೂಲಕ ಜಡ್ಜ್‌ಗೆ ದರ್ಶನ್ ಶಾಕ್ ನೀಡಿದ್ದಾರೆ.  ಹೌದು, ನಿಮಗೆ ಗೊತ್ತಿರಲಿ.. ದರ್ಶನ್‌ಗೆ ಈ ಪರಪ್ಪನ ಅಗ್ರಹಾರ ಅರಮನೆಯಲ್ಲ. ಬದಲಿಗೆ ಅಕ್ಷರಶಃ ಸೆರೆಮನೆ. ಸುಪ್ರೀಂ ಆದೇಶಕ್ಕೆ ಹೆದರಿದ ಪೊಲೀಸರು ಸ್ಪೇಷಸ್ ಟ್ರಿಟ್‌ಮೆಂಟ್ ಬಿಡಿ ಸಾಮಾನ್ಯ ಸವಲತ್ತುಗಳನ್ನು ಕೂಡ ದರ್ಶನ್‌ಗೆ ನೀಡಲಾಗುತ್ತಿಲ್ಲ. ಹೀಗಾಗಿ ಕೊನೆ ಪಕ್ಷ ಹಾಸಿಗೆ, ತಲೆದಿಂಬು, ಹೊದಿಕೆ ಸೇರಿದಂತೆ ಕನಿಷ್ಠ ಸೌಲಭ್ಯವಾದರೂ ಕೊಡಿ ಎಂದು ದರ್ಶನ್ ಪರ ವಕೀಲರು ಬೆಂಗಳೂರಿನ 64ನೇ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣಾಧೀನ ಕೈದಿಗೆ ಕೊಡಬಹುದಾದ ಕನಿಷ್ಠ ಸೌಲಭ್ಯಗಳನ್ನು ನೀಡುವಂತೆ ನಾವು ಕೇಳುತ್ತಿದ್ದೇವೆ. ಕಾನೂನು ಪ್ರಕಾರ ಏನು ಕೊಡಬೇಕೋ ಅದನ್ನೇ ಕೊಡಲಿ ಎಂದು ದರ್ಶನ್ ಪರ ವಕೀಲರು ವಾದವನ್ನು ಮಾಡಿದ್ದರು. ಪ್ರಿಸನ್ಸ್ ಕಾಯ್ದೆಯ 63ರ ಪ್ರಕಾರ ಸ್ವಂತ ವಸ್ತುಗಳನ್ನು ಹೊಂದಲು ಅವಕಾಶ ಇದೆ ಎಂದು ಕೇಳಿಕೊಂಡಿದ್ದರು.

ವಿಷ ಕೊಡಿ ಎಂದು ಕೇಳಿದ ದರ್ಶನ್ 

ಹೆಚ್ಚುವರಿ ಹಾಸಿಗೆ ಹಾಗೂ ದಿಂಬು ವಿಚಾರಕ್ಕೆ ವಿಚಾರಣೆಯನ್ನು ನಡೆಸಲಾಯ್ತು. ಈ ವಿಚಾರಣೆ ಸಂದರ್ಭದಲ್ಲಿ ಪರಪ್ಪನ ಅಗ್ರಹಾರದಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾದ ದರ್ಶನ್‌, ನನಗೆ ದಯಮಾಡಿ ವಿಷ ನೀಡಿ ಎಂದು ನ್ಯಾಯಾಧೀಶರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ದರ್ಶನ್ ಅವರ ಈ ಮಾತು ಕೇಳಿ ಶಾಕ್ ಆದ ನ್ಯಾಯಾಧೀಶರು ಹಾಗೆಲ್ಲ ಕೇಳಬಾರದು ಎಂದು ಹೇಳಿದ್ದಾರೆ. ನ್ಯಾಯಾಧೀಶರು ಹಾಗೆಲ್ಲಾ ಮಾಡಲು ಸಾಧ್ಯ ಇಲ್ಲ ಎಂದು ಹೇಳಿದ ನಂತರವೂ ಸುಮ್ಮನಾಗದ ದರ್ಶನ್, ನಾನು ಬಿಸಿಲು ನೋಡಿ 30 ದಿನಗಳಾಗಿವೆ. ಬಟ್ಟೆಗಳು ವಾಸನೆ ಬರುತ್ತಿವೆ. ಫಂಗಸ್‌ನಿಂದಾಗಿ ಇಲ್ಲಿ ಬದುಕಲು ಆಗುತ್ತಿಲ್ಲ. ಬೇರೆ ಯಾರಿಗೂ ಬೇಡ ನನಗೆ ಮಾತ್ರ ವಿಷ ನೀಡಲಿ. ಕೋರ್ಟ್​​ನಿಂದಲೇ ಈ ಆದೇಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ದರ್ಶನ್ ಅವರ ಈ ಮಾತುಗಳಿಗೆ ಹಾಗೆಲ್ಲ ಆದೇಶ ನೀಡಲು ಸಾಧ್ಯ ಇಲ್ಲ ಎಂದು  ಜಡ್ಜ್ ಹೇಳಿದ್ರು.

ದರ್ಶನ್ ಮಾತಿಗೆ ಕರಗಿದ ಜಡ್ಜ್ 

ಬೆಳಗ್ಗೆ ದರ್ಶನ್ ಮಾತು ಕೇಳಿದ ಕೋರ್ಟ್‌ ಮಧ್ಯಾಹ್ನ ಆದೇಶವನ್ನ ಹೊರಡಿಸಿದೆ. ಈ ಆದೇಶದಲ್ಲಿ ದರ್ಶನ್‌ಗೆ ಸ್ವಲ್ಪ ರಿಲೀಫ್‌ ಸಿಕ್ಕಂತೆ ಕಾಣುತ್ತಿದೆ. ಮೊದಲ ರಿಲೀಫ್ ಅಂದ್ರೆ ದರ್ಶನ್ ಬಳ್ಳಾರಿಗೆ ಶಿಫ್ಟ್ ಆಗೋದ್ರಿಂದ ತಪ್ಪಿಸಿಕೊಂಡಿದ್ದಾರೆೆ. ದರ್ಶನ್ ಪರಪ್ಪನ ಅಗ್ರಹಾರದಲ್ಲೇ ಇರಲಿ ಅಂತ ಕೋರ್ಟ್ ಹೇಳಿದೆ. ಹಾಗೇ 5 ಜೊತೆ ಬಟ್ಟೆ ವಾಕಿಂಗ್ ಮಾಡೋಕೆ ಅವಕಾಶ ನೀಡಲಾಗಿದೆ. ಕನಿಷ್ಠಿ ಸೌಲಭ್ಯ ನೀಡಲು ಜೈಲಿನ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಹಾಸಿಗೆ ದಿಂಬು ನೀಡುವ ವಿಚಾರದಲ್ಲೂ ಜೈಲು ಕೈಪಿಡಿ ಅನುಸರಿಸಲು ಸೂಚನೆ ನೀಡಿದೆ. ದೊಡ್ಡ ಮಟ್ಟದಲ್ಲಿ ಅಲ್ಲದಿದ್ರೂ ಸ್ವಲ್ಪ ಮಟ್ಟಿಗೆ ದರ್ಶನ್‌ಗೆ ರಿಲೀಫ್ ಸಿಕ್ಕಿದೆ.

ಒಬ್ಬ ಸ್ಟಾರ್ ನಟ ವಿಷ ಕೊಡಿ ಎಂದು ಹೇಳಿರುವ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.  ನಟ‌ ದರ್ಶನ್ ಅವರಿಗೆ ಸೂಕ್ತ ಮನೋರೋಗ ಚಿಕಿತ್ಸೆ ಅಗತ್ಯವಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಟಾಕ್ ಶುರುವಾಗಿದೆ.  ವಿಷ ಕೊಡಿ ಎಂದು ಹೇಳುವವರು ಆತ್ಮಹತ್ಯೆಗೆ ಯತ್ನಿಸಬಹುದು.. ನಟ ದರ್ಶನ್ ಅವರ ಹೇಳಿಕೆ ಗಮನಿಸಿದಾಗ ಜೈಲಿನಲ್ಲಿ ಅವರಿಗೆ ಕಿರುಕುಳ ಆಗುತ್ತಿರಬಹುದು.  ಜೈಲಿನ ಮನೋರೋಗ ತಜ್ಞರಿಂದ ಚಿಕಿತ್ಸೆಯ ಅಗತ್ಯವಿದೆ.  ಜೈಲಿನ ವಾತಾವರಣ ಅವರಿಗೆ ಈ ರೀತಿ ಹೇಳಿಕೆ ಹೇಳಿಸಲು ಕಾರಣವಾಗಿರಬಹುದು. ಮೊದಲು‌ ಹಾಗು ಎರಡನೇ ಬಾರಿಗೂ, ಈಗಿನ ಸ್ಥಿತಿಗೂ ಅವರಿಗೆ ಭಿನ್ನತೆ ಇದೆ.  ಅವರಿಗೆ ಜೈಲಿನೊಳಗೆ ಒಂದಷ್ಟು ಪ್ರತ್ಯೇಕ ಚಿಕಿತ್ಸೆಗೆ ಅವಕಾಶ ಸಿಗಬಹುದು ಎಂದು ಸಾಕಷ್ಟು ಜನ ಹೇಳುತ್ತಿದ್ದಾರೆ.

Kishor KV