ಡೆವಿಲ್ ಶೂಟಿಂಗ್‌ನಲ್ಲಿ ದಾಸ ಬ್ಯುಸಿ – ಥೈಲ್ಯಾಂಡ್‌ನಲ್ಲಿ ದರ್ಶನ್ ಲುಕ್ ವೈರಲ್!

ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಪಾಲಾದ ನಟ ದರ್ಶನ್ ಜಾಮೀನು ಪಡೆದು ಹೊರಬಂದಿದ್ರು.. ಜೈಲಿನಿಂದ ಆಚೆ ಬರ್ತಿದ್ದಂತೆ ಡೆವಿಲ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ. ಇದೀಗ ದಾಸ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಿದ್ದಾರೆ. ಡೆವಿಲ್ ಸಿನಿಮಾದ ಸಾಂಗ್ ಶೂಟಿಂಗ್ ನಡಿತಾ ಇದ್ದು, ಈ ವೇಳೆ ದರ್ಶನ್ ಜೊತೆ ವಿದೇಶಿಗರು ತೆಗೆಸಿಕೊಂಡಿರೋ ಫೋಟೋ ವೈರಲ್ ಆಗಿದೆ.
ಇದನ್ನೂ ಓದಿ: ಕೊಚ್ಚಿ ಬ್ಲೂ ಟೈಗರ್ಸ್ ತೆಕ್ಕೆಗೆ ಸಂಜು ಸ್ಯಾಮ್ಸನ್ – ಕೆಸಿಎಲ್ ಗೆ ಎಂಟ್ರಿಕೊಟ್ಟ ಸಂಜು ದುಬಾರಿ ಮೊತ್ತಕ್ಕೆ ಹರಾಜು
ನಟ ದರ್ಶನ್ ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ಥೈಲ್ಯಾಂಡ್‌ಗೆ ತೆರಳಿದ್ದಾರೆ. ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್ ಜೊತೆ ವಿದೇಶಕ್ಕೆ ತೆರಳಿದ್ದಾರೆ. ಇದೀಗ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ನಟಿ ರಚನಾ ರೈ ಜೊತೆ ದರ್ಶನ್ ಡ್ಯುಯೆಟ್ ಸಾಂಗ್ ಇದಾಗಿದೆ. ಇದೀಗ ದರ್ಶನ್ ಜೊತೆ ವಿದೇಶಿಗರು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದ್ದು, ಇದ್ರಲ್ಲಿ ದಾಸ ಹಸಿರು ಬಣ್ಣದ ಸೂಟ್ ಕಾಸ್ಟ್ಯೂಮ್‌ನಲ್ಲಿ ಮಿಂಚಿದ್ದಾರೆ.
ಇನ್ನು ಡೆವಿಲ್ ಹಾಡಿನ ಶೂಟಿಂಗ್ ನಾಲ್ಕೈದು ದಿನಗಳ ಕಾಲ ಥೈಲ್ಯಾಂಡ್‌ನ ಬ್ಯಾಂಕಾಕ್, ಫುಕೆಟ್, ಕ್ರಾಬಿಯಲ್ಲಿ ನಡೆಯಲಿದೆ. ಬಳಿಕ ಕೆಲ ದಿನ ದರ್ಶನ್ ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ದರ್ಶನ್ ಭಾರತಕ್ಕೆ ಮರಳುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.

ನೋಡಿರಿ

