ರಜತ್ ಮತ್ತು ಗಿಲ್ಲಿ ಕಾಟಕ್ಕೆ ನೊಂದ ಚೈತ್ರಾ ಕುಂದಾಪುರ – ಬಿಕ್ಕಿ ಬಿಕ್ಕಿ ಅತ್ತ ಚೈತ್ರಾಗೆ ಸಿಗುತ್ತಾ ನ್ಯಾಯ?

ರಜತ್ ಮತ್ತು ಗಿಲ್ಲಿ ಕಾಟಕ್ಕೆ ನೊಂದ ಚೈತ್ರಾ ಕುಂದಾಪುರ – ಬಿಕ್ಕಿ ಬಿಕ್ಕಿ ಅತ್ತ ಚೈತ್ರಾಗೆ ಸಿಗುತ್ತಾ ನ್ಯಾಯ?

ಬಿಗ್‌ಬಾಸ್ ಕನ್ನಡದಲ್ಲಿ ಚೈತ್ರಾ ಕುಂದಾಪುರ ಮಾತಿಗಿಳಿದರೆ ಎದುರಿಸುವುದು ತುಂಬಾ ಕಷ್ಟ. ಆದರೆ, ರಜತ್ ಮತ್ತು ಗಿಲ್ಲಿ ಒಂದಾದರೆ, ಯಾರಿಗೂ ಮಾತಾಡಲು ಅವಕಾಶವೇ ಸಿಗಲ್ಲ. ಇದೇ ಪರಿಸ್ಥಿತಿ ಚೈತ್ರಾ ಕುಂದಾಪುರ ಅವರಿಗೆ ಎದುರಾಗಿದೆ. ರಜತ್ ಮತ್ತು ಗಿಲ್ಲಿ ಕೊಟ್ಟ ಕಾಟಕ್ಕೆ ಚೈತ್ರಾ ಕುಂದಾಪುರ ದೇವರ ಮುಂದೆ ಕುಳಿತು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ರಕ್ಷಿತಾಳ R ಕೂಡ ನಿಮ್ಮಿಂದ ಆಗಲು ಸಾಧ್ಯವಿಲ್ಲ! – ಕಾಟ ಕೊಡಲು ಬಂದ ಧ್ರುವಂತ್‌ ಗೆ ರಕ್ಷಿತಾ ಕ್ಲಾಸ್!‌  

ಟಾಸ್ಕ್ ವಿಚಾರದಲ್ಲಿ ದೊಡ್ಮನೆಯಲ್ಲಿ ಸ್ಪರ್ಧಿಗಳ ಗಲಾಟೆ ಮಿತಿಮೀರಿದೆ. ಅದರಲ್ಲೂ ಚೈತ್ರಾ ಕುಂದಾಪುರ, ಅಶ್ವಿನಿ ಗೌಡ, ಕಾವ್ಯ, ರಾಶಿಕಾ ಮಾತಿನ ಭರಾಟೆ ವೀಕ್ಷಕರಿಗೂ ತೀರಾ ಕಿರಿಕಿರಿ ಉಂಟು ಮಾಡಿದೆ. ಇದರ ಮಧ್ಯೆ ಗಿಲ್ಲಿ ಮತ್ತು ರಜತ್ ಕೊಟ್ಟ ಕ್ವಾಟ್ಲೆಗೆ ಚೈತ್ರಾ ಕುಂದಾಪುರ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅದರಲ್ಲೂ ರಜತ್ ಹೇಳಿರುವ ಸುಳ್ಳಿ ಎಂಬ ಪದ ಚೈತ್ರಾ ಮನಸಿಗೆ ಸಿಕ್ಕಾಪಟ್ಟೆ ನೋವುಂಟು ಮಾಡಿದೆ. ಟಾಸ್ಕ್ ವಿಚಾರದಲ್ಲಿ ರಜತ್ , ಚೈತ್ರಾ ಕುಂದಾಪುರ ಮೇಲೆ ಆರೋಪಗಳ ಮಳೆ ಸುರಿಸಿದರು. ಸಿಕ್ಕಾಪಟ್ಟೆ ಸುಳ್ಳು ಹೇಳುತ್ತಾರೆ, ಆಟದಲ್ಲಿ ಮೋಸ ಮಾಡುತ್ತಾರೆ ಎಂದು ಆರೋಪ ಮಾಡಿದರು.

ಈ ಮೊದಲು ಚೈತ್ರಾ ಕುಂದಾಪುರ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಕಳೆದ ಸೀಸನ್ ನಲ್ಲಿ ನಾಟಕ ಮಾಡಿ, ಸುಳ್ಳು ಹೇಳಿ ಟೀಕೆಗೆ ಗುರಿ ಆಗಿದ್ದರು. ಈ ಬಾರಿ ಕೂಡ ಅವರ ಮೇಲೆ ಸುಳ್ಳಿ ಎಂಬ ಆರೋಪ ಬಂದಿದೆ. ಮೋಸದಿಂದ ಆಟ ಆಡುತ್ತಾರೆ ಎಂದು ಕೂಡ ಆರೋಪಿಸಲಾಗಿದೆ. ಇದನ್ನೆಲ್ಲ ಸಹಿಸಿಕೊಳ್ಳಲಾಗದೇ ಚೈತ್ರಾ ಕುಂದಾಪುರ ಅವರು ದೇವರ ಮುಂದೆ ಹೋಗಿ ಕಣ್ಣೀರು ಹಾಕಿದ್ದಾರೆ. ಟಾಸ್ಕ್ ಆಡುವಾಗ ಚೈತ್ರಾ ಕುಂದಾಪುರ ಅವರು ಕೆಲವು ನಿಯಮ ಮುರಿದರು. ಅದನ್ನು ಉಸ್ತುವಾರಿ ರಾಶಿಕಾ ಶೆಟ್ಟಿ ಅವರು ಪ್ರಶ್ನಿಸಿದಾಗ ಆ ನಿಯಮ ಗೊತ್ತಿರಲಿಲ್ಲ ಎಂದು ಚೈತ್ರಾ ವಾದ ಮಾಡಿದರು. ಹಾಗಾಗಿ ಚೈತ್ರಾ ಕುಂದಾಪುರ ಅವರು ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಲಾಯಿತು. ಅಲ್ಲದೇ ರಜತ್ ಅವರು ಇಂಥ ಸುಳ್ಳುಗಳನ್ನೇ ಟಾರ್ಗೆಟ್ ಮಾಡಿದ್ದಾರೆ. ರಜತ್ ಮತ್ತು ಗಿಲ್ಲಿ ಅವರು ಒಟ್ಟಿಗೆ ಸೇರಿ ಚೈತ್ರಾ ಕುಂದಾಪುರ ಅವರನ್ನು ರೇಗಿಸಿದ್ದಾರೆ. ಈ ಸೀಸನ್ ವಿಚಾರ ಮಾತ್ರವಲ್ಲದೇ ಕಳೆದ ಸೀಸನ್​​ನ ವಿವಾದಗಳನ್ನು ಕೂಡ ಇಟ್ಟುಕೊಂಡು ಟ್ರೋಲ್ ಮಾಡಲಾಗಿದೆ. ಗಿಲ್ಲಿ ಆಡಿದ ಮಾತುಗಳನ್ನು ಕೇಳಿ ಚೈತ್ರಾ ಕುಂದಾಪುರ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದಾರೆ.  ನನ್ನ ವಿಷಯಕ್ಕೆ ನೀನು ಬರಬೇಡ, ನಿನ್ನ ವಿಚಾರಕ್ಕೆ ನಾನು ಬರಲ್ಲ  ಎಂದು ಗಿಲ್ಲಿಗೆ ಚೈತ್ರಾ ಎಚ್ಚರಿಕೆ ನೀಡಿದ್ದಾರೆ.

ಗಿಲ್ಲಿ,ರಜತ್, ರಾಶಿಕಾ ಮಾತಿನ ದಾಳಿಗೆ ನೊಂದ ಚೈತ್ರಾ ಕುಂದಾಪುರ ಕುಗ್ಗಿ ಹೋಗಿದ್ದಾರೆ. ದೇವರ ಮುಂದೆ ನಿಂತು ಏನೇನೋ ಪ್ರಾರ್ಥನೆ ಮಾಡಿಕೊಂಡು ಕಣ್ಣೀರು ಸುರಿಸಿದ್ದಾರೆ. ಇದು ಕೂಡ ಡ್ರಾಮಾ ಎಂದು ರಾಶಿಕಾ ಮುಂತಾದವರು ಹೇಳಿದ್ದಾರೆ. ಹಿಂದಿನ ದಿನವಷ್ಟೇ ರಜತ್ ಅವರನ್ನು ಪ್ರೀತಿಯಿಂದ ಬುಜ್ಜಿ ಎಂದು ಕರೆದ ಚೈತ್ರಾ, ಮರುದಿನ ರಜತ್ ಅವರ ಬಾಯಿಂದ ಸುಳ್ಳಿ ಎಂದು ಹೇಳಿಸಿಕೊಂಡಿದ್ದಾರೆ. ಇದು ಚೈತ್ರಾ ಕುಂದಾಪುರ ಅವರ ಕಣ್ಣೀರಿಗೆ ಕಾರಣವಾಗಿದೆ.

Sulekha