“ಉತ್ತಮ” ಚೈತ್ರಾ OUT.. ಭವ್ಯಾ ಮೋಸ ಮಾಡಿದ್ರೂ ಓಕೆನಾ? – ಕಿಚ್ಚ ಬೈದ್ರೂ ಬಿಗ್ ಬಾಸ್ ಗೆ ಗೊತ್ತಾಗಲ್ವಾ?
ಜಸ್ಟ್ ಎರಡೇ ಎರಡು ವಾರ ಇತ್ತು.. ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ.. ಈ ಹೊತ್ತಲ್ಲೇ ಚೈತ್ರಾ ಕುಂದಾಪುರ ಔಟ್ ಆಗಿದ್ದಾರೆ.. ಫಿನಾಲೆಗೆ ಹೋಗುವ ಕನಸು ಕಂಡಿದ್ದ ಫ್ರೈರ್ ಬ್ರಾಂಡ್ ಕನಸು ನುಚ್ಚು ನೂರಾಗಿದೆ. ಮನೆಯಿಂದ ಆಚೆ ಬರ್ತಿದ್ದಂತೆ ಸುದೀಪ್ ಮುಂದೆ ಕಣ್ಣಿರು ಹಾಕಿದ್ದಾರೆ.. ಚೈತ್ರಾ ಮನೆಯಿಂದ ಆಚೆ ಬರ್ತಿದ್ದಂತೆ ವೀಕ್ಷಕರು ಅಸಮಧಾನ ಹೊರ ಹಾಕಿದ್ದಾರೆ.. ಅಷ್ಟಕ್ಕೂ ಚೈತ್ರಾ ಕುಂದಾಪುರಗೆ ಮೋಸ ಆಯ್ತಾ? ಭವ್ಯ ಬಿಗ್ ಬಾಸ್ ಮನೆಯಿಂದ ಆಚೆ ಹೋಗ್ಬೇಕು ಅಂತಾ ಚರ್ಚೆ ನಡಿತಿರೋದು ಯಾಕೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸರಿಗಮ ವಿಜಯ್ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು
ಬಿಗ್ ಬಾಸ್ ಸೀಸನ್ 11 ಆರಂಭದಿಂದಲೂ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಭಾರಿ ಸದ್ದು ಮಾಡಿದ್ರು.. ದೊಡ್ಮನೆಯಲ್ಲಿ ಸಹಸ್ಪರ್ಧಿಗಳನ್ನು ಎದುರು ಹಾಕಿಕೊಂಡ ಈ ಡೇರಿಂಗ್ ಗರ್ಲ್, ನಾನು ಯಾರಿಗೂ ಹೆದ್ರೋದಿಲ್ಲ.. ಅನ್ನೋದನ್ನ ತನ್ನ ಆಟದ ಮೂಲಕವೇ ತೋರಿಸಿಕೊಟ್ಟಿದ್ರು. ಆಟ ಅಂತ ಬಂದಾಗ ಕುಗ್ಗದೇ ಮುನ್ನುಗುತ್ತಿದ್ರು.. ಆದ್ರೆ ಆಕೆಗೆ ಮಾತೇ ಮುಳುವಾಗಿತ್ತು.. ಹೆಚ್ಚು ಮಾತಾಡ್ತಾರೆ ಅಂತ ದೊಡ್ಮನೆಯಲ್ಲಿ ಕಂಪ್ಲೇಂಟ್ ಕೂಡ ಇತ್ತು.. ಇದ್ರಿಂದಾಗಿ ಚೈತ್ರಾ ಕುಗ್ಗುತ್ತಾ ಬಂದಿದ್ರು.. ಎಲ್ರೂ ನನಗೆ ಕಳಪೆ ಪಟ್ಟ ಕೊಡ್ತಾರೆ ಎಂಬ ಕೊರಗು ಚೈತ್ರಾಗೆ ಕಾಡೋದಕ್ಕೆ ಶುರುವಾಗಿತ್ತು.. ಆ ಹೊತ್ತಲ್ಲೇ ಆಕೆಗೆ ಎನರ್ಜಿ ಸಿಕ್ಕಿದ್ದು ಫ್ಯಾಮಿಲಿ ರೌಂಡ್ ನಲ್ಲಿ.. ದೊಡ್ಮನೆಗೆ ಬಂದ ಚೈತ್ರಾ ತಾಯಿ ಆಕೆಗೆ ‘ಉತ್ತಮ’ ಪಟ್ಟ ನೀಡಿ, ಫುಲ್ ಜೋಶ್ ತುಂಬಿದ್ದರು. “ಅಮ್ಮ ಬಂದು ಹೋಗಿದ್ದು ನನಗೆ ಜಾಸ್ತಿ ಎನರ್ಜಿ ಸಿಕ್ಕಂತೆ ಆಗಿದೆ” ಎಂದು ಹೇಳಿಕೊಂಡಿದ್ದರು ಚೈತ್ರಾ. ಈ ವಾರ ಉತ್ತಮ ಪಟ್ಟ ಬೇರೆ ಸಿಕ್ಕಿತ್ತು.. ಆದರೆ ಇಷ್ಟೆಲ್ಲಾ ಆಗೋದ್ರೊಳಗೆ ಚೈತ್ರಾಗೆ ಮಾತ್ರವಲ್ಲ ವೀಕ್ಷಕರಿಗೂ ಶಾಕ್ ಎದುರಾಗಿದೆ.. ಈ ವಾರ ಚೈತ್ರಾ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯ ಜರ್ನಿ ಮುಗಿಸಿದ್ದಾರೆ.
ಹೌದು ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಆಟಕ್ಕೆ ಬ್ರೇಕ್ ಬಿದ್ದಿದೆ. ಮನೆಯವರೆಲ್ಲಾ ಚೈತ್ರಾ ಅವರನ್ನೇ ಪದೇ ಪದೇ ಟಾರ್ಗೆಟ್ ಮಾಡಿದ್ರೂ ಕುಗ್ಗದ ಚೈತ್ರಾ, ಫೈರ್ ಬ್ರ್ಯಾಂಡ್ ಈಸ್ ಬ್ಯಾಕ್ ಎನ್ನುತ್ತಲೇ ಅಬ್ಬರ ಆಟ ಆಡಿದ್ರು. ಬಿಗ್ ಬಾಸ್ ಸೀಸನ್ 11ರಲ್ಲಿ ಅತಿ ಹೆಚ್ಚು ಕಳಪೆ ಬೋರ್ಡ್ ಪಡೆದು ಅನೇಕ ಬಾರಿ ಜೈಲು ಸೇರಿದ್ರು. ನಾನು ಕಳಪೆ ಅಲ್ಲ ಅಂತ ಸಾಬೀತು ಪಡಿಸಿಕೊಳ್ಳಲು ಸ್ಟ್ರಾಂಗ್ ಆಗಿಯೇ ಆಡ್ತಿದ್ದ ಚೈತ್ರಾ ಈ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ .
ಮಾತಿನ ಮಲ್ಲಿ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯೊಳಗೆ ಆಟ ಹಾಗೂ ಆವೇಷದ ಮಾತುಗಳನ್ನು ಹೊರತುಪಡಿಸಿ ಮನರಂಜನೆಯನ್ನು ಸಹ ನೀಡಿ ಪ್ರೇಕ್ಷಕರ ಹೃದಯ ಗೆದ್ದಿದ್ರು. ಫಿನಾಲೆಗೆ ಇನ್ನೆರಡು ವಾರ ಇರುವಾಗ್ಲೆ ನಟಿ ಚೈತ್ರಾ ಕುಂದಾಪುರ ಆಟ ನಿಲ್ಲಿಸಿ ಹೊರ ನಡೆದಿದ್ದಾರೆ.
ಈ ವಾರ ಧನರಾಜ್ ಆಚಾರ್, ಮೋಕ್ಷಿತಾ ಪೈ, ಭವ್ಯ , ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ್ ನಾಮಿನೇಟ್ ಆಗಿದ್ರು.. ಈ ಐವರಲ್ಲಿ ಚೈತ್ರಾ ಕಡಿಮೆ ವೋಟ್ ಪಡೆದ ಹಿನ್ನೆಲೆ ಮನೆಯಿಂದ ಹೊರಗೆ ಹೋಗಿದ್ದಾರೆ. ಎಲಿಮಿನೇಟ್ ಆದ ಚೈತ್ರಾ ಇನ್ಮುಂದೆ ನನ್ನ ಮಾತಿನ ಕಿರಿಕಿರಿ ಇರೋದಿಲ್ಲ ಎನ್ನುತ್ತಾ ಕಣ್ಣೀರು ಹಾಕಿದ್ದಾರೆ. ನಾನು ಹೆಚ್ಚು ಮಾತಾಡಿ ನಿಮಗೆಲ್ಲಾ ಬೋರ್ ಮಾಡಲ್ಲ. ನನಗೆ ಈ ಮನೆಯ ಅನ್ನದ ಋಣ ಮುಗಿದಿದ್ದು, ಹೊರಗೆ ಹೋಗ್ತಿದ್ದೇನೆ ಎಂದು ಕಣ್ಣೀರಿಡುತ್ತಾ ಚೈತ್ರಾ ಹೊರಗೆ ಬಂದ್ರು. ಇನ್ನು ವೇದಿಕೆಯಲ್ಲಿ ವಿಟಿ ತೋರಿಸಿದಾಗಲೂ ಚೈತ್ರಾ ಅತ್ತಿದ್ರು.. ಅದನ್ನು ಗಮನಿಸಿದ ಕಿಚ್ಚ ಸುದೀಪ್, ಚೈತ್ರಾ ಅವರ ಬಳಿ ಬಂದು ಕಣ್ಣೀರು ಒರೆಸಿದ್ರು..
ಇನ್ನು ವೀಕ್ಷಕರು ಬಿಗ್ ಬಾಸ್ ಮೇಲೆ ಅಸಮಧಾನ ಹೊರ ಹಾಕ್ತಿದ್ದಾರೆ.. ಚೈತ್ರಾ ಚೆನ್ನಾಗಿ ಆಟ ಆಡ್ತಿದ್ರು.. ಭವ್ಯ ಬರೀ ಮೋಸ ಮಾಡಿ ಆಟ ಗೆಲ್ತಿದ್ರು.. ಚೈತ್ರಾ ಹೆಚ್ಚು ಮಾತಾಡ್ತಿದ್ರು ಟಾಸ್ಕ್ ವಿಚಾರದಲ್ಲಿ ಮೋಸ ಮಾಡಿರ್ಲಿಲ್ಲ.. ಭವ್ಯಳನ್ನು ಯಾಕೆ ಎಲಿಮಿನೇಟ್ ಮಾಡಿಲ್ಲ ಅಂತ ಪ್ರಶ್ನೆ ಮಾಡ್ತಿದ್ದಾರೆ.. ಇನ್ನು ಭವ್ಯ ಗೌಡ ಟಾಸ್ಕ್ ವೇಳೆ ಹನುಮಂತು ಮೇಲೆ ಕೈ ಮಾಡಿದ್ರು.. ಇನ್ನು ಸುದೀಪ್ ಕೂಡ ಶನಿವಾರ ಈ ಬಗ್ಗೆ ಮಾತನಾಡಿದ್ರು.. ನಾನಾದ್ರೆ ಕೈ ಮಾಡಿದ್ದಕ್ಕೆ ಮನೆಯಿಂದ ಆಚೆ ಹಾಕ್ತಿದ್ದೆ.. ಆಕೆ ಮಾಡಿದ್ದು ತಪ್ಪು.. ಬಿಗ್ ಬಾಸ್ ಯಾಕೆ ಉಳಿಸಿಕೊಂಡ್ರು ಗೊತ್ತಿಲ್ಲ ಅಂತಾ ಹೇಳಿದ್ದಾರೆ.. ಇನ್ನು ಸೋಶಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಚರ್ಚೆ ಆಗ್ತಿದೆ.. ಆಕೆಯನ್ನ ಯಾಕೆ ಮನೆಗೆ ಕಳುಹಿಸಿಲ್ಲ.. ಬೇರೆಯವರಿಗೊಂದು ನ್ಯಾಯ ಈಕೆಗೊಂದು ನ್ಯಾಯಾನಾ? ಭವ್ಯ ಬಿಗ್ ಬಾಸ್ ನ ಸೋದರ ಮಾವನ ಮಗಳು.. ಕಲರ್ಸ್ ಕನ್ನಡದ ದತ್ತು ಪುತ್ರಿ ಅಂತಾ ಟ್ರೋಲ್ ಮಾಡ್ತಿದ್ದಾರೆ..