ಅಪ್ಪನನ್ನೇ ಮದ್ವೆಗೆ ಕರೆಯದ ಚೈತ್ರಾ ಕುಂದಾಪುರ – ರಾಶಿ ರಾಶಿ ದುಡ್ಡಿನ ಗುಟ್ಟು ರಟ್ಟು?
ಮಗಳು, ಅಳಿಯ ಕಳ್ಳ-ಕಳ್ಳಿ ಎಂದಿದ್ಯಾಕೆ?

ಅಪ್ಪನನ್ನೇ ಮದ್ವೆಗೆ ಕರೆಯದ ಚೈತ್ರಾ ಕುಂದಾಪುರ – ರಾಶಿ ರಾಶಿ ದುಡ್ಡಿನ ಗುಟ್ಟು ರಟ್ಟು?ಮಗಳು, ಅಳಿಯ ಕಳ್ಳ-ಕಳ್ಳಿ ಎಂದಿದ್ಯಾಕೆ?

ಚೈತ್ರಾ ಕುಂದಾಪುರ.. ಫೈರ್ ಬ್ರ್ಯಾಂಡ್ ಭಾಷಣಕಾರ್ತಿ ಎಂದೇ ಕರೆಸಿಕೊಳ್ಳುತ್ತಿದ್ದ ಈಕೆ ವಂಚನೆ ಕೇಸ್‌ನಲ್ಲಿ ಜೈಲು ಪಾಲಾಗಿದ್ರು. ಅದಾದ್ಮೇಲೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಗೂ ಎಂಟ್ರಿ ಕೊಟ್ಟಿದ್ರು.. ಬಳಿಕ ಬಾಯ್ಸ್‌ ವರ್ಷಸ್‌ ಗರ್ಲ್‌ ಶೋನಲ್ಲೂ ಭಾಗಿಯಾಗಿದ್ದ ಚೈತ್ರಾ ಶೋ ಮುಗಿಯುತ್ತಿದ್ದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು.. ಶ್ರೀಕಾಂತ್‌ ಕಶ್ಯಪ್‌ ಜೊತೆ ಮದುವೆ ಮಾಡಿಕೊಂಡಿದ್ರು. ಮದುವೆಯಾದ ಖುಷಿಯಲ್ಲಿದ್ದ ಚೈತ್ರಾಗೆ ತಂದೆ ಶಾಕ್‌ ಕೊಟ್ಟಿದ್ದಾರೆ. ಮದುವೆ ಬೆನ್ನಲೇ  ಚೈತ್ರಾ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ ಚೈತ್ರಾ ಕುಂದಾಪುರ ತಂದೆ ಬಾಲಕೃಷ್ಣ ನಾಯ್ಕ್‌. ಚೈತ್ರಾ ನನ್ನನ್ನ ಮದುವೆಗೆ ಕರೆದಿಲ್ಲ.. ಚೈತ್ರಾ ಹಾಗೂ ಆಕೆಯ ಗಂಡ ಇಬ್ಬರೂ ದೊಡ್ಡ ಕಳ್ಳರು ಎಂದು ಆರೋಪಿಸಿದ್ದಾರೆ.

ಚೈತ್ರಾ ಕುಂದಾಪುರ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. 12 ವರ್ಷಗಳ ಕಾಲ ಪ್ರೀತಿಸುತ್ತಿದ್ದ ಶ್ರೀಕಾಂತ್‌ ಕಶ್ಯಪ್‌ ಜೊತೆ ಸರಳವಾಗಿ ಮದುವೆ ಆಗಿದ್ರು. ಮದುವೆ ದಿನ ಬಿಗ್‌ ಬಾಸ್‌ ಸ್ಪರ್ಧಿ ರಜತ್‌ ಚೈತ್ರಾಳ ಅಣ್ಣನ ಸ್ಥಾನದಲ್ಲಿ ನಿಂತು ಮದುವೆ ಶಾಸ್ತ್ರಗಳನ್ನು ನೆರವೇರಿಸಿದ್ದರು. ಆದ್ರೆ ಮದುವೆಯಲ್ಲಿ ಚೈತ್ರಾ ಕುಂದಾಪುರ ತಂದೆ ಎಲ್ಲೂ ಕಾಣಿಸಿರ್ಲಿಲ್ಲ.. ಅನೇಕರು ಚೈತ್ರಾ ಕುಂದಾಪುರ ಮದುವೆಗೆ ತಂದೆ ಬಂದಿಲ್ವಾ ಅಂತಾ ಕೇಳಿದ್ರು. ಆದ್ರೀಗ ಚೈತ್ರ ಕುಂದಾಪುರ ತಂದೆ ಬಾಲಕೃಷ್ಣ ನಾಯ್ಕ್ ಮಗಳ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ. ನನ್ನ ಮಗಳು ಹಾಗೇ ಅವಳ ಗಂಡ ಇಬ್ಬರು ದೊಡ್ಡ ಕಳ್ಳರು. ದುಡ್ಡು ಇಲ್ಲ ಅಂದಿದ್ದಕ್ಕೆ ನನ್ನನ್ನ ಮದುವೆಗೆ ಕರ್ದಿಲ್ಲ ಅಂತಾ ಆರೋಪ ಮಾಡಿದ್ದಾರೆ.

ಚೈತ್ರಾ ಕುಂದಾಪುರ ತಂದೆ ಬಾಲಕೃಷ್ಣ ನಾಯ್ಕ್‌ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. ನಾನು ಹೊಟೇಲ್‌ ನಲ್ಲಿ ಕೆಲಸ ಮಾಡ್ತಿದ್ದೇನೆ. ಚೈತ್ರಾ ಮದುವೆಗೂ ಮುನ್ನ ನನ್ನ ಬಳಿ ದುಡ್ಡು ಕೇಳಿದ್ದಳು. ನಾನು ಹಣ ಕೊಟ್ಟಿಲ್ಲ.. ಹೀಗಾಗಿ ನನ್ನನ್ನು ದೂರವಿಟ್ಟಿದ್ದಾರೆ.. ಆಕೆ ನನ್ನನ್ನ ಮದುವೆಗೆ ಕರ್ದಿಲ್ಲ. ನಾನೂ ಮದುವೆಗೆ ಹೋಗಿಲ್ಲ. ಈ ಮದುವೆಯನ್ನು ನಾನು ಒಪ್ಪಲ್ಲ ಎಂದಿದ್ದಾರೆ.. ಇದಿಷ್ಟೇ ಅಲ್ಲದೇ ಚೈತ್ರಾ ಮತ್ತು ಆಕೆಯ ಗಂಡ ಶ್ರೀಕಾಂತ್ ಇಬ್ಬರು ಕಳ್ಳರು ಅವರಿಗೆ ಮಾನ-ಮರ್ಯಾದೆ ಇಲ್ಲ.  ಚೈತ್ರಾ ಮತ್ತು ನನ್ನ ಪತ್ನಿ ಹಣದ ಆಸೆಗಾಗಿ ನನ್ನನ್ನು ದೂರವಿಟ್ಟಿದ್ದಾರೆ. ನಾನು ಕಟ್ಟಿದ ಮನೆಯಲ್ಲಿ ಈಗ ನಾನೇ ಅನಾಥನಾಗಿದ್ದೇನೆ  ಎಂದು ಬಾಲಕೃಷ್ಣ ನಾಯ್ಕ್ ಭಾವುಕರಾಗಿ ಹೇಳಿದ್ದಾರೆ.

ಇನ್ನು ಚೈತ್ರಾ ಕುಂದಾಪುರ, ಕರಾವಳಿ ಮೂಲದ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬುವವರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಚೈತ್ರಾ ಜೈಲು ಪಾಲಾಗಿದ್ರು. ಈ  ಕೇಸ್ ಬಗ್ಗೆಯೂ ಬಾಲಕೃಷ್ಣ ನಾಯ್ಕ್‌‌ ಮಾತನಾಡಿದ್ದಾರೆ. ಚೈತ್ರಾ ಕುಂದಾಪುರ ಹಣ ಹಂಚಿಕೊಂಡಿದ್ದಾರೆ . ಪಡ್ಡೆ ಹುಡುಗರ ಹೆಸರಿನಲ್ಲಿ ಬೇರೆ ಬೇರೆ ಬ್ಯಾಂಕುಗಳಲ್ಲಿ ಡೆಪಾಸಿಟ್ ಇಟ್ಟಿದ್ದಳು. ಬಾಂಡ್ ಮೇಲೆ ಸಾಲ ಪಡೆದಿದ್ದಳು ಎಂದು ಅವರು ಆರೋಪಿಸಿದ್ದಾರೆ. ಇದರ ಜೊತೆಗೆ, ಚೈತ್ರಾ ತನ್ನ ಸ್ವಂತ ಹಣದಿಂದ ಸೈನಿಕರಿಗೆ ಸಹಾಯ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ ಆದರೆ ಮೋಸದ ಹಣದಿಂದ ಕೊಟ್ಟರೆ ಅದರಿಂದ ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ ಚೈತ್ರಾ ಕೆಟ್ಟ ಕೆಲಸಗಳಿಗೆ ಆಕೆಯ ತಾಯಿ ಬೆಂಬಲ ನೀಡಿದ್ದಾರೆ. ನನ್ನ ಹೆಂಡತಿಗೆ ಗೌರವ ಬೇಕಾಗಿಲ್ಲ.. ದಡ್ಡಿದ್ರೆ ಸಾಕು. ಮನೆಯಲ್ಲಿ ರಾಶಿ ರಾಶಿ ದುಡ್ಡು ತಂದು ಹಾಕಿದಾಗಲೂ ಮಗಳಿಗೆ ಬುದ್ದಿ ಹೇಳಿಲ್ಲ. ಹಣಕ್ಕಾಗಿ ಚೈತ್ರಾಗೆ ಸಪೋರ್ಟ್ ಮಾಡ್ತಿದ್ದಾಳೆ. ಚೈತ್ರಾ  ಬಿಗ್ ಬಾಸ್‌ಗೆ ಹೋಗುವಾಗಲೂ ನನಗೆ ತಿಳಿಸಿಲ್ಲ. ನನ್ನ ಪತ್ನಿ ನನ್ನನ್ನು ಜಗಲಿಯಲ್ಲಿ ಕೂಡಿ ಹಾಕಿ ಬಿಗ್ ಬಾಸ್‌ಗೆ ಹೋಗಿದ್ದಳು ಎಂದು ಶಾಕಿಂಗ್ ಮಾಹಿತಿ ಬಿಚ್ಚಿಟ್ಟಿದ್ದಾರೆ.

ದರೋಡೆ ಮಾಡೋದು, ದೇಶಕ್ಕೆ ದ್ರೋಹ, ವಂಚನೆ ಮಾಡೋದೇ ಇವರ ಕಸುಬು. ನಮ್ಮ ಕುಟುಂಬದ ಮಾನ, ಮರ್ಯಾದೆಯನ್ನು ತೆಗೆದಿದ್ದಾರೆ.  ಅವಳು ಎಂದಿಗೂ ಉದ್ಧಾರ ಆಗಲ್ಲ. ಅವರು ಮಾಡೋ ಕೆಟ್ಟ ಕೆಲಸಗಳಿಗೆ ನಾನು ಒಪ್ಪಿಗೆ ಕೊಡಲಿಲ್ಲ. ಅವರು ಮೋಸ, ವಂಚನೆ ಮಾಡ್ತಾರೆ. ನಾನು ಸತ್ಯ, ನ್ಯಾಯ, ಧರ್ಮದಲ್ಲಿ ಇರುವವನು ಎಂದು ಹೇಳಿದ್ದಾರೆ.

ಇನ್ನು ತಂದೆಯ ಆರೋಪದ ಬೆನ್ನಲ್ಲೇ ಚೈತ್ರಾ ಕುಂದಾಪುರ ಬಾಲಕೃಷ್ಣ ನಾಯ್ಕ್‌ ಅವರನ್ನ ಕುಡುಕ ಎಂದಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಸ್ಟೋರಿ ಚೈತ್ರಾ ಸ್ಟೋರಿ ಹಾಕಿದ್ದಾರೆ. ಕುಡುಕ ತಂದೆಯ ಚಿತ್ರಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು. ಎಂತಹ ಮಕ್ಕಲಿಗೂ ಕುಡುಕ ತಂದೆ ಸಿಗ್ಬಾರ್ದು. ಎರಡು ಕ್ವಾಟರ್‌ ನಾನು ಕೊಟ್ರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗ್ತಾರೆ ಅಂತಾ ಬರೆದುಕೊಂಡಿದ್ದಾರೆ.  ಇದೀಗ ಚೈತ್ರಾ ಕುಂದಾಪುರ ಮದುವೆ ಬೆನ್ನಲ್ಲೇ ತಂದೆ ಮಗಳ ಜಿದ್ದಾಜಿದ್ದಿ ಹೊರ ಬಂದಿದೆ. ಚೈತ್ರಾ ವಿರುದ್ಧ ಬಾಲಕೃಷ್ಣ ನಾಯ್ಕ್‌ ಮಾಡಿರುವ ಆರೋಪ ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

Shwetha M

Leave a Reply

Your email address will not be published. Required fields are marked *