ಬಂಧನದ ವೇಳೆ ಕೈ ಬಳೆ ಒಡೆದುಕೊಂಡು, ಉಂಗುರ ನುಂಗಲು ಯತ್ನ – ಪೊಲೀಸ್ ಜೀಪಿನಲ್ಲಿಯೂ ಚೈತ್ರಾ ಕುಂದಾಪುರ ಹೈಡ್ರಾಮಾ
ಚುನಾವಣೆಗೆ ಟಿಕೆಟ್ ಕೊಡಿಸುತ್ತೇನೆ. ಎಂಎಲ್ಎ ಆಗಬಹುದು ಎನ್ನುವ ಆಸೆ ತೋರಿಸಿ ಉದ್ಯಮಿಗೆ ವಂಚಿಸಿದ್ದ ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಈಗಾಗಲೇ ಅರೆಸ್ಟ್ ಆಗಿದ್ದಾಳೆ. ಸಿನಿಮೀಯ ಶೈಲಿಯಲ್ಲಿ ಮಂಗಳವಾರ ರಾತ್ರಿ ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಶ್ರೀಕಾಂತ್ ನಾಯಕ್ ಪೆಲತ್ತೂರು ಮತ್ತು ಚೈತ್ರಾ ಕುಂದಾಪುರ ಅವರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ವಿಧಾನಸಭಾ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ₹5 ಕೋಟಿ ವಂಚನೆ – ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅರೆಸ್ಟ್
ಪೊಲೀಸರ ಬಂಧನದ ವೇಳೆ ಚೈತ್ರಾ ಕುಂದಾಪುರ ಹೈಡ್ರಾಮಾ ಮಾಡಿದ್ದಾಳೆ. ಕೈಬಳೆ ಒಡೆದುಕೊಂಡು, ಉಂಗುರ ನುಂಗಲು ಯತ್ನಿಸಿದ್ದಾಳೆ. ಈ ವೇಳೆ ಪೊಲೀಸರು ತಡೆದಿದ್ದಾರೆ. ಅಷ್ಟು ಮಾತ್ರವಲ್ಲದೆ ಪೊಲೀಸರು ಆಕೆಯನ್ನು ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ಕರೆದೊಯ್ಯುತ್ತಿದ್ದಾಗ ದಾರಿಯುದ್ದಕ್ಕೂ ರಂಪಾಟ ನಡೆಸಿರುವುದು ತಿಳಿದು ಬಂದಿದೆ. ಪೊಲೀಸ್ ವಾಹನದ ಗಾಜು ಒಡೆಯಲು ಯತ್ನಿಸಿ ಹೈಡ್ರಾಮ ಮಾಡಿದ್ದಾಳೆ. ಆತ್ಮಹತ್ಯೆ ಮಾಡುವುದಾಗಿ ಉಂಗುರ ನುಂಗಲು ಪ್ರಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ. ಚೈತ್ರಾಳ ನಾಟಕಕ್ಕೆ ಸೊಪ್ಪು ಹಾಕದ ಸಿಸಿಬಿ ಪೊಲೀಸರು ಆಕೆಯನ್ನು ಕಾರಿನಲ್ಲಿ ಬೆಂಗಳೂರಿನತ್ತ ಕರೆದುಕೊಂಡು ಹೋಗಿದ್ದಾರೆ.
ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬುವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ವಂಚಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಉಡುಪಿಯಲ್ಲಿ ಸಿಸಿಬಿ ಟೀಂ, ಚೈತ್ರಾ ಹಾಗೂ ಶ್ರೀಕಾಂತ್ ನಾಯಕ್ನನ್ನು ಬಂಧಿಸಿ ಬೆಂಗಳೂರಿಗೆ ಕರೆ ತಂದು ಸಂಜೆ ಜಡ್ಜ್ ಮುಂದೆ ಹಾಜರುಪಡಿಸಲಿದ್ದಾರೆ.