ಸಿಂಗಲ್ ಸಿಂಹ ಅಂತೆ ಚೈತ್ರಾ ಕುಂದಾಪುರ – ಮಾತಿನ ಮಲ್ಲಿಯ ಸವಾಲ್ಗೆ ಹೆದರಿದ್ರಾ ಐಶ್, ಶಿಶಿರ್?
ಕಳೆದ ಭಾನುವಾರ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡ ಮೇಲೆ ಚೈತ್ರಾ ಕುಂದಾಪುರ ಸೈಲೆಂಟ್ ಆಗಿದ್ದರು. ಎರಡೂ ದಿನ ಕಳೆದರೂ ಚೈತ್ರಾ ಕಣ್ಣೀರು ಮುಗಿದಿರಲಿಲ್ಲ. ಈಗ ಮತ್ತೆ ಟಾಸ್ಕ್ ವಿಚಾರಕ್ಕೆ ಚೈತ್ರಾ ಭರ್ಜರಿ ಆಟ ಆಡ್ತಿದ್ದಾರೆ. ಸಿಂಗಲ್ ಸಿಂಹ ಅಂತಾ ತನ್ನನ್ನೇ ಕರೆದುಕೊಂಡು ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ.
ಇದನ್ನೂ ಓದಿ:‘ಪುಷ್ಪ 2’ ಸಿನಿಮಾ ಟಿಕೆಟ್ ದರ ಹೆಚ್ಚಳ ಸಾಧ್ಯತೆ – ಅಲ್ಲು ಅರ್ಜುನ್ ಅಭಿಮಾನಿಗಳ ಅಸಮಾಧಾನ
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಈ ವಾರ ಹೊಸ ಟಾಸ್ಕ್ ನೀಡಲಾಗಿದೆ. ಸ್ಪರ್ಧಿಗಳಿಗೆ ಹಣ ನೀಡಲಾಗುತ್ತದೆ. ಇದನ್ನು ಅವರು ಕಾಪಾಡಿಕೊಂಡಿರಬೇಕು. ಆದರೆ, ಚೈತ್ರಾ ಅವರನ್ನೇ ಯಾಮಾರಿಸಿ ಹಣವನ್ನು ಕಸಿದುಕೊಂಡು ಹೋಗಲಾಗಿದೆ. ಇದಕ್ಕೆ ಚೈತ್ರಾ ಅವರು ತಿರುಗೇಟು ನೀಡಿದ್ದಾರೆ. ‘ನಾನು ಸಿಂಗಲ್ ಸಿಂಹ ರೀತಿ ಬರ್ತೀನಿ’ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಚೈತ್ರಾ ಕುಂದಾಪುರ ಪಕ್ಕದಲ್ಲೇ ಕುಳಿತಿದ್ದ ಐಶ್ವರ್ಯಾ ಅವರನ್ನೇ ಯಾಮಾರಿಸಿದ್ದರು. ಸೈಲೆಂಟ್ ಆಗಿ ಪಾಯಿಂಟ್ಸ್ ಕದ್ದು ಪರಾರಿ ಆಗಿದ್ದರು. ಇದರಿಂದಾಗಿ ಪಾಯಿಂಟ್ಸ್ ಅನ್ನು ಸ್ಪರ್ಧಿಗಳು ಕತ್ತಿನಲ್ಲಿ ಹಾಕಿಕೊಂಡು ಕಾಪಾಡಿಕೊಳ್ತಿದ್ದಾರೆ.
ಇದೀಗ ಚೈತ್ರಾ ಕೂಡಾ ಯಾಮಾರಿದ್ದಾರೆ. ಚೈತ್ರಾರ ದುಡ್ಡು ಮಾಯವಾಗಿದೆ. ಹೀಗಾಗಿ ತಾನು ಸಿಂಗಲ್ ಸಿಂಹ ಎಂದು ಅಬ್ಬರಿಸಿದ್ದಾರೆ. ಕಿತ್ತುಕೊಳ್ಳೋ ಹಾಗಿಲ್ಲ. ಅತ್ಯಂತ ಕೀಳು ಲೆವೆಲ್ಗೆ ಇಳಿದಿದ್ದಾರೆ ಎಂದು ಚೈತ್ರಾ ಕೂಗಿದ್ದಾರೆ. ಗುಂಪುಗಾರಿಕೆ ಮಾಡಿಕೊಂಡು ಕುತಂತ್ರ ನಾನು ಮಾಡಲ್ಲ. ಹಾಗೇ ಗುಂಪು ಕಟ್ಟಿಕೊಂಡು ಪ್ಲ್ಯಾನ್ ಮಾಡಿಕೊಂಡು ಆಡಲ್ಲ, ಸಿಂಗಲ್ ಸಿಂಹ ತರ ಆಡ್ತೀನಿ ಎಂದು ಅಬ್ಬರಿಸಿದ್ದಾರೆ. ಇದರ ಜತೆಗೆ ಐಶ್ವರ್ಯಾಗೆ ಡ್ರಾಮಾ ಕ್ವೀನ್ ಅಂತಲೂ ಹೇಳಿದ್ದಾರೆ.
ಪಾಯಿಂಟ್ಸ್ ಕಾಪಾಡಿಕೊಳ್ಳಲು ಬಿಗ್ ಬಾಸ್ ಸೂಚನೆ ಕೊಟ್ಟಿದ್ದರು. ಎಲ್ಲರ ಜೊತೆ ಮಾತಾಡ್ತಿದ್ದ ವೇಳೆ ಮೈ ಮರೆತ ಐಶ್ವರ್ಯಾರ ಪಾಯಿಂಟ್ಸ್ ಚೈತ್ರಾ ಕದ್ದಿದ್ದಾರೆ. ಈ ಟಾಸ್ಕ್ ನೋಡಿದ ಅನೇಕರು ಚೈತ್ರಾ ಕುಂದಾಪುರ ಅವ್ರಿಗೆ ನೆಗೆಟಿವ್ ಕಾಮೆಂಟ್ಸ್ ಕೂಡಾ ಮಾಡುತ್ತಿದ್ದಾರೆ. ಚೈತ್ರಾ ಕದಿಯೋದ್ರಲ್ಲಿ ಫಸ್ಟ್ ಎಂದು ಕಮೆಂಟ್ ಮಾಡಿದ್ದಾರೆ. ಆಟದ ಸ್ಟ್ರಾಟರ್ಜಿ ಗೊತ್ತಿರೋದು ಚೈತ್ರಾಗೆ ಮಾತ್ರ ಅಂತ ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಅಕ್ಕೋ ನಿಮ್ಮ ಕಳ್ಳಾಟ ಜೋರು ಎಂದು ಕೆಲವರು ಕಮೆಂಟ್ ಮೇಲೆ ಕಮೆಂಟ್ ಮಾಡ್ತಿದ್ದಾರೆ.