ಚೈತ್ರ ಕುಂದಾಪುರಗೆ ಮೂರ್ಛೆ ರೋಗದ ಹಿಸ್ಟರಿ ಇಲ್ಲ! – ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ
ಬೆಂಗಳೂರು: ವಂಚನೆ ಪ್ರಕರಣದಲ್ಲಿ ಚೈತ್ರ ಕುಂದಾಪುರ ಮತ್ತು ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೋರ್ಟ್ ಒಪ್ಪಿಸಿದೆ. ಸಿಸಿಬಿ ಪೊಲೀಸರು ಚೈತ್ರ ಕುಂದಾಪುರಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಚೈತ್ರ ಕುಂದಾಪುರ ಅವರಿಗೆ ಅನಾರೋಗ್ಯದ ಹಿನ್ನಲೆಯಲ್ಲಿ ಇಂದು(ಶುಕ್ರವಾರ) ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ.
ಚೈತ್ರ ಶುಕ್ರವಾರ ಬೆಳಗ್ಗೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಬಳಿಕ ಆಕೆಯ ಬಾಯಲ್ಲಿ ನೊರೆ ಬಂದಿದೆ. ಈ ಹಿನ್ನೆಲೆ ಚೈತ್ರಗೆ ಪಿಡ್ಸ್ ಬಂದಿದೆ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಇದೀಗ ವರದಿಯೊಂದು ಬಂದಿದ್ದು ಚೈತ್ರ ಕುಂದಾಪುರಗೆ ಮೂರ್ಚೆ ರೋಗದ ಹಿಸ್ಟರಿಯೇ ಇಲ್ಲ ಅಂತ ವಿಕ್ಟೋರಿಯಾ ಆಸ್ಪತ್ರೆಯ ನೋಡಲ್ ಅಧಿಕಾರಿ ತಿಳಿಸಿದ್ದಾರೆ. ಆದರೆ, ಚೈತ್ರ ಕುಂದಾಪುರ ಅನಾರೋಗ್ಯದ ನೆಪವೊಡ್ಡಿ ನಾಟಕ ಮಾಡಿದ್ದಾರಾ? ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿವೆ.
ಇದನ್ನೂ ಓದಿ: ದೇವಾಲಯಗಳ ಸುತ್ತ ತಂಬಾಕು ಬಳಕೆ ಹಾಗೂ ಮಾರಾಟ ನಿಷೇಧ – ನಿಯಮ ಪಾಲಿಸದಿದ್ರೆ ಕಠಿಣ ಕ್ರಮ !
ಚೈತ್ರ ಕುಂದಾಪುರಗೆ ಮೂರ್ಚೆ ರೋಗದ ಹಿಸ್ಟರಿ ಇಲ್ಲ!
ಚೈತ್ರ ಕುಂದಾಪುರಗೆ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಮೂರ್ಚೆ ರೋಗದ ಯಾವುದೇ ಲಕ್ಷಣ ಕಂಡು ಬಂದಿಲ್ಲ. ಸದ್ಯ ಚೈತ್ರ ಕುಂದಾಪುರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ರೀತಿಯ ಚೆಕಪ್ ಮಾಡುವಂತೆ ಸಿಸಿಬಿ ಪೊಲೀಸರು ವಿಕ್ಟೋರಿಯಾ ಅಸ್ಪತ್ರೆಯ ವೈದ್ಯರಿಗೆ ಮನವಿ ಮಾಡಿದ್ದಾರೆ.
ಇನ್ನು ಚೈತ್ರ ಕುಂದಾಪುರ ಅವರ ಬಿಪಿ, ಫಲ್ಸ್ ರೇಟ್ ನಾರ್ಮಲ್ ಇದೆ. ಎಲ್ಲ ರೀತಿಯ ಪರೀಕ್ಷೆ ನಡೆಸಿ ವರದಿ ನೀಡಲು ಸಿಸಿಬಿ ಅಧಿಕಾರಿಗಳ ಮನವಿ ಮಾಡಿಕೊಂಡಿದ್ದಾರೆ. ಕೆಲಕಾಲ ಅಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸಲು ಸಿಸಿಬಿ ಪೊಲೀಸರು ನಿರ್ಧರಿಸಿದ್ದಾರೆ. ಡಿಸ್ಚಾರ್ಜ್ ಯಾವಾಗ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಎಲ್ಲಾ ತಪಾಸಣೆ ನಂತರ ವೈದ್ಯರು ಡಿಸ್ಚಾರ್ಜ್ ಬಗ್ಗೆ ನಿರ್ಧರಿಸಲಿದ್ದಾರೆ.
ಬಟ್ಟೆ ಸೋಪು ಕೇಳಿದ್ದ ಚೈತ್ರ ಕುಂದಾಪುರ!
ಗುರುವಾರ ಚೈತ್ರ ಕುಂದಾಪುರ ಬಟ್ಟೆ ತೊಳೆಯಲು ಸೋಪು ಬೇಕೆಂದು ಪೊಲೀಸರ ಬಳಿ ಕೇಳಿದ್ದರು. ಹೀಗಾಗಿ ಎಸಿಪಿ ರೀನಾ ಸುವರ್ಣ ಬಟ್ಟೆ ಸೋಪು ತರಿಸಿಕೊಟ್ಟಿದ್ದರು. ಆದರೆ ಶುಕ್ರವಾರ ಬೆಳಗ್ಗೆ ಸಿಸಿಬಿ ಕಚೇರಿಯಲ್ಲಿ ಚೈತ್ರಾ ಪ್ರಜ್ಞೆ ತಪ್ಪಿ ಬಿದ್ದಾಗ ಬಾಯಲ್ಲಿ ನೊರೆ ಕಾಣಿಸಿಕೊಂಡಿತ್ತು. ಪಿಡ್ಸ್ ಅಂತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಈ ವರೆಗಿನ ಪರೀಕ್ಷೆಯಲ್ಲಿ ಯಾವುದೇ ಪಿಡ್ಸ್ ಅಂಶ ಕಂಡುಬಂದಿಲ್ಲ ಅಂತ ವಿಕ್ಟೋರಿಯಾ ಆಸ್ಪತ್ರೆಯ ನೋಡಲ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.