ಚೈತ್ರಾ ಆಚಾರ್‌ ಸಿಕ್ಕಾಪಟ್ಟೆ ಬೋಲ್ಡ್‌ – ಪಡ್ಡೆ ಹುಡುಗರ ಹೃದಯ ಕದ್ದ ನಟಿ

ಚೈತ್ರಾ ಆಚಾರ್‌ ಸಿಕ್ಕಾಪಟ್ಟೆ ಬೋಲ್ಡ್‌ – ಪಡ್ಡೆ ಹುಡುಗರ ಹೃದಯ ಕದ್ದ ನಟಿ

ಕನ್ನಡ ಚಿತ್ರರಂಗದಲ್ಲಿ ಹೊಸ ಸೆನ್ಸೇಶನ್ ಕ್ರಿಯೇಟ್ ಮಾಡಿದ ನಟಿ ಚೈತ್ರಾ ಆಚಾರ್ ಸದಾ ತಮ್ಮ ಬೋಲ್ಡ್ ಲುಕ್‌ನಲ್ಲೇ ಕಾಣಿಸಿಕೊಳ್ಳುತ್ತಾರೆ. ವಿಭಿನ್ನವಾಗಿ ಫೋಟೋ ಶೂಟ್‌ ಮಾಡಿಸಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ. ಇದೀಗ ಮತ್ತೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಚೈತ್ರ ಆಚಾರ್.

ಇದನ್ನೂ ಓದಿ: ಮತದಾರರ ಓಲೈಕೆಗೆ ಗ್ಯಾರಂಟಿ ಅಸ್ತ್ರ! – ಮಹಿಳೆಯರಿಗಾಗಿ ಐದು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌

ತಮ್ಮ ಉತ್ತಮ ಅಭಿನಯದಿಂದಲೇ ನಟಿ ಚೈತ್ರಾ ಆಚಾರ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ವಿಶೇಷ ಪಾತ್ರಗಳ ಮೂಲಕ ನಟಿ ಚೈತ್ರಾ ಆಚಾರ ಪ್ರೇಕ್ಷಕರ ಮನಗೆದ್ದಿದ್ದಾರೆ. ಇದೀಗ ಮತ್ತಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ತುಂಡುಡುಗೆ ಧರಿಸಿ ಫೋಟೋ ಶೂಟ್‌ ಮಾಡಿಸಿದ್ದು, ಇದನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಚೈತ್ರಾ ಆಚಾರ್ ಧರಿಸಿರುವ ಬಟ್ಟೆ ವಿಶೇಷವಾಗಿಯೇ ಕಾಣಿಸುತ್ತಿದೆ. ಇದನ್ನ ಒಳ ಉಡುಪಿನ ಅನಾವರಣ ಅಂತಲೂ ಹೇಳಬಹುದೇನೋ. ಅಷ್ಟು ಆಕರ್ಷಕವಾಗಿಯೇ ಚೈತ್ರಾ ಕಾಣಿಸಿಕೊಳ್ಳುತ್ತಿದ್ದಾರೆ.

ಚೈತ್ರಾ ಆಚಾರ್ ಇಲ್ಲಿ ನಿರೀಕ್ಷೆ ಮಾಡದೇ ಇರೋ ಮಟ್ಟಕ್ಕೆ ಬೋಲ್ಡ್ ಆಗಿಯೇ ಕಾಣಿಸುತ್ತಿದ್ದಾರೆ. ಒಂದು ರೀತಿ ಇದು ಒಳ ಉಡುಪಿನ ಜಾಹೀರಾತಿನ ರೀತಿನೂ ಕಾಣಿಸುತ್ತಿದೆ. ಆದರೆ ಎಲ್ಲೂ ಇದು ಜಾಹೀರಾತಿನ ಫೋಟೋ ಶೂಟ್ ಅಂತ ಚೈತ್ರಾ ಹೇಳಿಕೊಂಡಿಲ್ಲ.

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಆದ್ಮೇಲೆ ಚೈತ್ರಾ ಹುಡುಗಿಕೊಂಡು ಅನೇಕ ಆಫರ್ ಬಂದಿವೆ. ಪರ ಭಾಷೆಯ ಆಫರ್‌ ಕೂಡ ಬರುತ್ತಿವೆ. ಈ ಹಿನ್ನೆಲೆಯಲ್ಲಿಯೇ ಇದೀಗ ಚೈತ್ರಾ ಪರ ಭಾಷೆಯನ್ನ ತುಂಬಾನೆ ಆಸಕ್ತಿಯಿಂದಲೇ ಕಲಿಯುತ್ತಿದ್ದಾರೆ. ಸದ್ಯ  ಮಲೆಯಾಳಂ, ತೆಲುಗು, ತಮಿಳು ಭಾಷೆಯನ್ನ ಕಲಿಯುತ್ತಿದ್ದಾರೆ.

Shwetha M