ಚೈತ್ರಾ ಕುಂದಾಪುರ ಹೊಸ ಲುಕ್.. ಸಿಗುತ್ತಾ ಲಕ್.. – ಭಾಷಣಕ್ಕಿಂತ ರಿಯಾಲಿಟಿ ಶೋ ಬೆಸ್ಟ್‌!

ಚೈತ್ರಾ ಕುಂದಾಪುರ ಹೊಸ ಲುಕ್.. ಸಿಗುತ್ತಾ ಲಕ್.. – ಭಾಷಣಕ್ಕಿಂತ ರಿಯಾಲಿಟಿ ಶೋ ಬೆಸ್ಟ್‌!

ಚೈತ್ರಾ ಕುಂದಾಪುರ.. ಹಿಂದೂ ಕಾರ್ಯಕರ್ತೆ..  ಫೈರ್ ಬ್ರ್ಯಾಂಡ್.. ಉತ್ತಮ ವಾಗ್ಮೀ ಅಂತಾನೇ ಫೇಮಸ್‌.. ಬಿಗ್‌ ಬಾಸ್‌ ಸೀಸನ್‌ 11 ಗೆ ಬಂದ್ಮೇಲಂತೂ ಚೈತ್ರಾ ಕುಂದಾಪುರ ಖ್ಯಾತಿ ಮತ್ತಷ್ಟು ಹೆಚ್ಚಿದೆ. ಇದೀಗ ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಆಗೋ ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ರಿಯಾಲಿಟಿ ಶೋಗೂ ಎಂಟ್ರಿಕೊಟ್ಟಿದ್ದಾರೆ.. ಫೈರ್‌ ಬ್ರಾಂಡ್‌ ಚೈತ್ರಾ ಹವಾ ಈ ಶೋನಲ್ಲೂ ಮುಂದುವರಿದಿದೆ. ರಜತ್‌ ಜೊತೆ ಚೈತ್ರಾ ಕಿತ್ತಾಡಿಕೊಂಡು.. ನಾನ್‌ ಸ್ಟಾಪ್‌ ಭಾಷಣ ಮಾಡ್ಕೊಂಡು ವೀಕ್ಷಕರಿಗೆ ಮನರಂಜನೆ ನೀಡ್ತಿದ್ದಾರೆ. ಇದೀಗ ಚೈತ್ರಾ ಕುಂದಾಪುರ ಮತ್ತೊಂದು ಶೋಗೆ ಬರ್ತಿದ್ದಂತೆ  ಆಕೆಗೆ ಭಾಷಣ ಬೇಡವಾಯ್ತಾ? ಕಿರುತೆರೆನೇ ಬೆಸ್ಟ್‌ ಅನ್ನಿಸಿತಾ ಅನ್ನೋ ಪ್ರಶ್ನೆ ಅನೇಕರನ್ನ ಕಾಡ್ತಿದೆ.

ಇದನ್ನೂ ಓದಿ: ಬಿಳಿ ಹೊದಿಕೆ ಮೇಲೆ ರಕ್ತಜಲಪಾತ – ಪ್ರಕೃತಿಯ ಈ ವಿಸ್ಮಯಕ್ಕೆ ಕಾರಣವೇನು?

ಸೋಷಿಯಲ್ ಮೀಡಿಯಾ ಇರಬಹುದು.. ಟಿವಿ ಚಾನೆಲ್‌ ಇರಬಹುದು.. ಎಲ್ಲೆಡೆ ಚೈತ್ರಾ ಕುಂದಾಪುರ ವಿವಾದಗಳಿಂದಲೇ ಸುದ್ದಿಯಲ್ಲಿರ್ತಿದ್ರು..  ಅದರಲ್ಲೂ ಹಿಂದೂ ವಿಚಾರಧಾರೆಗಳ ಕುರಿತಾಗಿ ಆವೇಶಭರಿತವಾಗಿ ಮಾತಾಡೋದು ಚೈತ್ರಾ ಕುಂದಾಪುರ ಅವರ ಟ್ರೇಡ್ ಮಾರ್ಕ್‌ ಆಗಿತ್ತು. ಸ್ಟೇಜ್‌ ನಲ್ಲಿ ಗಂಟೆಗಟ್ಟಲೆ ಮಾತನಾಡ್ತಿದ್ದ ಚೈತ್ರ ಬಿಗ್‌ ಬಾಸ್‌ ಮನೆಗೆ ಎಂಟ್ರಿಕೊಟ್ಟಿದ್ರು.. ಸೀಸನ್‌ 11 ನಲ್ಲಿ ತಮ್ಮ ಮಾತಿನದಾಟಿಯಿಂದಲೇ ಸದ್ದು ಮಾಡಿದ್ರು.. ಕುಂದಾಪುರ  ಆಕೆಯ ಮಾತು ಅನೇಕರಿಗೆ ಕಿರಿಕಿರಿ ಅನ್ನಿಸಿದ್ರು.. ವೀಕ್ಷಕರು ಸಪೋರ್ಟ್‌ ಮಾಡ್ತಾ ಬಂದಿದ್ರು.. 105 ದಿನಗಳವರೆಗೆ ದೊಡ್ಮನೆಯಲ್ಲಿ ಆಟ ಆಡಿದ್ರು.. ಬಿಗ್‌ ಬಾಸ್‌ ಶೋ ಮುಗಿಯುತ್ತಿದ್ದಂತೆ ಈಗ ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ರಿಯಾಲಿಟಿ ಶೋಗೆ ಎಂಟ್ರಿಕೊಟ್ಟಿದ್ದಾರೆ. ಇಲ್ಲೂ ಕೂಡ ಚೈತ್ರಾ ಒಳ್ಳೆ ಹವಾ ಕ್ರಿಯೇಟ್‌ ಮಾಡಿದ್ದಾರೆ.. ಯಾವತ್ತು ಮೇಕಪ್‌ ಮಾಡಿಕೊಳ್ಳದ ಚೈತ್ರ.. ಒಳ್ಳೆ ಸೀರೆ.. ಮೇಕಪ್‌ ನಿಂದ ಫುಲ್‌ ಮಿಂಚುತ್ತಿದ್ದಾರೆ. ಈ ಬೆನ್ನಲ್ಲೇ ಚೈತ್ರಾ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದ್ದಾರೆ..

ಬಿಗ್‌ ಬಾಸ್‌ ಮನೆಗೆ ಹೋಗಿ ಬಂದ್ಮೇಲೆ ಚೈತ್ರಾ ಲುಕ್‌ ಕಂಪ್ಲೀಟ್‌ ಚೇಂಜ್‌ ಆಗಿದೆ. ಬಿಗ್‌ ಬಾಸ್‌ ನಲ್ಲಿ ಸಿಂಪಲ್‌ ಆಗಿ ಸೀರೆ ಉಟ್ಟು ಎಲ್ಲರ ಗಮನ ಸೆಳಿತಿದ್ರು.. ಯಾವತ್ತು ಮುಖಕ್ಕೆ ಮೇಕಪ್​ನ ತಾಗಿಸಿದವರೇ ಅಲ್ಲ. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟೂ ದಿನ ಹಾಗೆಯೇ ಇದ್ದರು. ಆದರೆ, ಬಿಗ್ ಬಾಸ್ ಫಿನಾಲೆಯಲ್ಲಿ ಮಾತ್ರ ಚೆಂದದ ಸೀರೆ ಜೊತೆಯಲ್ಲಿ ಸಾಕಷ್ಟು ಮೇಕಪ್ ಮಾಡಿಕೊಂಡು ಬಂದಿದ್ರು.. ಇದು ಎಲ್ಲರ ಗಮನ ಸೆಳೆದಿತ್ತು.. ಚೈತ್ರಾ ಲುಕ್‌ ಗೆ ಎಲ್ಲರೂ ಫಿದಾ ಆಗಿದ್ರು.. ಇದೀಗ ಚೈತ್ರಾ ಕುಂದಾಪುರ ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ.. ಇಲ್ಲೂ ಹವಾ ಕ್ರಿಯೆಟ್‌ ಮಾಡಿದ್ದಾರೆ.. ಇದೀಗ ಈ ಶೋ ನಲ್ಲೂ ಚೈತ್ರಾ ತುಂಬಾ ಚೆನ್ನಾಗಿ ರೆಡಿ ಆಗಿ ಬರ್ತಿದ್ದಾರೆ.. ಚೆಂದ ಚೆಂದದ ಸೀರೆ.. ಫುಲ್‌ ಮೇಕಪ್‌ ಮಾಡಿಕೊಂಡು ಶೋನಲ್ಲಿ ಭಾಗವಹಿಸ್ತಿದ್ದಾರೆ.. ಇದೀಗ ಚೈತ್ರಾ ಹೊಸ ಲುಕ್‌ ಎಲ್ಲರಿಗೂ ಇಷ್ಟ ಆಗಿದೆ. ಒಳ್ಳೆ ಹಿರೋಯಿನ್‌ ತರ ಕಾಣ್ತಾರೆ.. ಹೀಗೆ ರೆಡಿಯಾಗಿ ಅಂತಾ ಅನೇಕರು ಕಾಮೆಂಟ್‌ ಮಾಡಿದ್ದಾರೆ.. ಮತ್ತೆ ಕೆಲವರು ಚೈತ್ರಾ ಭಾಷಣಕ್ಕಿಂತ ರಿಯಾಲಿಟಿ ಶೋ ನೇ ಬೆಸ್ಟ್..‌ ಇದನ್ನೇ ಮುಂದುವರಿಸಿಕೊಂಡು ಹೋಗ್ಲಿ.. ಫ್ಯೂಚರ್‌ ನಲ್ಲಿ ಒಳ್ಳೆ ಅವಕಾಶ ಹುಡುಕೊಂಡು ಬರುತ್ತೆ ಅಂತಾ ಹೇಳ್ತಿದ್ದಾರೆ.. ಮತ್ತೆ ಕೆಲವರು ಭಾಷಣ ಬೋರ್‌ ಆಯ್ತಾ? ಬಣ್ಣದ ಲೋಕ ಬೆಸ್ಟ್‌ ಅನ್ನಿಸಿತಾ ಅಂತಾ ಕೇಳ್ತಿದ್ದಾರೆ..

Shwetha M

Leave a Reply

Your email address will not be published. Required fields are marked *