ಫೈರ್ ಬ್ರ್ಯಾಂಡ್ ಈಗ ಅಳುಮುಂಜಿ.. – ಬಿಗ್ ಬಾಸ್ ನಲ್ಲಿ ಚೈತ್ರಾ ಟಾರ್ಗೆಟ್ – ವೇಸ್ಟ್ ಎನಿಸಿಕೊಂಡ್ರಾ ಚೈತ್ರಾ ಕುಂದಾಪುರ?
ಚೈತ್ರಾ ಕುಂದಾಪುರ.. ಹಿಂದೂ ಫ್ರೈರ್ ಬ್ರಾಂಡ್.. ಉತ್ತಮ ವಾಗ್ಮಿ ಅಂತಾ ಜನ ಕರಿತಾ ಇದ್ರು.. ಈ ಮಾತನ್ನ ಸ್ವತಃ ಚೈತ್ರಾ ಕೂಡ ಹೇಳ್ತೊಂಡು ತಿರುಗಾಡ್ತಾ ಇದ್ರು.. ಆದ್ರೆ ಬಿಗ್ ಬಾಸ್ ಮನೆಗೆ ಕಾಲಿಡ್ತಿದ್ದಂತೆ ಅದ್ಯಾಕೋ ಫೈರ್‌ಬ್ರಾಂಡ್ ಅಕ್ಷರಶಃ ಅಳುಮುಂಜಿಯಾಗಿದ್ದಾರೆ.. ಮಾತು ಮಾತಿಗೂ ಕಣ್ಣೀರು ಹಾಕ್ತಿದ್ದಾರೆ.. ಸಹ ಸ್ಪರ್ಧಿಗಳ ಚುಚ್ಚು ಮಾತಿನಿಂದ ನೊಂದು ಹೋಗಿದ್ದಾರೆ.. ಫೈರ್ ಬ್ರಾಂಡ್ ಅಂತಿದ್ದ ಚೈತ್ರಾ ಇಷ್ಟೊಂದು ಕುಗ್ಗಿ ಹೋಗಿದ್ಯಾಕೆ? ದೊಡ್ಮನೆಯಲ್ಲಿ ಚೈತ್ರಾಳನ್ನ ಟಾರ್ಗೆಟ್ ಮಾಡಲಾಗ್ತಿದ್ಯಾ? ಚೈತ್ರಾ ಮೇಲೆ ಎಲ್ಲರು ಬೊಟ್ಟು ಮಾಡ್ತಿರೋದು ಯಾಕೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಡ್ರೋನ್ ಪ್ರತಾಪ್ ಗೆ ಮತ್ತೆ ಬಂಧನದ ಭೀತಿ – ಹೊಸ ವಿವಾದ ಏನು?
‘ಬಿಗ್ ಬಾಸ್’ ಮನೆಗೆ ಕುಂದಾಪುರದ ಚೈತ್ರಾ ಎಂಟ್ರಿ ಕೊಡ್ತಾ ಇದ್ದಾರೆ ಎಂದಾಗ ಭಾರಿ ಕುತೂಹಲ ಮನೆ ಮಾಡಿತ್ತು. ಸದಾ ಕೋರ್ಟ್, ಕೇಸ್, ಕಾರ್ಯಕ್ರಮ ಅಂತಾ ಸುತ್ತಾಡ್ತಿದ್ದ ಚೈತ್ರಾ ಕುಂದಾಪುರ ದೊಡ್ಮನೆಯಲ್ಲಿ ಹೇಗಿರ್ತಾರೆ, ಟಾಸ್ಕ್‌ನಲ್ಲಿ ಹೇಗೆ ತಮ್ಮನ್ನ ತಾವು ತೊಡಗಿಸ್ಕೊಳ್ತಾರೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಿಗೂ ಇತ್ತು.. ಆದ್ರೆ ಅದ್ಯಾಕೋ ಚೈತ್ರಾ ಕುಂದಾಪುರಗೂ.. ಬಿಗ್ ಬಾಸ್ ಮನೆ ಆಗಿಬರುತ್ತಿಲ್ಲ ಅಂತ ಕಾಣ್ತದೆ. ಸದಾ ಜಗಳ, ಸಹ ಸ್ಪರ್ಧಿಗಳ ಜೊತೆಗೆ ಗಲಾಟೆ, ಪದೇಪದೇ ನಾಮಿನೇಷನ್, ಸುಳ್ಳು ಹೇಳಿ ಸಿಕ್ಕಿಬೀಳುವುದು.. ಅನೇಕ ಬಾರಿ ಕಳಪೆ ಪಟ್ಟ ಪಡೆಯುವುದು. ಇದೆಲ್ಲವೂ ಚೈತ್ರಾಗೆ ಮಾಮೂಲಾಗಿಬಿಟ್ಟಿದೆ. ಇದೀಗ ‘ಬಿಗ್ ಬಾಸ್’ ಮನೆಯಲ್ಲಿ ಚೈತ್ರಾ ಕುಂದಾಪುರ ವೇಸ್ಟ್ ಅನ್ನೋ ಮಾತು ಕೇಳಿಬಂದಿದೆ.
ಹೌದು, ಚೈತ್ರಾ ಕುಂದಾಪುರ ದೊಡ್ಮನೆಯಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಸದ್ದು ಮಾಡ್ತಿದ್ದಾರೆ.. ಕೆಲ ವಾರದ ಹಿಂದೆ ಎಲಿಮಿನೇಷನ್ ವರೆಗೂ ಹೋಗಿ ವಾಪಾಸ್ ಬಂದಿದ್ರು.. ಸೀಕ್ರೆಟ್ ರೂಮ್ ನಲ್ಲಿ ಕೂರಿಸಿ, ಬಿಗ್ ಬಾಸ್ ಮನೆಯ ಆಟ ತೋರಿಸಲಾಗಿತ್ತು.. ಬಳಿಕ ಬಿಗ್ ಬಾಸ್ ಮನೆಯೊಳಗೆ ಕಳುಹಿಸಲಾಗಿತ್ತು.. ಮನೆಯೊಳಗೆ ವಾಪಸ್ ಬಂದಾಗ, ಫೈರ್ ಬ್ರ್ಯಾಂಡ್ ಈಸ್ ಬ್ಯಾಕ್.. ಅಂತಾ ಕೂಗಾಡುತ್ತಾ ಬಂದಿದ್ರು.. ಇದನ್ನ ನೋಡಿದ ವೀಕ್ಷಕರು ಚೈತ್ರಾ ಅಸಲಿ ಆಟ ಶುರು.. ಎಲ್ಲಾ ಸ್ಪರ್ಧಿಗಳನ್ನ ಸರಿಯಾಗೇ ಆಟ ಆಡಿಸ್ತಾರೆ ಅಂತಾ ಎಲ್ಲರೂ ಅಂದ್ಕೊಂಡಿದ್ರು.. ಸದ್ಯಕ್ಕೆ ಜನರ ನಿರೀಕ್ಷೆ ಮತ್ತು ಚೈತ್ರಾ ಅತಿಯಾದ ಆತ್ಮವಿಶ್ವಾಸ ಯಾವುದು ನಿಜವಾಗುವಂತೆ ಕಾಣುತ್ತಿಲ್ಲ!
ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಮಾತುಗಾರ್ತಿನೇ ಆಗಿದ್ದಾರೆ. ಮಾತು ಬಿಟ್ಟು ಬೇರೆ ಏನೂ ಬರೋದಿಲ್ಲ. ಟಾಸ್ಕ್ ಆಡೋಕೆ ಸಾಧ್ಯವೇ ಇಲ್ಲ ನೋಡಿ. ಈ ಅಭಿಪ್ರಾಯ ವೀಕ್ಷಕರಿಗೂ ಬಂದಿದೆ. ಇನ್ನು ಮನೆಯ ಸದಸ್ಯರು ಇದನ್ನ ಮೊದಲೇ ತಿಳಿದುಕೊಂಡಿದ್ದಾರೆ. ಹೀಗಾಗಿ ಚೈತ್ರಾಗೆ ಉಸ್ತುವಾರಿಯನ್ನೆ ಕೊಡ್ತಾ ಇದ್ದರು. ಇದರಿಂದ ರೊಚ್ಚಿಗೆದ್ದ ಚೈತ್ರಾ ಜಗಳ ಆಡಿದ್ದು ಇದೆ. ಉಸ್ತುವಾರಿನೇ ಕೊಡ್ತಾರೆ. ಆಟ ಆಡೋಕೆ ಕೊಡೋದೇ ಇಲ್ಲ ಅಂತಾ ಹೇಳಿಕೊಂಡಿದ್ದರು. ಬಳಿಕ ಚೈತ್ರಾಗೆ ಒಂದು ಚಾನ್ಸ್ ಕೂಡ ಸಿಕ್ಕಿತು. ಸಿಕ್ಕ ಚಾನ್ಸ್ ಅನ್ನ ಸರಿಯಾಗಿ ಬಳಸಿಕೊಂಡಿಲ್ಲ.. ಚೈತ್ರಾ ಸರಿಯಾಗಿ ಆಟ ಆಡದೇ ಇಡೀ ಟೀಮ್ ಸೋತಿತ್ತು. ಹೀಗಾಗಿ ಚೈತ್ರಾಗೆ ಮನೆಯವರೆಲ್ಲರೂ ಕಳಪೆ ಕೊಟ್ಟು ಜೈಲಿಗೆ ಕಳುಹಿಸಿದ್ರು..
ಮತ್ತೊಂದು ವಿಚಾರ ಏನಂದ್ರೆ ಚೈತ್ರಾ ಕುಂದಾಪುರ ಕೆಲವು ವಾರಗಳ ಹಿಂದೆ ಕುಸಿದು ಬಿದ್ದು ಆಸ್ಪತ್ರೆ ಸೇರಿದ್ರು.. ಈ ವೇಳೆ ಹೊರಗಿನ ವಿಷಯಗಳನ್ನ ತಿಳಿದುಕೊಂಡು ಬಂದು ಇತರೆ ಸ್ಪರ್ಧಿಗಳ ತಲೆಗೆ ಹುಳ ಬಿಟ್ಟಿದ್ದರು. ಈ ಘಟನೆಯ ಬಳಿಕ ಟಾಸ್ಕ್‌ಗಳ ವೇಳೆ ರೆಬೆಲ್ ಆಗಿರುತ್ತಿದ್ದ ಚೈತ್ರಾ, ಉತ್ತಮ – ಕಳಪೆ ಕೊಡುವ ಸಂದರ್ಭದಲ್ಲಿ ಎಲ್ಲರ ಬಳಿ ಚೆನ್ನಾಗಿ ಮಾತಾಡಿಕೊಂಡು ಇರುತ್ತಿದ್ದರು. ಕಳಪೆ ಸಿಕ್ಕಿ ಜೈಲಿಗೆ ಹೋಗಬೇಕಾದಾಗ ಊಟ-ತಿಂಡಿ ಬಿಡುತ್ತಿದ್ದರು. ನಿಶ್ಯಕ್ತಿಯಿಂದಾಗಿ ಕಳೆದ ವಾರ ಸಹ ಚೈತ್ರಾ ಆಸ್ಪತ್ರೆ ಸೇರಿದ್ದರು. ಚೈತ್ರಾಳ ಈ ‘ಪ್ಯಾಟರ್ನ್’ ಗಮನಿಸಿದ ಕಿಚ್ಚ ಸುದೀಪ್ ನಿಮ್ಮ ಅನಾರೋಗ್ಯ ನಿಜ ಇರಬಹುದು. ಆದರೆ, ಒಂದು ಪ್ಯಾಟರ್ನ್ ಕಾಣಿಸ್ತಾ ಇದೆ ಎಂದು ಬೊಟ್ಟು ಮಾಡಿ ತೋರಿಸಿದ್ದರು. ಅಚ್ಚರಿ ಎಂಬಂತೆ ಕಳೆದ ವಾರಾಂತ್ಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಚೈತ್ರಾ ವೀಕೆಂಡ್ ಸಂಚಿಕೆಗಳ ಚಿತ್ರೀಕರಣ ಮುಗಿಯುತ್ತಿದ್ದ ಹಾಗೆ ಫುಲ್ ಚಾರ್ಜ್ ಆಗಿಬಿಟ್ಟಿದ್ದಾರೆ. ರಜತ್ ಜೊತೆ ಚೈತ್ರಾ ಕುಂದಾಪುರ ಜಗಳಕ್ಕೆ ಬಿದ್ದಿದ್ದಾರೆ. ಅಡುಗೆ ಮನೆಯಲ್ಲಿ ರಜತ್ ಕೆಲಸ ಮಾಡುತ್ತಿದ್ದರೆ, ಚೈತ್ರಾ ಗಲೀಜು ಮಾಡಿದ್ದಾರೆ. ಇದನ್ನ ಕಂಡು ರೊಚ್ಚಿಗೆದ್ದ ರಜತ್ ‘’ನಾನು ಕೆಲಸ ಮಾಡ್ತಿದ್ರೆ, ಚೈತ್ರಾ ಬಂದು ಗಲೀಜು ಮಾಡ್ತಿದ್ದಾರೆ. ನಿನ್ನೆ ಚಳಿ-ಜ್ವರ ಬಂದಿತ್ತಲ್ವಾ?’’ ಅಂತ ಆಗ ರಜತ್ ಪ್ರಶ್ನೆ ಹಾಕಿದ್ದಾರೆ. ಇದ್ರಿಂದಾಗಿ ಚೈತ್ರಾ ತುಂಬಾ ನೊಂದಿದ್ದಾರೆ. ಬಂದ ಆರೋಪಗಳನ್ನ ನಾನು ಸಾಬೀತು ಮಾಡಿಕೊಳ್ಳದೆ ಹೋದರೆ, ಬಲಿ ಕಾ ಬಕ್ರಾ ತರಹ ಎಲ್ಲರ ಆರೋಪಗಳನ್ನ ನಾನು ತಲೆ ಮೇಲೆ ಹೊತ್ತಿಕೊಳ್ಳಬೇಕಾಗುತ್ತದೆ ಎಂದು ಕಣ್ಣೀರಿಟ್ಟು ಹೇಳುವ ಚೈತ್ರಾ ಕುಂದಾಪುರ.. ಎರಡು ಟಿಶ್ಯೂ ಪೇಪರ್‌ಗಳಲ್ಲಿ ಏನ್ನನ್ನೋ ಬರೆಯುತ್ತಾರೆ. ನಂತರ ಆ ಟಿಶ್ಯೂ ಪೇಪರ್‌ಗಳನ್ನ ಎತ್ತಿಕೊಂಡು ಹೋಗಿ ದೇವಿಯ ಎರಡೂ ಕೈಗಳ ಮೇಲೆ ಇಟ್ಟಿದ್ದಾರೆ. ವ್ಯಂಗ್ಯದ ಮಾತುಗಳಿಗೆ ಸಮಯವೇ ಉತ್ತರ ಕೊಡುತ್ತದೆ ಎಂದ ಚೈತ್ರಾ ಕುಂದಾಪುರಗೆ ದೇವಿ ಎಡಗಡೆ ಪ್ರಸಾದ ಕೊಟ್ಟುಬಿಟ್ಟಿದ್ದಾಳೆ! ದೇವಿಯನ್ನ ಅಪಾರವಾಗಿ ನಂಬುವ ಚೈತ್ರಾ ಕುಂದಾಪುರಗೆ ದೇವಿ ಎಡಗಡೆ ವರ ಕೊಟ್ಟಿದ್ದಾಳೆ.
ಇದೀಗ ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ನಾನಾ ಅವತಾರ ನೋಡಿ ವೀಕ್ಷಕರು ಸಾಕಷ್ಟು ಕಮೆಂಟ್ ಮಾಡ್ತಿದ್ದಾರೆ.. ಇದು ಮೆಂಟಲ್ ಹೆಲ್ತ್ ವಿಷ್ಯ.. ದಯವಿಟ್ಟು ಚೈತ್ರಾ ಅವರನ್ನ ಆಚೆ ಕಳುಹಿಸಿ. ನಾನೇ ಸರಿ, ನಂಗ್ ಅನ್ಸಿದ್ದೇ ನಿಜ ಅಂತ ಅನ್ಕೊಂಡಿರೋರ್ಗೆ ಬದಲಾವಣೆ ಸಾಧ್ಯ ಇಲ್ಲ. ನಾನು ನೋಡಿರುವ ಮಟ್ಟಕ್ಕೆ ಚೈತ್ರಾ ಯಾರಿಗೂ ಮರ್ಯಾದೆ ಕೊಡಲ್ಲ. ಕಿಚ್ಚ ಸುದೀಪ್ ಅವರಿಗೂ ಕೂಡ. ಚೈತ್ರಾಗೆ ಕ್ಲಾರಿಟಿ ಬೇಕಾದಾಗೆಲ್ಲಾ ಸುದೀಪ್ ಕ್ಲಾರಿಟಿ ಕೊಟ್ಟಿದ್ದಾರೆ. ಆದರೆ, ಚೈತ್ರಾ ಕೇಳೋದಿಲ್ಲ ಅಂತ ಕಾಮೆಂಟ್ ಮಾಡಿದ್ದಾರೆ.
ಇನ್ನು ಮತ್ತೊಬ್ಬರು ಎಲ್ಲದಕ್ಕೂ ಮಧ್ಯೆ ದೇವರನ್ನ ತರ್ತಿದ್ದಾರೆ ಚೈತ್ರಾ. ಇದು ನಮಗೆ ಇಷ್ಟ ಆಗ್ತಿಲ್ಲ ಅಂತ ಹೇಳಿದ್ರೆ, ಯಾಕೆ ಎಲ್ಲರು ಚೈತ್ರಾನ ಅನಾವಶ್ಯಕವಾಗಿ ಟಾರ್ಗೆಟ್ ಮಾಡ್ತಿದ್ದಾರೆ? ದೇವರ ಹತ್ತಿರ ಕೂರೋದು ಓಕೆ. ಆದರೆ, ಚೀಟಿ ಬರೆಯೋದು ಸರಿ ಅನ್ಸಲ್ಲ. ರಜತ್ ತುಂಬಾ ಓವರ್ ಮಾಡ್ತಿದ್ದಾರೆ. ಚೈತ್ರಾ ಅದನ್ನ ಸೀರಿಯಸ್ ಆಗಿ ತಗೊಂಡು ಬೇಡದೆ ಇರೋದು ಮಾಡ್ತಿದ್ದಾರೆ ಅಂದಿದ್ದಾರೆ. ಇನ್ನೂ ಕೆಲವರು ದೇವಿ ಹತ್ತಿರ ಆಶೀರ್ವಾದ ತಗೊಳ್ಳೋದು, ಗೈಡೆನ್ಸ್ ಕೇಳೋದು, ಪ್ರಶ್ನೆ ಹಾಕಿ ಉತ್ತರ ಕೇಳೋದು ತಪ್ಪು ಅಲ್ಲ. ಆದರೆ ಅಟವನ್ನ ವೈಯಕ್ತಿಕ ದ್ವೇಷದವರೆಗೂ ತಗೊಂಡು ಹೋಗಿ, ಚೈತ್ರ ದೇವ್ರನ್ನ ಬಳಸಿಕೊಳ್ತಿರೋದು ಶುದ್ಧ ತಪ್ಪು ಅಂದಿದ್ದಾರೆ.