ಬಿಗ್‌ ಬಾಸ್‌ ಗೆ ಚಹಲ್‌, ಅಯ್ಯರ್‌.. ಧನಶ್ರೀ, ಇಬ್ಬರು ಗೆಳೆಯರು ಒಂದಾದ್ರಾ? 
ಡಿವೋರ್ಸ್‌ ಗೆ ಕಾರಣ ಇವರಲ್ವಾ?

ಬಿಗ್‌ ಬಾಸ್‌ ಗೆ ಚಹಲ್‌, ಅಯ್ಯರ್‌.. ಧನಶ್ರೀ, ಇಬ್ಬರು ಗೆಳೆಯರು ಒಂದಾದ್ರಾ? ಡಿವೋರ್ಸ್‌ ಗೆ ಕಾರಣ ಇವರಲ್ವಾ?

ಕಿರುತೆರೆಯ ಜನಪ್ರೀಯ ಶೋಗಳಲ್ಲಿ ಬಿಗ್‌ ಬಾಸ್‌ ಕೂಡ ಒಂದು.. ಅತ್ಯಂತ ವಿವಾದಾತ್ಮಕ ಶೋ ಅಂತಾನೇ ಅನಿಸಿಕೊಂಡಿದೆ. ಶೋ ಶುರುವಾಯ್ತು ಅನ್ನುವಾಗಲೇ ವೀಕ್ಷರಿಗೆ ಸಾಕಷ್ಟು ಕ್ಯೂರಿಯಾಸಿಟಿ ಇರುತ್ತೆ.. ಈಗ ಬಿಗ್‌ ಬಾಸ್‌  ಕೊನೆಯ ಹಂತಕ್ಕೆ ಬಂದಿದೆ. ಫಿನಾಲೆಗೆ ಕೆಲವೇ ಕೆಲವು ದಿನಗಳು ಬಾಕಿ ಇದೆ. ಈ ಹೊತ್ತಲ್ಲೇ ದೊಡ್ಮನೆಗೆ ಇಬ್ಬರು ಕ್ರಿಕೆಟರ್ಸ್‌ ಎಂಟ್ರಿ ಕೊಡಲಿದ್ದಾರೆ. ಆ ಕ್ರಿಕೆಟರ್ಸ್‌ ಬೇರೆ ಯಾರು ಅಲ್ಲ.. ಯುಜ್ವೇಂದ್ರ ಚಹಲ್‌ ಹಾಗೂ ಶ್ರೇಯಸ್‌ ಐಯ್ಯರ್..‌ ಚಹಲ್‌ ಧನಶ್ರೀ ಡಿವೋರ್ಸ್‌ ವಿಚಾರ ಸದ್ದು ಮಾಡ್ತಿರುವ ಬೆನ್ನಲ್ಲೇ ದೊಡ್ಮನೆಗೆ ಇವರಿಬ್ಬರು ಆಗಮಿಸಲಿದ್ದಾರೆ.

ಇದನ್ನೂ ಓದಿ: ಕೋರ್ಟ್‌ನಲ್ಲಿ ಸುಬ್ಬ-ಸುಬ್ಬಿಯ ಕಣ್ಣೀರು- ಡಿ ಬಾಸ್ ನೋಡಿ ಪವಿತ್ರಾ ಭಾವುಕ

ಯುಜುವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಮಧ್ಯೆ ಬಿರುಕು ಬಿದ್ದಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಜೋರಾಗಿ ಸದ್ದು ಮಾಡ್ತಿದೆ. ಈ ಬೆನ್ನಲ್ಲೇ ಇಬ್ಬರು ತಮ್ಮ ಸೋಶಿಯಲ್‌ ಮೀಡಿಯಾಗಳಲ್ಲಿ ಫೋಟೋ ಡಿಲೀಟ್‌ ಮಾಡಿದ್ರು.. ಬಳಿಕ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ರು.. ಆಗ ಡಿವೋರ್ಸ್‌ ಕನ್ಪರ್ಮ್‌ ಅಂತಾ ಫ್ಯಾನ್ಸ್‌ ಚರ್ಚೆ ಮಾಡಿದ್ರು.. ಅಷ್ಟೇ ಅಲ್ಲ ಧನಶ್ರೀ ಹಾಗೂ ಚಹಲ್‌ ಸಂಬಂಧ ಹಳಸಲು ಮೂರನೇ ವ್ಯಕ್ತಿ ಕಾರಣ ಅನ್ನೋ ಗಾಸಿಪ್‌ ಕೂಡ ಹರಿದಾಡಿತ್ತು. ಚಹಲ್‌ ಬೇರೆ ಯುವತಿಯೊಂದಿಗೆ ಓಡಾಡುವ ವಿಡಿಯೋ ವೈರಲ್‌ ಆಗಿತ್ತು.. ಇನ್ನು ಧನಶ್ರೀ ಹಾಗೂ ಶ್ರೇಯಸ್‌ ಅಯ್ಯರ್‌ ಡೇಟಿಂಗ್‌ ಮಾಡ್ತಿದ್ದಾರೆ.. ಇದು ಡಿವೋರ್ಸ್‌ ಗೆ ಕಾರಣ ಅಂತಾ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆದಿತ್ತು. ಈ ಬೆನ್ನಲ್ಲೇ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಚಹಲ್‌ ಹಾಗೂ ಧನಶ್ರೀ ಸೋಶಿಯಲ್‌ ಮೀಡಿಯಾದಲ್ಲಿ ಫೋಸ್ಟ್‌ ಹಾಕಿದ್ರು.. ನನ್ನ ಮೌನ ನನ್ನ ದೌರ್ಬಲ್ಯವಲ್ಲ. ಅದು ನನ್ನ ಶಕ್ತಿ. ನಕಾರಾತ್ಮಕತೆಯು ಆನ್‌ಲೈನ್‌ನಲ್ಲಿ ಸುಲಭವಾಗಿ ಹರಡುತ್ತದೆ. ಇದು ಇತರರನ್ನು ಮೇಲಕ್ಕೆತ್ತಲು ಧೈರ್ಯ ನೀಡುತ್ತೆ ಅಂತಾ ಧನಶ್ರೀ ಪೋಸ್ಟ್‌ ಮಾಡಿದ್ರೆ, ಚಹಲ್‌ ನನ್ನ ವೈಯಕ್ತಿಕ ಜೀವನದ ಬಗ್ಗೆ ಜನರ ಕುತೂಹಲವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಕೆಲವು ವಿಷಯಗಳ ಬಗ್ಗೆ ಮಾತನಾಡುವುದನ್ನು ನೋಡಿದ್ದೇನೆ.. ಅದು ನಿಜವಾಗಿರಬಹುದು ಅಥವಾ ಇಲ್ಲದಿರಬಹುದು ಎಂದು ಬರೆದಿದ್ದಾರೆ. ಈ ಬೆನ್ನಲ್ಲೇ  ಬಿಗ್ ಬಾಸ್‌ನ 18 ನೇ ಸೀಸನ್‌ನಲ್ಲಿ ಯುಜುವೇಂದ್ರ ಚಹಾಲ್ ಮತ್ತು ಶ್ರೇಯಸ್ ಅಯ್ಯರ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಮುಖ ಸುದ್ದಿ ಹೊರಬಿದ್ದಿದೆ.

ಹಿಂದಿ ಬಿಗ್‌ ಬಾಸ್‌ ಸೀಸನ್‌ 18 ಕೊನೆಯ ಹಂತಕ್ಕೆ ಬಂದಿದೆ. ಇದೀಗ ಎಲ್ಲಾ ಸ್ಪರ್ಧಿಗಳ ಕಣ್ಣು ಕಪ್‌ ಮೇಲಿದೆ. ಈ ಹೊತ್ತಲ್ಲೇ ಸ್ಪರ್ಧಿಗಳಿಗೆ ಬೂಸ್ಟ್‌ ನೀಡಲು ಯುಜುವೇಂದ್ರ ಚಹಲ್‌ ಹಾಗೂ ಶ್ರೇಯಸ್‌ ಅಯ್ಯರ್‌ ಗೆಸ್ಟ್‌ ಆಗಿ ಬರಲಿದ್ದಾರೆ..  ಖಾಸಗಿವಾಹಿನಿಯೊಂದರ ವರದಿಯ ಪ್ರಕಾರ, ರವೀನಾ ಟಂಡನ್, ಅವರ ಮಗಳು ರಾಶಾ ಮತ್ತು ಅಮನ್ ದೇವಗನ್ ಅವರು ತಮ್ಮ ಮುಂಬರುವ ಚಿತ್ರ ‘ಆಜಾದ್’ ಅನ್ನು ಪ್ರಚಾರ ಮಾಡಲು ಬಿಗ್ ಬಾಸ್ ಲೈವ್‌ನ ಶನಿವಾರದ ಸಂಚಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾನುವಾರದ ಸಂಚಿಕೆಯಲ್ಲಿ ಭಾರತೀಯ ಕ್ರಿಕೆಟಿಗರಾದ ಶ್ರೇಯಸ್ ಅಯ್ಯರ್, ಯುಜೇಂದ್ರ ಚಹಾಲ್ ಮತ್ತು ಶಶಾಂಕ್ ಸಿಂಗ್ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ಇದೀಗ ಡಿವೋರ್ಸ್‌ ವದಂತಿ ಬೆನ್ನಲ್ಲೇ ಯುಜುವೇಂದ್ರ ಚಹಾಲ್ ಬಿಗ್ ಬಾಸ್ ಗೆ ಬರುವ ಸುದ್ದಿ ಇದೆ. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.. ಒಂದು ವೇಳೆ ಬಿಗ್‌ ಬಾಸ್‌ ಮನೆಗೆ ಹೋದ್ರೂ ಹರಿದಾಡ್ತಿರೋ ಗಾಳಿ ಸುದ್ದಿಗಳಿಗೆ ಸ್ಪಷ್ಣನೆ ನೀಡ್ತಾರಾ ಅಂತಾ ಅಭಿಮಾನಿಗಳು ಕಾಯ್ತಿದ್ದಾರೆ.

Shwetha M