ಸಂಜು ಸಿಡಿಲು.. ತಿಲಕ್‌ ಗುಡುಗು! – ಸೌತ್‌ ಆಫ್ರಿಕಾ ಚಿಂದಿ ಚಿತ್ರಾನ್ನ!!
ಯಂಗ್‌ ಟೀಂ ಕಲಿಸಿದ ಪಾಠವೆಂತದ್ದು?

ಸಂಜು ಸಿಡಿಲು.. ತಿಲಕ್‌ ಗುಡುಗು! – ಸೌತ್‌ ಆಫ್ರಿಕಾ ಚಿಂದಿ ಚಿತ್ರಾನ್ನ!!ಯಂಗ್‌ ಟೀಂ ಕಲಿಸಿದ ಪಾಠವೆಂತದ್ದು?

ಸಂಜು ಎಂಬ ಸಿಡಿಲು ಹಾಗೂ ತಿಲಕ್‌ ಎಂಬ ಗುಡುಗು.. ಎರಡೂ ಜೊತೆಗೇ ಅಬ್ಬರಿಸಿದ್ದರಿಂದ ಹರಿಣಗಳು ಕಂಗಾಲಾಗಿ ಕಾಲು ಮಡಚಿ ಬಿದ್ದಿವೆ.. ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಇಂಡಿಯಾ ವರ್ಸಸ್‌ ಸೌತ್‌ ಆಫ್ರಿಕಾ ಟಿ20 ಮ್ಯಾಚ್‌ನ ಹೈಲೈಟ್‌ ಅನ್ನು ಹೀಗೆ ಎರಡೇ ಸಾಲುಗಳಲ್ಲಿ ಹೇಳಿ ಮುಗಿಸಬಹುದು.. ಆದ್ರೆ ಸಂಜು ಸ್ಯಾಮ್ಸನ್‌ ಮತ್ತು ತಿಲಕ್ ವರ್ಮಾ ಅಷ್ಟೊತ್ತು ಅಬ್ಬರಿಸಿದ್ದ ಅದೇ ಪಿಚ್‌ನಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ಮಾತ್ರ ಭಾರೀ ವೇಗದಲ್ಲಿ ಪೆವಿಲಿಯನ್‌ ಸೇರಿದ್ದರಿಂದ, ಅದು ಕೇವಲ ಬ್ಯಾಟಿಂಗ್‌ ಪಿಚ್‌ ಆಗಿತ್ತು ಅಂತ ದೂರೋದಿಕ್ಕೂ ಬರೋದಿಲ್ಲ.. ಯಾಕಂದ್ರೆ ಭಾರತದ ಪರವಾಗಿ ಬ್ಯಾಟ್‌ ಬೀಸಿದ ಕೇವಲ ಮೂವರು ಬ್ಯಾಟ್ಸ್‌ಮನ್‌ಗಳು ಆಫ್ರಿಕಾ ಬೌಲರ್‌ಗಳನ್ನು ಚಿಂದಿ ಚಿತ್ರಾನ್ನ ಮಾಡಿದ್ರೆ, ನಮ್ಮ ಬೌಲರ್‌ಗಳು ಆಫ್ರಿಕಾದ ಬ್ಯಾಟ್ಸ್‌ಮನ್‌ಗಳನ್ನು ಬೂಂದಿ ಮೊಸರನ್ನದ ರೀತಿಯಲ್ಲಿ ಮಾಡಿ ಮುಗಿಸಿದ್ದೇ ವಿಶೇಷ.. ಈ ಬಾರಿಯ ಟೂರ್ನಮೆಂಟ್‌ ಭಾರತದ ಯಂಗ್‌ ಟೀಂನ ಹೊಸ ಅವತಾರವನ್ನು ಹೇಗೆ ತೆರೆದಿಟ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ತ್ರಿಮೋಕ್ಷಿ ಮಧ್ಯೆ ಚಿಗುರಿದ ಪ್ರೀತಿ? – BBK ನಲ್ಲಿ ಮತ್ತೊಂದು ಲವ್‌ ಸ್ಟೋರಿ

ಸೌತ್‌ ಆಫ್ರಿಕಾ ವಿರುದ್ಧದ ಟಿ20 ಸರಣಿ ಆರಂಭಕ್ಕೂ ಮುಂಚಿತವಾಗಿ ಟೀಂ ಇಂಡಿಯಾದ ಅಭಿಮಾನಿಗಳು ತೀರಾ ಬೇಸರದಲ್ಲಿದ್ದರು.. ನಮ್‌ ಟೀಂ ಹೀಗೂ ಸೋಲೋದಿಕ್ಕೆ ಸಾಧ್ಯನಾ ಅಂತ ನೋವು ಅರಗಿಸಿಕೊಳ್ಳಲಾಗದ ಸ್ಥಿತಿಯಿತ್ತು.. ಯಾಕಂದ್ರೆ ನ್ಯೂಜಿಲೆಂಡ್‌ ವಿರುದ್ಧ ಹೋಮ್‌ ಸೀರೀಸ್‌ನಲ್ಲಿ 3-0 ಅಂತರದಲ್ಲಿ ಸೋತಿರೋದನ್ನು ಅರಗಿಸಿಕೊಳ್ಳೋದಿಕ್ಕೆ ಸಾಧ್ಯವೇ ಇಲ್ಲ.. ಯಾವತ್ತೂ ಕಿವಿಗಳೆದುರು ಟೆಸ್ಟ್‌ ಸೀರಿಸ್‌ ತವರು ನೆಲದಲ್ಲಿ ಸೋಲದ ಭಾರತ ತಂಡ ಇದೇ ಮೊದಲ ಬಾರಿಗೆ ಸೋತಿದ್ದರಿಂದ ಅಭಿಮಾನಿಗಳು ನೋವಲ್ಲಿದ್ದರು.. ಆದ್ರೆ ಕ್ರಿಕೆಟ್‌ ಪ್ರಿಯರ ನೋವಿಗೆ ಸಂತಸದ ಮುಲಾಮು ಹಚ್ಚಿದ್ದು SKY ನೇತೃತ್ವದ ಯಂಗ್‌ ಬಾಯ್ಸ್‌.. ಭಾರತ ತಂಡ ಈಗ ಎಷ್ಟು ದೊಡ್ಡದಾಗಿ ಬೆಳೆದಿದೆ ಅನ್ನೋದಕ್ಕೆ ಇದಕ್ಕಿಂತ ಬೆಸ್ಟ್‌ ಎಕ್ಸಾಂಪಲ್‌ ಸಿಗೋಕೆ ಸಾಧ್ಯವೇ ಇಲ್ಲ..

ಸೌತ್‌ ಆಫ್ರಿಕಾದ ಮಾಮೂಲಿ ಟೀಂ ಒಂದುಕಡೆಯಿದ್ದರೆ, ಟೀಂ ಇಂಡಿಯಾದಿಂದ ಪ್ರವಾಸ ಹೋಗಿದ್ದು ಹುಡುಗರ ಟೀಂ.. ಆದ್ರೆ ಟೀಂ ಇಂಡಿಯಾದ ಜೆನ್‌-ನೆಕ್ಸ್ಟ್‌ ಎಷ್ಟು ಸ್ಟ್ರಾಂಗ್‌ ಆಗಿದೆ ಎನ್ನುವುದನ್ನು ಸೂರ್ಯಕುಮಾರ್‌ ನೇತೃತ್ವದ ತಂಡ ಕ್ರಿಕೆಟ್‌ ಜಗತ್ತಿಗೆ ತೋರಿಸಿದೆ.. ಸೌತ್‌ ಆಫ್ರಿಕಾ ವಿರುದ್ಧದ ನಾಲ್ಕು ಮ್ಯಾಚ್‌ಗಳಲ್ಲಿ ಭಾರತದ ಇಬ್ಬರು ಬ್ಯಾಟ್ಸ್‌ಮನ್‌ಗಳು ಎರಡೆರಡು ಶತಕವನ್ನು ಒಂದೇ ಸೀರೀಸ್‌ನಲ್ಲಿ ಅದೂ ಸೌತ್‌ ಆಫ್ರಿಕಾದ ಫಾಸ್ಟ್‌ ಪಿಚ್‌ನಲ್ಲಿ ನಾಯಿಗೆ ಹೊಡೆದಂಗೆ ಹೊಡೆದು ಬಂದಿದ್ದಾರೆ ಅಂದ್ರೆ ಯಂಗ್‌ ಬ್ಲಡ್‌ ಹೇಗೆ ಕ್ರಿಕೆಟ್‌ ಆಡ್ತಿದೆ ಎನ್ನುವುದು ಅರ್ಥವಾಗ್ತಿದೆ.. ಸಂಜು ಸ್ಯಾಮ್ಸನ್‌ ಇಷ್ಟು ವರ್ಷ ಟೀಂ ಇಂಡಿಯಾದಲ್ಲಿ ಒಂದೊಳ್ಳೆ ಓಪನಿಂಗ್‌ಗೆ ಕಾಯ್ತಿದ್ದರು.. ತಂಡಕ್ಕೆ ಸೇರಿದ್ರೂ ಒಳ್ಳೆಯ ಪರ್ಫಾಮೆನ್ಸ್‌ ಕೊಡಲು ಸಾಧ್ಯವಾಗದೆ ಒದ್ದಾಡ್ತಿದ್ದರು.. 2015ರಲ್ಲಿ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಅಂತಾರಾಷ್ಟ್ರೀಯ ಟಿ20ಯ ಚೊಚ್ಚಲ ಮ್ಯಾಚ್‌ ಆಡಿದ್ದ ಸಂಜು, ಅಲ್ಲಿ ಕೇವಲ ನಾಲ್ಕು ರನ್‌ ಗಳಿಸಿ ವಿಫಲರಾಗಿದ್ದರು.. ಇದ್ರಿಂದ ಮತ್ತೆ ಟೀಂನಲ್ಲಿ ಚಾನ್ಸ್‌ ಪಡೆಯಲು ನಾಲ್ಕೂವರೆ ವರ್ಷ ಬೇಕಾಗಿತ್ತು.. ಇದುವರೆಗೆ 37 ಟಿ20 ಇಂಟರ್‌ನ್ಯಾಷನಲ್‌ ಮ್ಯಾಚ್‌ ಆಡಿರುವ ಸಂಜು ಸ್ಯಾಮ್ಸನ್‌ 34 ಇನ್ನಿಂಗ್ಸ್‌ಗಳ ಮೂಲಕ 3 ಸೆಂಚುರಿ ಭಾರಿಸಿದ್ದಾರೆ.. ಆದರೆ ಈ ಮೂರು ಶತಕಗಳು ಕೇವಲ ಕಳೆದ ಐದು ಇನ್ನಿಂಗ್ಸ್‌ಗಳ ಅಂತರದಲ್ಲಿ ಬಂದಿದೆ..

ಟೀಂ ಇಂಡಿಯಾದ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ ಗರಡಿಯಲ್ಲಿ ಬೆಳೆದವರು ಸಂಜು ಸ್ಯಾಮ್ಸನ್‌.. ರಾಹುಲ್‌ ದ್ರಾವಿಡ್‌, ರಾಜಸ್ಥಾನ ರಾಯಲ್ಸ್‌ ತಂಡದ ಕ್ಯಾಪ್ಟನ್‌ ಆಗಿದ್ದಾಗ ಕೇರಳದ ಫಾಸ್ಟ್‌ ಬೌಲರ್‌ ಶ್ರೀಶಾಂತ್, ಸಂಜು ಸ್ಯಾಮ್ಸನ್‌ ಅನ್ನು ದ್ರಾವಿಡ್‌ಗೆ ಪರಿಚಯಿಸಿದ್ದರು.. ಅದಕ್ಕೂ ಮೊದಲು ಕೆಕೆಆರ್‌ ತಂಡದಲ್ಲಿ ಎರಡು ವರ್ಷ ಬೆಂಚು ಕಾಯಿಸಿದ್ದ ಸ್ಯಾಮ್ಸನ್‌ ಪರವಾಗಿ ಶ್ರೀಶಾಂತ್‌ ಒಂದು ಸಣ್ಣ ಸುಳ್ಳನ್ನು ದ್ರಾವಿಡ್‌ ಮುಂದೆ ಹೇಳಿದ್ದರಂತೆ.. ಈ ಹುಡುಗ ಕೇರಳದ ಡೊಮೆಸ್ಟಿಕ್‌ ಮ್ಯಾಚ್‌ ಒಂದರಲ್ಲಿ ಒಂದೇ ಓವರ್‌ನ ಆರು ಬಾಲುಗಳಿಗೆ ಆರು ಸಿಕ್ಸ್‌ ಹೊಡೆದಿದ್ದಾನೆ ಎಂದು ಬಿಲ್ಡಪ್‌ ಕೊಟ್ಟಿದ್ದರಂತೆ.. ಶ್ರೀಶಾಂತ್‌ ಮಾತು ಕೇಳಿದ ಮಾರನೇ ದಿನವೇ ಸ್ಯಾಮ್ಸನ್‌ಗೆ ನೆಟ್‌ಗೆ ಬರುವಂತೆ ಹೇಳಿ, ಆತನ ಬ್ಯಾಟಿಂಗ್‌ ಶೈಲಿಯನ್ನು ಕಂಡು ಇಷ್ಟಪಟ್ಟಿದ್ದರು.. ಹೀಗೆ ಒಂದು ಸಣ್ಣ ಸುಳ್ಳಿನ ಮೂಲಕ ಅವಕಾಶದ ದಾರಿ ತೆರೆಯಿತು ಅಂತ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಂಜು ಸ್ಯಾಮ್ಸನ್‌ ಗುಟ್ಟುಬಿಟ್ಟುಕೊಟ್ಟಿದ್ದರು.. ಅದೇ ಸಂಜು ಸ್ಯಾಮ್ಸನ್‌ ಬಗ್ಗೆ ಟೀಂ ಇಂಡಿಯಾದ ಈಗಿನ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌, ಬಾಂಗ್ಲಾದೇಶದ ಸೀರಿಸ್‌ ಟೈಮಲ್ಲೇ, ಈ ಸಂಜು ಯಾವತ್ತೋ ಟೀಂ ಇಂಡಿಯಾದಲ್ಲಿ ಇರಬೇಕಿತ್ತು.. ಆತನಿಗೊಂದು ಒಳ್ಳೆಯ ಬ್ರೇಕ್ ಸಿಕ್ಕರೆ, ನಂತರ ಭಾರತೀಯ ತಂಡದ ಆಸ್ತಿ ಆಗಬಲ್ಲ ಎಂದು ಹುರಿದುಂಬಿಸಿದ್ದರು..

ಗಂಭೀರ್‌ ತನ್ನ ಮೇಲೆ ಭರವಸೆ ಇಟ್ಟಿದ್ದೇ ಇಟ್ಟಿದ್ದು.. ಬಾಂಗ್ಲಾ ಸೀರೀಸ್‌ನಿಂದಲೇ ಸಂಜು ಅಬ್ಬರ ಶುರುವಾಗಿ ಸೌತ್‌ ಆಫ್ರಿಕಾ ವಿರುದ್ಧ ಸಿಡಿಲಿನಂತೆ ಅಪ್ಪಳಿಸಿದ್ದಾರೆ.. ಐದು ಇನ್ನಿಂಗ್ಸ್‌ಗಳಲ್ಲಿ ಮೂರು ಸೆಂಚುರಿ ಮತ್ತು ಎರಡು ಸೊನ್ನೆಗಳನ್ನು ಸುತ್ತಿದ ಬ್ಯಾಟ್ಸ್‌ಮನ್‌ ಅಂದರೆ ಇದೇ ಸಂಜು ಇರಬೇಕು.. ಹೀಗೆ ಸಂಜು ಸ್ಯಾಮ್ಸನ್‌ ತನ್ನ ಬ್ಯಾಟ್‌ ಮೂಲಕ ಟೀಂ ಇಂಡಿಯಾದಲ್ಲಿ ತನ್ನಸ್ಥಾನ ಭದ್ರಪಡಿಸಿದಂತೆ ಕಾಣ್ತಿದೆ.. ಸಂಜುಗೆ ಸಾಥ್‌ ನೀಡಿದ ತಿಲಕ್‌ ವರ್ಮಾ ನಿಜಕ್ಕೂ ಸೌತ್‌ ಆಫ್ರಿಕಾ ತಂಡದೆದುರು ಒಳ್ಳೆ ಐಪಿಎಲ್‌ನಲ್ಲಿ ಆಡಿದಂತೆ ಬ್ಯಾಟ್‌ ಬೀಸಿದ್ದಾರೆ.. ಒಂದಿಷ್ಟೂ ಅಳುಕದೆ ಇನ್ನಿಂಗ್ಸ್‌ ಕಟ್ಟಿರುವ ತಿಲಕ್‌, ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಇಳಿದು, ಮಿಸ್ಟರ್‌ ಕನ್ಸಿಸ್ಟೆನ್ಸಿ ಆಗಿ ಕಂಗೊಳಿಸಿದ್ದಾರೆ.. ಕ್ಯಾಫ್ಟನ್‌ ಸೂರ್ಯ ಜೊತೆ ಕೇಳ್ಕೊಂಡು ತಿಲಕ್‌ ನಂ.3ಯಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದರಂತೆ.. ಯಂಗ್‌ ಪ್ಲೇಯರ್‌ ಬಗ್ಗೆ ವಿಶ್ವಾಸಹೊಂದಿದ್ದ ಕ್ಯಾಫ್ಟನ್‌ ಸೂರ್ಯ, ಖುಷಿಯಿಂದಲೇ ತಮ್ಮ ಸ್ಥಾನ ಬಿಟ್ಟುಕೊಟ್ಟಿದ್ದರು.. ತಿಲಕ್‌ ವರ್ಮಾ ಕೂಡ ಕ್ಯಾಫ್ಟನ್‌ನ ವಿಶ್ವಾಸ ಸ್ವಲ್ಪವೂ ತಪ್ಪಾಗದಂತೆ ಎರಡು ಇನ್ನಿಂಗ್ಸ್‌ಗಳಲ್ಲಿ ಎರಡು ಶತಕ ಬಾರಿಸಿ, ಸಂಜು ಸ್ಯಾಮ್ಯನ್‌ ನಂತರ ಈ ಸಾಧನೆ ಮಾಡಿದ ಟೀಂ ಇಂಡಿಯಾದ ಎರಡನೇ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಬರೆದಿದ್ದಾರೆ.. ಇಬ್ಬರೂ ಸೇರಿ ಶುಕ್ರವಾರ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್‌ ಸ್ಟೇಡಿಯಂನಲ್ಲಿ ಸೌತ್‌ ಆಫ್ರಿಕಾ ಬೌಲರ್‌ಗಳ ಮಾರಣಹೋಮ ಮಾಡಿ ಮುಗಿಸಿದ್ದಾರೆ.. ಇವರ ಜೊತೆಗೆ ಅಭಿಶೇಕ್‌ ಶರ್ಮಾ ಕೂಡ ಸೌತ್‌ ಆಫ್ರಿಕಾ ಸೀರೀಸ್‌ನಲ್ಲಿ ಮಿಂಚು ಹರಿಸಿದ್ದು, ಭಾರತಕ್ಕೆ ಒಳ್ಳೆಯ ಓಪನಿಂಗ್‌ ಜೋಡಿಗಳ ಆಫ್ಷನ್‌ ಹೆಚ್ಚಿಸಿದೆ.. ಯಾಕಂದ್ರೆ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಇಂಟರ್‌ನ್ಯಾಷನಲ್‌ ಟಿ20ಯಿಂದ ನಿವೃತ್ತಿ ಆದ್ಮೇಲೆ ಹೊಸ ಓಪನಿಂಗ್‌ ಜೋಡಿ ಯಾರು ಎಂಬ ಕುತೂಹಲ ಇದ್ದೇ ಇದೆ.. ಶುಭ್ಮನ್‌ ಗಿಲ್‌ ಮತ್ತು ಯಶಸ್ವಿ ಜೈಸ್ವಾಲ್‌ ರೈಟ್‌ಹ್ಯಾಂಡ್‌-ಲೆಫ್ಟ್‌ ಹ್ಯಾಂಡ್‌ ಕಾಂಬಿನೇಷನ್‌ನ ಎದುರು ಈಗ ಸಂಜು-ಅಭಿಶೇಕ್‌ ಜೋಡಿಯಿದೆ.. ಇನ್ನು ಟೀಂ ಇಂಡಿಯಾದ ಫಾಸ್ಟ್‌ ಬೌಲರ್‌ಗಳು ಕೂಡ ಸೌತ್‌ ಆಫ್ರಿಕಾದಲ್ಲಿ ಮಿಂಚುಹರಿಸಿದ್ದು, ಕ್ರಿಕೆಟ್‌ ಪ್ರೇಮಿಗಳಿಗೆ ರಸದೌತಣ ನೀಡಿದ್ದಾರೆ.

Shwetha M

Leave a Reply

Your email address will not be published. Required fields are marked *