ಸೆಂಚುರಿ ಸ್ಟಾರ್ ಕರುಣ್ ನಾಯರ್ಗೆ ಮತ್ತೆ ಅನ್ಯಾಯ – ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಸಿಗದ ಚಾನ್ಸ್

ಕನ್ನಡಿಗ ಕರುಣ್ ನಾಯರ್ ಮತ್ತೆ ಅವಕಾಶದಿಂದ ವಂಚಿತರಾಗಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಕರುಣ್ ನಾಯರ್ ಅವರನ್ನು ಆಯ್ಕೆ ಮಾಡಿಲ್ಲ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಿಸದೇ ಇರುವ ಒಂದೇ ಒಂದು ಕಾರಣಕ್ಕೆ ಕರುಣ್ ನಾಯರ್ ಗೆ ಮತ್ತೆ ಅನ್ಯಾಯವಾಗಿದೆ.
ಇದನ್ನೂ ಓದಿ:ಚೇಸ್ ಮಾಸ್ಟರ್.. ಕ್ರಿಕೆಟ್ G.O.A.T – ಮರೆಯಲಾಗದ ಕಿಂಗ್ ಕೊಹ್ಲಿ ರೆಕಾರ್ಡ್ಸ್
ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಕರುಣ್ ನಾಯರ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ ಅನ್ನೋದು ನಿಜವೇ. ಆದರೆ ಅದೇ ಸರಣಿಯ ಕೊನೆಯ ಮ್ಯಾಚ್ನಲ್ಲಿ ಅವರು ಅರ್ಧಶತಕ ಬಾರಿಸಿದ್ದು ಕೂಡಾ ಅಷ್ಟೇ ಸತ್ಯ. ಆ ಬಳಿಕ ಅವರು ಎಲ್ಲಾ ಪಂದ್ಯಗಳಲ್ಲೂ 50+ ಸ್ಕೋರ್ಗಳಿಸಿದ್ದಾರೆ. ಆದರೆ, ಯಾಕೋ ಕರುಣ್ ನಾಯರ್ ವಿಚಾರಕ್ಕೆ ಬಂದರೆ ಟೀಮ್ ಇಂಡಿಯಾ ಬಾಗಿಲು ತೆರೆಯುತ್ತಲೇ ಇಲ್ಲ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕರುಣ್ ವಿಫಲರಾಗಿದ್ದಾರೆ ಎಂದು ಅವರನ್ನು ಭಾರತ ಟೆಸ್ಟ್ ತಂಡದಿಂದ ಹೊರಗಿಡಲಾಗಿದೆ. ಆದರೆ ವೈಫಲ್ಯತೆ ನಡುವೆಯೇ ಅವರು ಫಾರ್ಮ್ ಕಂಡುಕೊಂಡಿದ್ದರು ಎಂಬುದೇ ಸತ್ಯ. ಆದರೆ, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗಿಡಲಾಯಿತು. ಆ ಬಳಿಕ ಕರುಣ್ ನಾಯರ್ ರಣಜಿ ಟೂರ್ನಿಯತ್ತ ಮುಖ ಮಾಡಿದ್ದರು. ಪ್ರಸ್ತುತ ನಡೆಯತ್ತಿರುವ ರಣಜಿ ಟೂರ್ನಿಯಲ್ಲಿ ಕರುಣ್ ನಾಯರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿ ದ್ವಿಶತಕ, ಶತಕ ಹಾಗೂ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ರಾಜ್ಕೋಟ್ನಲ್ಲಿ ನಡೆದ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಪರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕರುಣ್ ನಾಯರ್ 73 ರನ್ ಬಾರಿಸಿದ್ದರು. ಶಿವಮೊಗ್ಗದಲ್ಲಿ ನಡೆದ ಗೋವಾ ವಿರುದ್ಧದ ಪಂದ್ಯದಲ್ಲಿ ಕರುಣ್ ನಾಯರ್ ಬ್ಯಾಟ್ನಿಂದ ಮೂಡಿಬಂದ ಸ್ಕೋರ್ ಬರೋಬ್ಬರಿ 174 ರನ್ಗಳು. ತಿರುವನಂತಪುರದಲ್ಲಿ ನಡೆದ ಕೇರಳ ವಿರುದ್ಧದ ಪಂದ್ಯದಲ್ಲಿ ಕರುಣ್ ನಾಯರ್ 233 ರನ್ಗಳ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯ 3 ಪಂದ್ಯಗಳ 4 ಇನಿಂಗ್ಸ್ಗಳಿಂದ ಬರೋಬ್ಬರಿ 488 ರನ್ ಕಲೆಹಾಕಿದ್ದಾರೆ. ಅಂದರೆ ಕರುಣ್ ನಾಯರ್, ಟೀಮ್ ಇಂಡಿಯಾ ಪರ ಅರ್ಧಶತಕ ಸಿಡಿಸಿದ ಬಳಿಕ, ದ್ವಿಶತಕ, ಶತಕ ಹಾಗೂ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಹೀಗಿದ್ದರೂ ಕೂಡಾ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಕರುಣ್ ನಾಯರ್ ಅವರನ್ನು ಆಯ್ಕೆ ಮಾಡಿಲ್ಲ.

ನೋಡಿರಿ

