ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಮಧ್ಯೆ ಸೆಂಚೂರಿ ರೇಸ್ – ಕ್ರಿಕೆಟ್ ದಿಗ್ಗಜರಲ್ಲಿ ಗೆಲ್ಲೋದು ಯಾರು?

ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಮಧ್ಯೆ ಸೆಂಚೂರಿ ರೇಸ್ – ಕ್ರಿಕೆಟ್ ದಿಗ್ಗಜರಲ್ಲಿ ಗೆಲ್ಲೋದು ಯಾರು?

ಕೇನ್ ವಿಲಿಯಮ್ಸನ್. ಭಾರತ ಮತ್ತು ಇಂಗ್ಲೆಂಡ್​ ನಡುವಿನ ಟೆಸ್ಟ್ ಸೀರಿಸ್ ಮಧ್ಯೆ ಜಂಟಲ್​​ಮನ್ ಗೇಮ್​ನ ಈ ಜಂಟಲ್​​ಮನ್ ಪ್ಲೇಯರ್ ಸೈಲೆಂಟ್ ಆಗಿಯೇ ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ. ಕೇನ್ ವಿಲಿಯಮ್ಸನ್ ಪರ್ಫಾಮೆನ್ಸ್ ಅಷ್ಟಾಗಿ ಹೈಲೈಟ್ ಆಗಲೇ ಇಲ್ಲ. ಯಾಕಂದ್ರೆ ಅವರು ಇವತ್ತಿಗೂ ಅಂಡರ್​ ರೇಟೆಡ್ ಕ್ರಿಕೆಟರೇ. ಕೇನ್ ವಿಲಿಯಮ್ಸನ್ ಸೃಷ್ಟಿಸಿರೋ ದಾಖಲೆಗಳ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ. ಹಾಗೆಯೇ ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಮಧ್ಯೆ ಸೆಂಚೂರಿ ರೇಸ್ ಕೂಡ ನಡೀತಿದೆ.

ಇದನ್ನೂ ಓದಿ: ನಾಲ್ಕನೇ ಟೆಸ್ಟ್‌ನಲ್ಲೂ ಕಣಕ್ಕಿಳಿಯಲ್ಲ ಕನ್ನಡಿಗ ಕೆ.ಎಲ್ ರಾಹುಲ್ – ದೇವದತ್ ಪಡಿಕ್ಕಲ್‌ಗೆ ಚೊಚ್ಚಲ ಪಂದ್ಯ ಆಡುವ ಚಾನ್ಸ್

ಕೇನ್ ವಿಲಿಯಮ್ಸ್.. ಇವ್ರನ್ನ ಕೇನ್ ಕನ್ಸಿಸ್ಟೆನ್ಸಿ ವಿಲಿಯಮ್ಸ್ ಅಂತಾ ಹೇಳೋದು ಬೆಟರ್ ಅನ್ಸುತ್ತೆ. ಸದ್ಯ ಟೆಸ್ಟ್​ನಲ್ಲಿ ಕೇನ್​​ ವಿಲಿಯಮ್ಸನ್​​​​​ರನ್ನಷ್ಟು ಕನ್ಸಿಸ್ಟೆನ್ಸಿ ಮೇಂಟೇನ್ ಮಾಡಿರೋ ಮತ್ತೊಬ್ಬ ಬ್ಯಾಟ್ಸ್​ಮನ್​​ ಬೇರೆ ಯಾರೂ ಇಲ್ಲ ಅಂದ್ರೂ ತಪ್ಪಾಗಲಿಕ್ಕಿಲ್ಲ. ಆ ರೇಂಜಿಗೆ ಕೇನ್ ವಿಲಿಯಮ್ಸನ್ ಪರ್ಫಾಮ್ ಮಾಡ್ತಾ ಇದ್ದಾರೆ. ಇತ್ತ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಟೆಸ್ಟ್​ ಸೀರಿಸ್ ನಡೀತಾ ಇದ್ರೆ, ಅತ್ತ ನ್ಯೂಜಿಲ್ಯಾಂಡ್ VS ಸೌತ್ ಆಫ್ರಿಕಾ ಮಧ್ಯೆಯೂ ಟೆಸ್ಟ್​ ಮ್ಯಾಚ್​​ಗಳು ನಡೆದಿದೆ. ಸೌತ್​ ಆಫ್ರಿಕಾ ವಿರುದ್ಧದ ಮ್ಯಾಚ್ ಸೇರಿದಂತೆ ಕಳೆದ ಏಳು ಟೆಸ್ಟ್​ ಮ್ಯಾಚ್​​ಗಳಲ್ಲಿ ಕೇನ್ ವಿಲಿಯಮ್ಸನ್ ಒಟ್ಟು ಏಳು ಸೆಂಚೂರಿ ಹೊಡೆದಿದ್ದಾರೆ. ಕಳೆದ ಒಂದೆರಡು ವರ್ಷಗಳಿಂದ ಕೇನ್​ ವಿಲಿಯಮ್ಸನ್​ ಆಗಾಗ ಇಂಜ್ಯೂರಿಗೆ ಒಳಗಾಗ್ತಾನೆ ಇದ್ರು. ಇಂಜ್ಯೂರಿಯಿಂದಾಗಿಯೇ ಅದೆಷ್ಟೋ ಮ್ಯಾಚ್​​ಗಳನ್ನ ಕಳೆದ ಎರಡು ವರ್ಷಗಳಲ್ಲಿ ಮಿಸ್ ಮಾಡಿಕೊಂಡಿದ್ದಾರೆ. 2023ರ ವಂಡೇ ವರ್ಲ್ಡ್​​​ಕಪ್​​ ವೇಳೆಯೂ ಆರಂಭದ ಕೆಲ ಮ್ಯಾಚ್​​ಗಳನ್ನ ಆಡಿರಲಿಲ್ಲ. ಆದ್ರೀಗ ಕೇನ್​ ವಿಲಿಯಮ್ಸನ್ ಬ್ಯಾಟ್​ನಿಂದ ರನ್ ಮಳೆಯೇ ಹರಿದು ಬರ್ತಿದೆ.

ಕಳೆದ ಏಳು ಟೆಸ್ಟ್​ ಮ್ಯಾಚ್​ನಲ್ಲಿ 12 ಇನ್ನಿಂಗ್ಸ್​ನಲ್ಲಿ ಕೇನ್​​ ವಿಲಿಯಮ್ಸನ್​ ಏಳು ಸೆಂಚೂರಿ ಹೊಡೆದು ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾರೆ. ಅದ್ರಲ್ಲೂ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡು ಟೆಸ್ಟ್​ನಲ್ಲೇ ಮೂರು ಸೆಂಚೂರಿ ಹೊಡೆದಿದ್ದಾರೆ. ಅದ್ರಲ್ಲೂ ಫಸ್ಟ್​ ಟೆಸ್ಟ್​​ನ ಎರಡೂ ಇನ್ನಿಂಗ್ಸ್​ಗಳಲ್ಲೂ ಸೆಂಚೂರಿ ಹೊಡೆದಿದ್ರು. ಸೆಕೆಂಡ್​ ಟೆಸ್ಟ್​ನಲ್ಲೂ ಕೇನ್​ ವಿಲಿಯಮ್ಸನ್ ಒಂದು​ ಸೆಂಚೂರಿ ಬಾರಿಸಿದ್ದಾರೆ. ಎರಡು ಮ್ಯಾಚ್​, ನಾಲ್ಕು ಇನ್ನಿಂಗ್ಸ್​​ನಲ್ಲಿ ವಿಲಿಯಮ್ಸನ್ ಟೋಟಲ್ 400+ ಸ್ಕೋರ್ ಮಾಡಿದ್ದಾರೆ. ಸೌತ್ ಆಫ್ರಿಕಾ ವಿರುದ್ಧ ಎರಡೂ ಮ್ಯಾಚ್​​ಗಳನ್ನೂ ನ್ಯೂಜಿಲ್ಯಾಂಡ್ ಗೆದ್ದುಕೊಂಡಿದೆ. ಹಾಗೆಯೇ ಸುಮಾರು 92 ವರ್ಷಗಳ ಬಳಿಕ ಸೌತ್ ಆಫ್ರಿಕಾ ವಿರುದ್ಧ ನ್ಯೂಜಿಲ್ಯಾಂಡ್ ಟೆಸ್ಟ್ ಸೀರಿಸ್ ಗೆದ್ದಿದೆ.

ಈ ಸೀರಿಸ್ ಆಫ್ ಸೆಂಚೂರಿಯಿಂದಾಗಿ ಕೇನ್ ವಿಲಿಯಮ್ಸನ್​​ ಒಂದಷ್ಟು ರೆಕಾರ್ಡ್​​ಗಳನ್ನೂ ಬ್ರೇಕ್ ಮಾಡಿದ್ದಾರೆ. ಸೌತ್​ ಆಫ್ರಿಕಾ ವಿರುದ್ಧದ ಸೀರಿಸ್ ಆರಂಭವಾಗೋ ಮುನ್ನ ಕೇನ್​​ ವಿಲಿಯಮ್ಸನ್ ಒಟ್ಟು 29 ಶತಕಗಳನ್ನ ಹೊಡೆದಿದ್ರು. ಆದ್ರೀಗ 32 ಸೆಂಚೂರಿಯಾಗಿದೆ. ಈ ಮೂಲಕ ಆಸ್ಟ್ರೇಲಿಯಾದ ದಂತಕಥೆ ಡಾನ್ ಬ್ರಾಡ್ಮನ್ ಅಷ್ಟೇ ಅಲ್ಲ, ಸಚಿನ್ ತೆಂಡೂಲ್ಕರ್​ ರೆಕಾರ್ಡ್​​ನ್ನ ಕೂಡ ಕೇನ್ ವಿಲಿಯಮ್ಸನ್ ಬ್ರೇಕ್ ಮಾಡಿದ್ದಾರೆ. ಜಾಗತಿಕ ಟೆಸ್ಟ್​ ಕ್ರಿಕೆಟ್​​ನಲ್ಲಿ ಫಾಸ್ಟೆಸ್ಟ್ 32 ಸೆಂಚೂರಿ ಹೊಡೆದಿರೋ ಏಕೈಕ ಬ್ಯಾಟ್ಸ್​​ಮನ್ ಕೇನ್ ವಿಲಿಯಮ್ಸನ್. 98 ಮ್ಯಾಚ್​ಗಳಲ್ಲೇ ಕೇನ್​ ವಿಲಿಯಮ್ಸನ್​​ ಈ ಮೈಲ್​ಸ್ಟೋನ್ ರೀಚ್ ಆಗಿದ್ದಾರೆ.

ಫಾಸ್ಟೆಸ್ಟ್ 32 ಸೆಂಚೂರಿ! 

  • ಕೇನ್ ವಿಲಿಯಮ್ಸನ್​  – 172 ಇನ್ನಿಂಗ್ಸ್
  • ಸ್ಟೀವ್ ಸ್ಮಿತ್         – 174 ಇನ್ನಿಂಗ್ಸ್
  • ರಿಕ್ಕಿ ಪಾಂಟಿಂಗ್      – 176 ಇನ್ನಿಂಗ್ಸ್
  • ಸಚಿನ್ ತೆಂಡೂಲ್ಕರ್  – 179 ಇನ್ನಿಂಗ್ಸ್

ಇನ್ನು ಆ್ಯಕ್ಟಿವ್ ಕ್ರಿಕೆಟರ್ಸ್​​ಗಳ ಪೈಕಿ ಟೆಸ್ಟ್​​ನಲ್ಲಿ ಹೈಯೆಸ್ಟ್ ಸೆಂಚೂರಿ ಹೊಡೆದಿರುವವರ ಲಿಸ್ಟ್​ನಲ್ಲೂ ಕೇನ್ ವಿಲಿಯಮ್ಸನ್​​ ಈಗ ಟಾಪ್​ ಪೊಸೀಶನ್​ನಲ್ಲಿದ್ದಾರೆ.

  • ಟೆಸ್ಟ್ ಸೆಂಚೂರಿ ರೇಸ್! 
  • ಕೇನ್ ವಿಲಿಯಮ್ಸನ್ – 32 ಸೆಂಚೂರಿ
  • ಸ್ಟೀವ್ ಸ್ಮಿತ್         – 32 ಸೆಂಚೂರಿ
  • ಜೋ ರೂಟ್        – 32 ಸೆಂಚೂರಿ
  • ವಿರಾಟ್ ಕೊಹ್ಲಿ     – 29 ಸೆಂಚೂರಿ

 

ಇದು ಆ್ಯಕ್ಟಿವ್ ಕ್ರಿಕೆಟರ್ಸ್​​ಗಳ ಟೆಸ್ಟ್​ ಸೆಂಚೂರಿ ಲಿಸ್ಟ್​. ಅಫ್​​ಕೋಸ್​​ ನಿಮಗೆ ಗೊತ್ತಿರೋ ಹಾಗೆ ಟೆಸ್ಟ್​​ನಲ್ಲಿ ಹೈಯೆಸ್ಟ್​ ನಂಬರ್​​ ಆಫ್ ಸೆಂಚೂರಿ ಹೊಡೆದಿರೋ ರೆಕಾರ್ಡ್ ಸಚಿನ್ ತೆಂಡೂಲ್ಕರ್ ಹೆಸರಲ್ಲೇ ಇದೆ. ಟೆಸ್ಟ್​ ಕ್ರಿಕೆಟ್​​ನಲ್ಲಿ ಸಚಿನ್ ಒಟ್ಟು 51 ಶತಕಗಳನ್ನ ಹೊಡೆದಿದ್ದಾರೆ. ಇದನ್ನ ಬ್ರೇಕ್​ ಮಾಡೋದು ಅಷ್ಟು ಸುಲಭ ಇಲ್ಲ. ಆದ್ರೆ ಕೇನ್ ವಿಲಿಯಮ್ಸನ್​​ಗೆ ಈಗ 33 ವರ್ಷ. ಹೀಗಾಗಿ ನ್ಯೂಜಿಲ್ಯಾಂಡ್ ಕ್ಯಾಪ್ಟನ್​ಗೆ ಸಚಿನ್​ ರೆಕಾರ್ಡ್​​ನ್ನ ಬ್ರೇಕ್​​​ ಮಾಡೋಕೆ ಚಾನ್ಸ್ ಕೂಡ ಇದೆ. ಹೀಗಾಗಿ ಈಗ ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್, ಜೋ ರೂಟ್ ಮತ್ತು ವಿರಾಟ್ ಕೊಹ್ಲಿ ಈ ಆ್ಯಕ್ಟಿವ್ ಕ್ರಿಕೆಟರ್ಸ್​ಗಳ ಮಧ್ಯೆ ಇಂಟ್ರೆಸ್ಟಿಂಗ್ ಸೆಂಚೂರಿ ರೇಸ್ ನಡೀತಾ ಇದೆ.

2020ರವರೆಗೂ ​​ ಹೈಯೆಸ್ಟ್​ ಟೆಸ್ಟ್ ಸೆಂಚೂರಿಯ ಫ್ಯಾಬ್​-4 ಲಿಸ್ಟ್​ನಲ್ಲಿ ಕೇನ್​​ ವಿಲಿಯಮ್ಸನ್​​ 4ನೇ ಪೊಸೀಶನ್​ನಲ್ಲಿದ್ರು. ಸ್ಟೀವ್ ಸ್ಮಿತ್, ಜೋ ರೂಟ್, ವಿರಾಟ್ ಕೊಹ್ಲಿ ಬಳಿಕ ಕೇನ್ ವಿಲಿಯಮ್ಸನ್ ಹೆಸರಿತ್ತು. ಆದ್ರೆ, ಆಗಾಗ ಇಂಜ್ಯೂರಿಗೆ ಒಳಗಾಗ್ತಿದ್ರೂ ಕಳೆದ ಮೂರು ವರ್ಷಗಳಲ್ಲಿ ಕೇನ್​ ವಿಲಿಯಮ್ಸನ್ ಮೇಲಿಂದ ಮೇಲೆ ಸೆಂಚೂರಿ ಹೊಡೀತಾನೆ ಈಗ ಕರೆಂಟ್​​ ಪ್ಲೇಯರ್ಸ್​ಗಳ ಪೈಕಿ ಟೆಸ್ಟ್​​ನಲ್ಲಿ ಹೈಯೆಸ್ಟ್​ ಶತಕ ಹೊಡೆದವರಲ್ಲಿ ನಂಬರ್​-1 ಪೊಸೀಶನ್​ಗೆ ಬಂದು ನಿಂತಿದ್ದಾರೆ. ಸ್ಟ್ಯಾಟಿಕ್ಸ್ ಪ್ರಕಾರ ನೋಡೋದಾದ್ರೆ ಕಳೆದ ಮೂರು ವರ್ಷಗಳಲ್ಲಿ ಕೇನ್​​ ವಿಲಿಯಮ್ಸನ್ ದಿ ಬೆಸ್ಟ್ ಟೆಸ್ಟ್ ಬ್ಯಾಟ್ಸ್​ಮನ್. ವಿಲಿಯಮ್ಸನ್ ಕನ್ಸಿಸ್ಟೆನ್ಸಿ ಮುಂದೆ ಯಾರನ್ನೂ ಕಂಪೇರ್ ಮಾಡೋಕೆ ಸಾಧ್ಯವಿಲ್ಲ. ಬ್ಯಾಟಿಂಗ್​ ಮಾಡೋ ವೇಳೆ 50 ಕ್ರಾಸ್ ಮಾಡಿದ್ರು ಅಂದ್ರೆ ಕೇನ್ ವಿಲಿಯಮ್ಸನ್ ಸೆಂಚೂರಿ ಹೊಡೆದ್ರು ಅಂತಾನೆ ಅರ್ಥ. ಕೇನ್​ ವಿಲಿಯಮ್ಸನ್​ ಕ್ರೀಸ್​ನಲ್ಲಿದ್ದಾರೆ ಅಂದ್ರೆ ಅವರು ಸ್ಕೋರ್ ಮಾಡ್ತಾ ಹೋಗೋದು ಗೊತ್ತೇ ಆಗೋದಿಲ್ಲ. ಹೊಡಿ, ಬಡಿ ಶಾಟ್ಸ್​​ಗಳಿಗಿಂತ ಹೆಚ್ಚಾಗಿ, ರನ್ನಿಂಗ್ ಬಿಟ್ವೀನ್​ ದಿ ವಿಕೆಟ್​ಗೆ ಹೆಚ್ಚು ಪ್ರಿಫರೆನ್ಸ್ ಕೊಡ್ತಾರೆ. ನೋಡ ನೋಡ್ತಿದ್ದಂಗೆ ಸೆಂಚೂರಿ ಹೊಡೆದಿರ್ತಾರೆ. ಹಾಗೆಯೇ ಸಾಫ್ಟ್ ಬ್ಯಾಟಿಂಗ್ ಸ್ಟೈಲ್. ಇಷ್ಟೆಲ್ಲಾ ಸೆಂಚೂರಿ ಹೊಡೆದ್ರೂ ಕೂಡ ಕೇನ್​ ವಿಲಿಯಮ್ಸನ್ ವರ್ಲ್ಡ್​​ ಕ್ರಿಕೆಟ್​ನಲ್ಲಿ ಅಂಡರ್​​ ರೇಟೆಡ್ ಕ್ರಿಕೆಟರೇ ಆಗಿರೋದು ನಿಜಕ್ಕೂ ಅನ್​​ಫಾರ್ಚ್ಯುನೇಟ್.

ಈ ಹಿಂದೆ ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಮಧ್ಯೆ ಟೆಸ್ಟ್​ ಸೆಂಚೂರಿ ವಿಚಾರವಾಗಿ ಒಳ್ಳೆಯ ಕಾಂಪಿಟೀಶನ್ ಕೂಡ ಇತ್ತು. ಸದ್ಯ ಕೊಹ್ಲಿ ಟೆಸ್ಟ್​ನಲ್ಲಿ 29 ಸೆಂಚೂರಿ ಹೊಡೆದಿದ್ದಾರೆ. ಒಂದು ವೇಳೆ ಇಂಗ್ಲೆಂಡ್​ ವಿರುದ್ಧದ ಐದು ಮ್ಯಾಚ್​​ಗಳ ಟೆಸ್ಟ್​ ಸೀರಿಸ್​ನಲ್ಲಿ ಆಡ್ತಿದ್ರೆ, ಕೊಹ್ಲಿಯದ್ದು 30+ ಸೆಂಚೂರಿ ಈಸಿಯಾಗಿ ಆಗ್ತಿತ್ತು. ಆದ್ರೆ ಈಗ ವಿಲಿಯಮ್ಸನ್ ಕೊಹ್ಲಿ ನಾಲ್ಕು ಸೆಂಚೂರಿ ಲೀಡ್​ನಲ್ಲಿದ್ದಾರೆ. ಆ್ಯಕ್ಚುವಲಿ ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಇಬ್ಬರೂ ಒಳ್ಳೆಯ ಸ್ನೇಹಿತರೇ. ಈ ಹಿಂದೆ ಸಾಕಷ್ಟು ಒಬ್ಬರೊಗೊಬ್ಬರು ಅಪ್ರಿಶಿಯೇಟ್ ಮಾಡಿದ್ರು. ವಿಲಿಯಮ್ಸನ್​​ ಬ್ಯಾಟಿಂಗ್​ ನೋಡೋದನ್ನ ನಾನು ಯಾವಾಗಲೂ ಎಂಜಾಯ್ ಮಾಡ್ತೇನೆ ಅಂತಾ ಕೊಹ್ಲಿ ಹೇಳಿದ್ರು. ಕೇನ್​ ವಿಲಿಯಮ್ಸನ್​​ ಬಗ್ಗೆ ಈವನ್ ಭಾರತೀಯ ಕ್ರಿಕೆಟ್ ಫ್ಯಾನ್ಸ್​​ಗೂ ಸಾಕಷ್ಟು ಅಭಿಮಾನ ಇದೆ. ಆ ರೀತಿಯ ಪರ್ಸನಾಲಿಟಿ ಅವರದ್ದು. 2019ರಲ್ಲಿ ಇಂಗ್ಲೆಂಡ್ VS ನ್ಯೂಜಿಲ್ಯಾಂಡ್ ನಡುವೆ ವರ್ಲ್ಡ್​​ಕಪ್ ಫೈನಲ್ ನಡೆದಾಗ ಭಾರತೀಯರಂತೂ ಕೇನ್ ವಿಲಿಯಮ್ಸನ್ ಟೀಮ್​​ನ್ನ ಸಪೋರ್ಟ್ ಮಾಡಿದ್ರು. ನಂತರ ವರ್ಲ್ಡ್​ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​​ನಲ್ಲಿ ಟೀಂ ಇಂಡಿಯಾವನ್ನೇ ಮಣಿಸಿ ನ್ಯೂಜಿಲ್ಯಾಂಡ್ ಟ್ರೋಫಿ ಗೆದ್ದಿತ್ತು. ಆಗಲೂ ಅಷ್ಟೇ, ಕೇನ್ ವಿಲಿಯಮ್ಸನ್ ಇದನ್ನಾದ್ರೂ ಗೆಲ್ಲಲಿ ಬಿಡಿ ಅಂತಾನೆ ಭಾರತೀಯರು ಕಾಮೆಂಟ್ ಮಾಡಿದ್ರು. ಕೇನ್​ ವಿಲಿಯಮ್ಸನ್​, ನ್ಯೂಜಿಲ್ಯಾಂಡ್ ಟೀಮ್ ಅಂದ್ರೆ ಭಾರತೀಯ ಕ್ರಿಕೆಟ್ ಫ್ಯಾನ್ಸ್​ಗೂ ಒಂದು ಸಾಫ್ಟ್ ಕಾರ್ನರ್ ಇದ್ದೇ ಇದೆ.

ನೋ ಡೌಟ್.. ವರ್ಲ್ಡ್​ ಕ್ರಿಕೆಟ್​ಗೆ ಕೇನ್​​ ವಿಲಿಯಮ್ಸನ್ ನಿಜಕ್ಕೂ ಗಿಫ್ಟೆಟ್ ಪ್ಲೇಯರ್. 2010ರಲ್ಲಿ ಭಾರತದ ವಿರುದ್ಧ ಟೆಸ್ಟ್​ ಡೆಬ್ಯೂ ಮಾಡಿದಾಗ ಫಸ್ಟ್​ ಮ್ಯಾಚ್​​ನಲ್ಲೇ ಸೆಂಚೂರಿ ಹೊಡೆದಿದ್ರು. ಹಾಗೆಯೇ ವಿಲಿಯಮ್ಸನ್​ ಕ್ಯಾಪ್ಟನ್ ಆದ ಬಳಿಕ ನ್ಯೂಜಿಲ್ಯಾಂಡ್​ ಟೀಮ್​ನ ದಿಕ್ಕೇ ಬದಲಾಯ್ತು. ಅದ್ರೆ ಐಸಿಸಿ ಟೂರ್ನಿ ಅಂತಾ ಬಂದಾಗ ಲಕ್​ ಮಾತ್ರ ಅಷ್ಟಾಗಿ ಸಾಥ್ ಕೊಡ್ತಿಲ್ಲ. ಆದ್ರೆ ವರ್ಲ್ಡ್​ ಟೆಸ್ಟ್​ ಚಾಂಪಿಯನ್​​ಶಿಪ್​​ನ್ನೇ ಗೆದ್ದಿರೋದು ಒಂದು ಸಮಾಧಾನಕರ ಸಂಗತಿ. ಎನಿವೇ ಕೇನ್​ ವಿಲಿಯಮ್ಸನ್​ ಬಗ್ಗೆ ಓವರ್​ ಆಲ್​​ ಆಗಿ ಹೇಳೋದಾದ್ರೆ, ಈ ದಶಕ ಕಂಡ ವನ್​​ ಆಫ್ ಟಾಪ್​ ಮೋಸ್ಟ್ ಕ್ರಿಕೆಟರ್. ಅದ್ರಲ್ಲಿ ಯಾವುದೇ ಅನುಮಾನ ಇಲ್ಲ.

Sulekha