ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಮಧ್ಯೆ ಸೆಂಚೂರಿ ರೇಸ್ – ಕ್ರಿಕೆಟ್ ದಿಗ್ಗಜರಲ್ಲಿ ಗೆಲ್ಲೋದು ಯಾರು?
ಕೇನ್ ವಿಲಿಯಮ್ಸನ್. ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸೀರಿಸ್ ಮಧ್ಯೆ ಜಂಟಲ್ಮನ್ ಗೇಮ್ನ ಈ ಜಂಟಲ್ಮನ್ ಪ್ಲೇಯರ್ ಸೈಲೆಂಟ್ ಆಗಿಯೇ ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ. ಕೇನ್ ವಿಲಿಯಮ್ಸನ್ ಪರ್ಫಾಮೆನ್ಸ್ ಅಷ್ಟಾಗಿ ಹೈಲೈಟ್ ಆಗಲೇ ಇಲ್ಲ. ಯಾಕಂದ್ರೆ ಅವರು ಇವತ್ತಿಗೂ ಅಂಡರ್ ರೇಟೆಡ್ ಕ್ರಿಕೆಟರೇ. ಕೇನ್ ವಿಲಿಯಮ್ಸನ್ ಸೃಷ್ಟಿಸಿರೋ ದಾಖಲೆಗಳ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ. ಹಾಗೆಯೇ ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಮಧ್ಯೆ ಸೆಂಚೂರಿ ರೇಸ್ ಕೂಡ ನಡೀತಿದೆ.
ಇದನ್ನೂ ಓದಿ: ನಾಲ್ಕನೇ ಟೆಸ್ಟ್‌ನಲ್ಲೂ ಕಣಕ್ಕಿಳಿಯಲ್ಲ ಕನ್ನಡಿಗ ಕೆ.ಎಲ್ ರಾಹುಲ್ – ದೇವದತ್ ಪಡಿಕ್ಕಲ್‌ಗೆ ಚೊಚ್ಚಲ ಪಂದ್ಯ ಆಡುವ ಚಾನ್ಸ್
ಕೇನ್ ವಿಲಿಯಮ್ಸ್.. ಇವ್ರನ್ನ ಕೇನ್ ಕನ್ಸಿಸ್ಟೆನ್ಸಿ ವಿಲಿಯಮ್ಸ್ ಅಂತಾ ಹೇಳೋದು ಬೆಟರ್ ಅನ್ಸುತ್ತೆ. ಸದ್ಯ ಟೆಸ್ಟ್ನಲ್ಲಿ ಕೇನ್ ವಿಲಿಯಮ್ಸನ್ರನ್ನಷ್ಟು ಕನ್ಸಿಸ್ಟೆನ್ಸಿ ಮೇಂಟೇನ್ ಮಾಡಿರೋ ಮತ್ತೊಬ್ಬ ಬ್ಯಾಟ್ಸ್ಮನ್ ಬೇರೆ ಯಾರೂ ಇಲ್ಲ ಅಂದ್ರೂ ತಪ್ಪಾಗಲಿಕ್ಕಿಲ್ಲ. ಆ ರೇಂಜಿಗೆ ಕೇನ್ ವಿಲಿಯಮ್ಸನ್ ಪರ್ಫಾಮ್ ಮಾಡ್ತಾ ಇದ್ದಾರೆ. ಇತ್ತ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಟೆಸ್ಟ್ ಸೀರಿಸ್ ನಡೀತಾ ಇದ್ರೆ, ಅತ್ತ ನ್ಯೂಜಿಲ್ಯಾಂಡ್ VS ಸೌತ್ ಆಫ್ರಿಕಾ ಮಧ್ಯೆಯೂ ಟೆಸ್ಟ್ ಮ್ಯಾಚ್ಗಳು ನಡೆದಿದೆ. ಸೌತ್ ಆಫ್ರಿಕಾ ವಿರುದ್ಧದ ಮ್ಯಾಚ್ ಸೇರಿದಂತೆ ಕಳೆದ ಏಳು ಟೆಸ್ಟ್ ಮ್ಯಾಚ್ಗಳಲ್ಲಿ ಕೇನ್ ವಿಲಿಯಮ್ಸನ್ ಒಟ್ಟು ಏಳು ಸೆಂಚೂರಿ ಹೊಡೆದಿದ್ದಾರೆ. ಕಳೆದ ಒಂದೆರಡು ವರ್ಷಗಳಿಂದ ಕೇನ್ ವಿಲಿಯಮ್ಸನ್ ಆಗಾಗ ಇಂಜ್ಯೂರಿಗೆ ಒಳಗಾಗ್ತಾನೆ ಇದ್ರು. ಇಂಜ್ಯೂರಿಯಿಂದಾಗಿಯೇ ಅದೆಷ್ಟೋ ಮ್ಯಾಚ್ಗಳನ್ನ ಕಳೆದ ಎರಡು ವರ್ಷಗಳಲ್ಲಿ ಮಿಸ್ ಮಾಡಿಕೊಂಡಿದ್ದಾರೆ. 2023ರ ವಂಡೇ ವರ್ಲ್ಡ್ಕಪ್ ವೇಳೆಯೂ ಆರಂಭದ ಕೆಲ ಮ್ಯಾಚ್ಗಳನ್ನ ಆಡಿರಲಿಲ್ಲ. ಆದ್ರೀಗ ಕೇನ್ ವಿಲಿಯಮ್ಸನ್ ಬ್ಯಾಟ್ನಿಂದ ರನ್ ಮಳೆಯೇ ಹರಿದು ಬರ್ತಿದೆ.
ಕಳೆದ ಏಳು ಟೆಸ್ಟ್ ಮ್ಯಾಚ್ನಲ್ಲಿ 12 ಇನ್ನಿಂಗ್ಸ್ನಲ್ಲಿ ಕೇನ್ ವಿಲಿಯಮ್ಸನ್ ಏಳು ಸೆಂಚೂರಿ ಹೊಡೆದು ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾರೆ. ಅದ್ರಲ್ಲೂ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡು ಟೆಸ್ಟ್ನಲ್ಲೇ ಮೂರು ಸೆಂಚೂರಿ ಹೊಡೆದಿದ್ದಾರೆ. ಅದ್ರಲ್ಲೂ ಫಸ್ಟ್ ಟೆಸ್ಟ್ನ ಎರಡೂ ಇನ್ನಿಂಗ್ಸ್ಗಳಲ್ಲೂ ಸೆಂಚೂರಿ ಹೊಡೆದಿದ್ರು. ಸೆಕೆಂಡ್ ಟೆಸ್ಟ್‌ನಲ್ಲೂ ಕೇನ್ ವಿಲಿಯಮ್ಸನ್ ಒಂದು ಸೆಂಚೂರಿ ಬಾರಿಸಿದ್ದಾರೆ. ಎರಡು ಮ್ಯಾಚ್, ನಾಲ್ಕು ಇನ್ನಿಂಗ್ಸ್ನಲ್ಲಿ ವಿಲಿಯಮ್ಸನ್ ಟೋಟಲ್ 400+ ಸ್ಕೋರ್ ಮಾಡಿದ್ದಾರೆ. ಸೌತ್ ಆಫ್ರಿಕಾ ವಿರುದ್ಧ ಎರಡೂ ಮ್ಯಾಚ್ಗಳನ್ನೂ ನ್ಯೂಜಿಲ್ಯಾಂಡ್ ಗೆದ್ದುಕೊಂಡಿದೆ. ಹಾಗೆಯೇ ಸುಮಾರು 92 ವರ್ಷಗಳ ಬಳಿಕ ಸೌತ್ ಆಫ್ರಿಕಾ ವಿರುದ್ಧ ನ್ಯೂಜಿಲ್ಯಾಂಡ್ ಟೆಸ್ಟ್ ಸೀರಿಸ್ ಗೆದ್ದಿದೆ.
ಈ ಸೀರಿಸ್ ಆಫ್ ಸೆಂಚೂರಿಯಿಂದಾಗಿ ಕೇನ್ ವಿಲಿಯಮ್ಸನ್ ಒಂದಷ್ಟು ರೆಕಾರ್ಡ್ಗಳನ್ನೂ ಬ್ರೇಕ್ ಮಾಡಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಸೀರಿಸ್ ಆರಂಭವಾಗೋ ಮುನ್ನ ಕೇನ್ ವಿಲಿಯಮ್ಸನ್ ಒಟ್ಟು 29 ಶತಕಗಳನ್ನ ಹೊಡೆದಿದ್ರು. ಆದ್ರೀಗ 32 ಸೆಂಚೂರಿಯಾಗಿದೆ. ಈ ಮೂಲಕ ಆಸ್ಟ್ರೇಲಿಯಾದ ದಂತಕಥೆ ಡಾನ್ ಬ್ರಾಡ್ಮನ್ ಅಷ್ಟೇ ಅಲ್ಲ, ಸಚಿನ್ ತೆಂಡೂಲ್ಕರ್ ರೆಕಾರ್ಡ್ನ್ನ ಕೂಡ ಕೇನ್ ವಿಲಿಯಮ್ಸನ್ ಬ್ರೇಕ್ ಮಾಡಿದ್ದಾರೆ. ಜಾಗತಿಕ ಟೆಸ್ಟ್ ಕ್ರಿಕೆಟ್ನಲ್ಲಿ ಫಾಸ್ಟೆಸ್ಟ್ 32 ಸೆಂಚೂರಿ ಹೊಡೆದಿರೋ ಏಕೈಕ ಬ್ಯಾಟ್ಸ್ಮನ್ ಕೇನ್ ವಿಲಿಯಮ್ಸನ್. 98 ಮ್ಯಾಚ್ಗಳಲ್ಲೇ ಕೇನ್ ವಿಲಿಯಮ್ಸನ್ ಈ ಮೈಲ್ಸ್ಟೋನ್ ರೀಚ್ ಆಗಿದ್ದಾರೆ.
ಫಾಸ್ಟೆಸ್ಟ್ 32 ಸೆಂಚೂರಿ!
- ಕೇನ್ ವಿಲಿಯಮ್ಸನ್ – 172 ಇನ್ನಿಂಗ್ಸ್
- ಸ್ಟೀವ್ ಸ್ಮಿತ್ – 174 ಇನ್ನಿಂಗ್ಸ್
- ರಿಕ್ಕಿ ಪಾಂಟಿಂಗ್ – 176 ಇನ್ನಿಂಗ್ಸ್
- ಸಚಿನ್ ತೆಂಡೂಲ್ಕರ್ – 179 ಇನ್ನಿಂಗ್ಸ್
ಇನ್ನು ಆ್ಯಕ್ಟಿವ್ ಕ್ರಿಕೆಟರ್ಸ್ಗಳ ಪೈಕಿ ಟೆಸ್ಟ್ನಲ್ಲಿ ಹೈಯೆಸ್ಟ್ ಸೆಂಚೂರಿ ಹೊಡೆದಿರುವವರ ಲಿಸ್ಟ್ನಲ್ಲೂ ಕೇನ್ ವಿಲಿಯಮ್ಸನ್ ಈಗ ಟಾಪ್ ಪೊಸೀಶನ್ನಲ್ಲಿದ್ದಾರೆ.
- ಟೆಸ್ಟ್ ಸೆಂಚೂರಿ ರೇಸ್!
- ಕೇನ್ ವಿಲಿಯಮ್ಸನ್ – 32 ಸೆಂಚೂರಿ
- ಸ್ಟೀವ್ ಸ್ಮಿತ್ – 32 ಸೆಂಚೂರಿ
- ಜೋ ರೂಟ್ – 32 ಸೆಂಚೂರಿ
- ವಿರಾಟ್ ಕೊಹ್ಲಿ – 29 ಸೆಂಚೂರಿ
ಇದು ಆ್ಯಕ್ಟಿವ್ ಕ್ರಿಕೆಟರ್ಸ್ಗಳ ಟೆಸ್ಟ್ ಸೆಂಚೂರಿ ಲಿಸ್ಟ್. ಅಫ್ಕೋಸ್ ನಿಮಗೆ ಗೊತ್ತಿರೋ ಹಾಗೆ ಟೆಸ್ಟ್ನಲ್ಲಿ ಹೈಯೆಸ್ಟ್ ನಂಬರ್ ಆಫ್ ಸೆಂಚೂರಿ ಹೊಡೆದಿರೋ ರೆಕಾರ್ಡ್ ಸಚಿನ್ ತೆಂಡೂಲ್ಕರ್ ಹೆಸರಲ್ಲೇ ಇದೆ. ಟೆಸ್ಟ್ ಕ್ರಿಕೆಟ್ನಲ್ಲಿ ಸಚಿನ್ ಒಟ್ಟು 51 ಶತಕಗಳನ್ನ ಹೊಡೆದಿದ್ದಾರೆ. ಇದನ್ನ ಬ್ರೇಕ್ ಮಾಡೋದು ಅಷ್ಟು ಸುಲಭ ಇಲ್ಲ. ಆದ್ರೆ ಕೇನ್ ವಿಲಿಯಮ್ಸನ್ಗೆ ಈಗ 33 ವರ್ಷ. ಹೀಗಾಗಿ ನ್ಯೂಜಿಲ್ಯಾಂಡ್ ಕ್ಯಾಪ್ಟನ್ಗೆ ಸಚಿನ್ ರೆಕಾರ್ಡ್ನ್ನ ಬ್ರೇಕ್ ಮಾಡೋಕೆ ಚಾನ್ಸ್ ಕೂಡ ಇದೆ. ಹೀಗಾಗಿ ಈಗ ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್, ಜೋ ರೂಟ್ ಮತ್ತು ವಿರಾಟ್ ಕೊಹ್ಲಿ ಈ ಆ್ಯಕ್ಟಿವ್ ಕ್ರಿಕೆಟರ್ಸ್ಗಳ ಮಧ್ಯೆ ಇಂಟ್ರೆಸ್ಟಿಂಗ್ ಸೆಂಚೂರಿ ರೇಸ್ ನಡೀತಾ ಇದೆ.
2020ರವರೆಗೂ ಹೈಯೆಸ್ಟ್ ಟೆಸ್ಟ್ ಸೆಂಚೂರಿಯ ಫ್ಯಾಬ್-4 ಲಿಸ್ಟ್ನಲ್ಲಿ ಕೇನ್ ವಿಲಿಯಮ್ಸನ್ 4ನೇ ಪೊಸೀಶನ್ನಲ್ಲಿದ್ರು. ಸ್ಟೀವ್ ಸ್ಮಿತ್, ಜೋ ರೂಟ್, ವಿರಾಟ್ ಕೊಹ್ಲಿ ಬಳಿಕ ಕೇನ್ ವಿಲಿಯಮ್ಸನ್ ಹೆಸರಿತ್ತು. ಆದ್ರೆ, ಆಗಾಗ ಇಂಜ್ಯೂರಿಗೆ ಒಳಗಾಗ್ತಿದ್ರೂ ಕಳೆದ ಮೂರು ವರ್ಷಗಳಲ್ಲಿ ಕೇನ್ ವಿಲಿಯಮ್ಸನ್ ಮೇಲಿಂದ ಮೇಲೆ ಸೆಂಚೂರಿ ಹೊಡೀತಾನೆ ಈಗ ಕರೆಂಟ್ ಪ್ಲೇಯರ್ಸ್ಗಳ ಪೈಕಿ ಟೆಸ್ಟ್ನಲ್ಲಿ ಹೈಯೆಸ್ಟ್ ಶತಕ ಹೊಡೆದವರಲ್ಲಿ ನಂಬರ್-1 ಪೊಸೀಶನ್ಗೆ ಬಂದು ನಿಂತಿದ್ದಾರೆ. ಸ್ಟ್ಯಾಟಿಕ್ಸ್ ಪ್ರಕಾರ ನೋಡೋದಾದ್ರೆ ಕಳೆದ ಮೂರು ವರ್ಷಗಳಲ್ಲಿ ಕೇನ್ ವಿಲಿಯಮ್ಸನ್ ದಿ ಬೆಸ್ಟ್ ಟೆಸ್ಟ್ ಬ್ಯಾಟ್ಸ್ಮನ್. ವಿಲಿಯಮ್ಸನ್ ಕನ್ಸಿಸ್ಟೆನ್ಸಿ ಮುಂದೆ ಯಾರನ್ನೂ ಕಂಪೇರ್ ಮಾಡೋಕೆ ಸಾಧ್ಯವಿಲ್ಲ. ಬ್ಯಾಟಿಂಗ್ ಮಾಡೋ ವೇಳೆ 50 ಕ್ರಾಸ್ ಮಾಡಿದ್ರು ಅಂದ್ರೆ ಕೇನ್ ವಿಲಿಯಮ್ಸನ್ ಸೆಂಚೂರಿ ಹೊಡೆದ್ರು ಅಂತಾನೆ ಅರ್ಥ. ಕೇನ್ ವಿಲಿಯಮ್ಸನ್ ಕ್ರೀಸ್ನಲ್ಲಿದ್ದಾರೆ ಅಂದ್ರೆ ಅವರು ಸ್ಕೋರ್ ಮಾಡ್ತಾ ಹೋಗೋದು ಗೊತ್ತೇ ಆಗೋದಿಲ್ಲ. ಹೊಡಿ, ಬಡಿ ಶಾಟ್ಸ್ಗಳಿಗಿಂತ ಹೆಚ್ಚಾಗಿ, ರನ್ನಿಂಗ್ ಬಿಟ್ವೀನ್ ದಿ ವಿಕೆಟ್ಗೆ ಹೆಚ್ಚು ಪ್ರಿಫರೆನ್ಸ್ ಕೊಡ್ತಾರೆ. ನೋಡ ನೋಡ್ತಿದ್ದಂಗೆ ಸೆಂಚೂರಿ ಹೊಡೆದಿರ್ತಾರೆ. ಹಾಗೆಯೇ ಸಾಫ್ಟ್ ಬ್ಯಾಟಿಂಗ್ ಸ್ಟೈಲ್. ಇಷ್ಟೆಲ್ಲಾ ಸೆಂಚೂರಿ ಹೊಡೆದ್ರೂ ಕೂಡ ಕೇನ್ ವಿಲಿಯಮ್ಸನ್ ವರ್ಲ್ಡ್ ಕ್ರಿಕೆಟ್ನಲ್ಲಿ ಅಂಡರ್ ರೇಟೆಡ್ ಕ್ರಿಕೆಟರೇ ಆಗಿರೋದು ನಿಜಕ್ಕೂ ಅನ್ಫಾರ್ಚ್ಯುನೇಟ್.
ಈ ಹಿಂದೆ ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಮಧ್ಯೆ ಟೆಸ್ಟ್ ಸೆಂಚೂರಿ ವಿಚಾರವಾಗಿ ಒಳ್ಳೆಯ ಕಾಂಪಿಟೀಶನ್ ಕೂಡ ಇತ್ತು. ಸದ್ಯ ಕೊಹ್ಲಿ ಟೆಸ್ಟ್ನಲ್ಲಿ 29 ಸೆಂಚೂರಿ ಹೊಡೆದಿದ್ದಾರೆ. ಒಂದು ವೇಳೆ ಇಂಗ್ಲೆಂಡ್ ವಿರುದ್ಧದ ಐದು ಮ್ಯಾಚ್ಗಳ ಟೆಸ್ಟ್ ಸೀರಿಸ್ನಲ್ಲಿ ಆಡ್ತಿದ್ರೆ, ಕೊಹ್ಲಿಯದ್ದು 30+ ಸೆಂಚೂರಿ ಈಸಿಯಾಗಿ ಆಗ್ತಿತ್ತು. ಆದ್ರೆ ಈಗ ವಿಲಿಯಮ್ಸನ್ ಕೊಹ್ಲಿ ನಾಲ್ಕು ಸೆಂಚೂರಿ ಲೀಡ್ನಲ್ಲಿದ್ದಾರೆ. ಆ್ಯಕ್ಚುವಲಿ ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಇಬ್ಬರೂ ಒಳ್ಳೆಯ ಸ್ನೇಹಿತರೇ. ಈ ಹಿಂದೆ ಸಾಕಷ್ಟು ಒಬ್ಬರೊಗೊಬ್ಬರು ಅಪ್ರಿಶಿಯೇಟ್ ಮಾಡಿದ್ರು. ವಿಲಿಯಮ್ಸನ್ ಬ್ಯಾಟಿಂಗ್ ನೋಡೋದನ್ನ ನಾನು ಯಾವಾಗಲೂ ಎಂಜಾಯ್ ಮಾಡ್ತೇನೆ ಅಂತಾ ಕೊಹ್ಲಿ ಹೇಳಿದ್ರು. ಕೇನ್ ವಿಲಿಯಮ್ಸನ್ ಬಗ್ಗೆ ಈವನ್ ಭಾರತೀಯ ಕ್ರಿಕೆಟ್ ಫ್ಯಾನ್ಸ್ಗೂ ಸಾಕಷ್ಟು ಅಭಿಮಾನ ಇದೆ. ಆ ರೀತಿಯ ಪರ್ಸನಾಲಿಟಿ ಅವರದ್ದು. 2019ರಲ್ಲಿ ಇಂಗ್ಲೆಂಡ್ VS ನ್ಯೂಜಿಲ್ಯಾಂಡ್ ನಡುವೆ ವರ್ಲ್ಡ್ಕಪ್ ಫೈನಲ್ ನಡೆದಾಗ ಭಾರತೀಯರಂತೂ ಕೇನ್ ವಿಲಿಯಮ್ಸನ್ ಟೀಮ್ನ್ನ ಸಪೋರ್ಟ್ ಮಾಡಿದ್ರು. ನಂತರ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಟೀಂ ಇಂಡಿಯಾವನ್ನೇ ಮಣಿಸಿ ನ್ಯೂಜಿಲ್ಯಾಂಡ್ ಟ್ರೋಫಿ ಗೆದ್ದಿತ್ತು. ಆಗಲೂ ಅಷ್ಟೇ, ಕೇನ್ ವಿಲಿಯಮ್ಸನ್ ಇದನ್ನಾದ್ರೂ ಗೆಲ್ಲಲಿ ಬಿಡಿ ಅಂತಾನೆ ಭಾರತೀಯರು ಕಾಮೆಂಟ್ ಮಾಡಿದ್ರು. ಕೇನ್ ವಿಲಿಯಮ್ಸನ್, ನ್ಯೂಜಿಲ್ಯಾಂಡ್ ಟೀಮ್ ಅಂದ್ರೆ ಭಾರತೀಯ ಕ್ರಿಕೆಟ್ ಫ್ಯಾನ್ಸ್ಗೂ ಒಂದು ಸಾಫ್ಟ್ ಕಾರ್ನರ್ ಇದ್ದೇ ಇದೆ.
ನೋ ಡೌಟ್.. ವರ್ಲ್ಡ್ ಕ್ರಿಕೆಟ್ಗೆ ಕೇನ್ ವಿಲಿಯಮ್ಸನ್ ನಿಜಕ್ಕೂ ಗಿಫ್ಟೆಟ್ ಪ್ಲೇಯರ್. 2010ರಲ್ಲಿ ಭಾರತದ ವಿರುದ್ಧ ಟೆಸ್ಟ್ ಡೆಬ್ಯೂ ಮಾಡಿದಾಗ ಫಸ್ಟ್ ಮ್ಯಾಚ್ನಲ್ಲೇ ಸೆಂಚೂರಿ ಹೊಡೆದಿದ್ರು. ಹಾಗೆಯೇ ವಿಲಿಯಮ್ಸನ್ ಕ್ಯಾಪ್ಟನ್ ಆದ ಬಳಿಕ ನ್ಯೂಜಿಲ್ಯಾಂಡ್ ಟೀಮ್ನ ದಿಕ್ಕೇ ಬದಲಾಯ್ತು. ಅದ್ರೆ ಐಸಿಸಿ ಟೂರ್ನಿ ಅಂತಾ ಬಂದಾಗ ಲಕ್ ಮಾತ್ರ ಅಷ್ಟಾಗಿ ಸಾಥ್ ಕೊಡ್ತಿಲ್ಲ. ಆದ್ರೆ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ನ್ನೇ ಗೆದ್ದಿರೋದು ಒಂದು ಸಮಾಧಾನಕರ ಸಂಗತಿ. ಎನಿವೇ ಕೇನ್ ವಿಲಿಯಮ್ಸನ್ ಬಗ್ಗೆ ಓವರ್ ಆಲ್ ಆಗಿ ಹೇಳೋದಾದ್ರೆ, ಈ ದಶಕ ಕಂಡ ವನ್ ಆಫ್ ಟಾಪ್ ಮೋಸ್ಟ್ ಕ್ರಿಕೆಟರ್. ಅದ್ರಲ್ಲಿ ಯಾವುದೇ ಅನುಮಾನ ಇಲ್ಲ.