ಶ್ವಾನ ಪ್ರಿಯರೇ ಹುಷಾರ್.. – ಇನ್ಮುಂದೆ ಪಿಟ್ಬುಲ್, ಬುಲ್ ಡಾಗ್ ಸೇರಿ 23 ತಳಿಗಳನ್ನು ಸಾಕಂಗಿಲ್ಲ!

ಇತ್ತೀಚಿನ ದಿನಗಳಲ್ಲಿ ಶ್ವಾನ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಬೀದಿ ನಾಯಿಗಳಲ್ಲದೇ, ಸಾಕು ನಾಯಿಗಳು ಕೂಡ ದಾಳಿ ನಡೆಸುತ್ತಿವೆ. ನಾಯಿ ದಾಳಿಯಿಂದ ಲೆಕ್ಕವಿಲ್ಲದಷ್ಟು ಮಂದಿ ಗಾಯಗೊಂಡಿದ್ದಾರೆ. ಹಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದೀಗ ಅಪಾಯಕಾರಿ ಶ್ವಾನಗಳ ಮಾರಾಟ ಮತ್ತು ಸಂತಾನೋತ್ಪತ್ತಿಯನ್ನು ನಿಷೇಧ ಮಾಡಬೇಕು ಅಂತಾ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಅಶ್ವಿನಿ ಪುನೀತ್ರಾಜ್ಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ – 43 ನೇ ವಸಂತಕ್ಕೆ ಕಾಲಿಟ್ಟ ಅಪ್ಪು ಪತ್ನಿ
ಈಗೀಗ ಸಮಾಜದಲ್ಲಿ ನಾಯಿಯ ಬಗೆಗಿನ ಭಯವೂ ಹೆಚ್ಚಾಗ್ತಿದೆ. ಮನೆಯಲ್ಲಿ ಸಾಕಿರುವ ಶ್ವಾನಗಳೇ ಮಾಲಕರ ಮೇಲೆ ದಾಳಿ ಮಾಡ್ತಿವೆ. ಈ ಹಿನ್ನೆಲೆಯಲ್ಲಿ ಪಿಟ್ಬುಲ್ ಟೆರಿಯರ್, ಅಮೇರಿಕನ್ ಬುಲ್ಡಾಗ್ಸ್, ರೊಟ್ವೀಲರ್ಸ್ ಮತ್ತು ಮ್ಯಾಸ್ಟಿಫ್ಸ್ ಸೇರಿದಂತೆ 23 ತಳಿಗಳ ಅಪಾಯಕಾರಿ ನಾಯಿಗಳ ಮಾರಾಟ ಮತ್ತು ಸಂತಾನೋತ್ಪತ್ತಿಯನ್ನು ನಿಷೇಧಿಸಬೇಕು ಅಂತಾ ಕೇಂದ್ರ ಸರ್ಕಾರ ಹೇಳಿದೆ.
ಪಶು ಸಂಗೋಪನಾ ಆಯುಕ್ತರ ಅಧ್ಯಕ್ಷತೆಯಲ್ಲಿ ರಚಿತವಾದ ತಜ್ಞರ ಸಮಿತಿಯು ಇಂತಹ ತಳಿಯ ನಾಯಿಗಳ ಆಮದನ್ನು ನಿಷೇಧಿಸುವಂತೆ ಶಿಫಾರಸು ಮಾಡಿದೆ. ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಇಂಡಿಯಾದ ಮನವಿ ಮತ್ತು ದೆಹಲಿ ಹೈಕೋರ್ಟ್ನಲ್ಲಿ ಸಲ್ಲಿಸಲಾದ ರಿಟ್ ಅರ್ಜಿಯ ನಂತರ ಕೇಂದ್ರವು ಈ ಕ್ರಮ ಕೈಗೊಂಡಿದೆ.
2005 ರಿಂದ 2019 ರವರೆಗಿನ 15 ವರ್ಷಗಳಲ್ಲಿ, ಅಮೆರಿಕದಲ್ಲಿ ನಾಯಿ ಕಡಿತದಿಂದ ಸಾವನ್ನಪ್ಪಿದ ಶೇಕಡಾ 66 ರಷ್ಟು (346) ಜನರ ಸಾವಿಗೆ ಪಿಟ್ಬುಲ್ಸ್ ಕಾರಣ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ, ಬ್ರಿಟನ್, ಜರ್ಮನಿ, ಡೆನ್ಮಾರ್ಕ್, ಸ್ಪೇನ್, ಕೆನಡಾ, ಇಟಲಿ ಮತ್ತು ಫ್ರಾನ್ಸ್ ಸೇರಿದಂತೆ 41 ದೇಶಗಳಲ್ಲಿ ಪಿಟ್ಬುಲ್ ಅನ್ನು ನಿಷೇಧಿಸಲಾಗಿದೆ. ಇದೀಗ ಭಾರತದಲ್ಲೂ ನಿಷೇಧಿಸಲು ಕೇಂದ್ರ ರಾಜ್ಯ ಸರ್ಕಾರಗಳಿಗೆ ಹೇಳಿದೆ.
ಪಿಟ್ಬುಲ್ ಟೆರಿಯರ್ಗಳು, ಟೋಸಾ ಇನು, ಅಮೇರಿಕನ್ ಸ್ಟಾಫರ್ಡ್ಶೈರ್ ಟೆರಿಯರ್, ಫಿಲಾ ಬ್ರೆಸಿಲಿರೊ, ಡೊಗೊ ಅರ್ಜೆಂಟಿನೋ, ಅಮೇರಿಕನ್ ಬುಲ್ಡಾಗ್, ಬೋರ್ಬೋಲ್, ಕಂಗಲ್, ಟಾರ್ನ್ಜಾಕ್, ಬ್ಯಾಂಡೋಗ್, ಸರ್ಪ್ಲಾನಿನಾಕ್, ಜಪಾನೀಸ್ ತೋಸಾ, ಅಕಿತಾ, ಮಾಸ್ಟಿಫ್ಸ್, ರಾಟ್ವೀಲರ್, ರೋಡೇಶಿಯನ್ ರಿಡ್ಜ್ಬ್ಯಾಕ್, ಮಾಸ್ಕೋಲ್ ಡೊಗ್ಬಾಗ್, ಮಾಸ್ಕೋಲ್ ಗಾರ್ಡ್ಬಾಗ್, ವಾರಿಯೊ, ಜರ್ಮನ್ ಶೆಫರ್ಡ್ ಮುಂತಾದ ಶ್ವಾನಗಳ ಮಾರಾಟ ಮತ್ತು ಸಂತಾನೋತ್ಪತ್ತಿಯನ್ನು ನಿಷೇಧಿಸಬೇಕು ಅಂತಾ ಸರ್ಕಾರ ತಿಳಿಸಿದೆ.