ರಚ್ಚು ಮೀಟಾದ್ಮೇಲೆ ರಿಲಾಕ್ಸ್? ಫೋಟೋ ಹಿಂದಿನ ರಹಸ್ಯ!
ಗೊತ್ತಿದ್ದೂ ಸರ್ಕಾರದ ನಾಟಕನಾ?

ನಟ ದರ್ಶನ್ಗೆ ಜೈಲಿನಲ್ಲಿ ರಾಜಾತಿಥ್ಯ ನೀಡ್ತಿರುವ ಸುದ್ದಿಯನ್ನು ಭಾರಿ ಸದ್ದು ಮಾಡ್ತಿದೆ. ಇದರಲ್ಲಿ ಬಹುಷಃ ಸಾಮಾನ್ಯ ಜನರಿಗೆ ಆಶ್ಚರ್ಯ ಪಡುವಂತದ್ದು ಏನೂ ಇಲ್ಲ.. ಯಾಕಂದ್ರೆ ಜೈಲಿನಲ್ಲಿ ಇಂತದ್ದೊಂದು ಲೋಕವಿದೆ ಎನ್ನುವ ಕಲ್ಪನೆ ಎಲ್ಲರಿಗೂ ಇದ್ದೇ ಇದೆ.. ಆದ್ರೆ ತಮಾಷೆ ಅನ್ಸೋದು.. ಇಷ್ಟು ದಿನ ನ್ಯೂಸ್ ಚಾನೆಲ್ಗಳು ಹೇಳ್ತಿದ್ದಂತೆ ದರ್ಶನ್ ಸಿಕ್ಕಾಪಟ್ಟೆ ಸೊರಗಿದ್ದಾರೆ.. ಪಶ್ಚಾತ್ತಾಪ ಅನುಭವಿಸುತ್ತಾ ಇದ್ದಾರೆ.. ರೇಣುಕಾಸ್ವಾಮಿ ಕೊಲೆ ಕೇಸಿನ ಬಗ್ಗೆ ಕುಗ್ಗಿ ಹೋಗಿದ್ದಾರೆ ಅಂತೆಲ್ಲಾ ದಿನಗಟ್ಟಲೆ ಸುದ್ದಿ ಮಾಡಿದ್ದಾರೆ.. ಆದ್ರೆ ಅದಕ್ಕೂ ಈಗಿನ ದರ್ಶನ್ ಫೋಟೋಗೂ ಯಾವುದೇ ಹೋಲಿಕೆ ಇಲ್ಲ. ದರ್ಶನ್ ಬಿಂದಾಸ್ ಆಗಿಯೇ ಜೈಲಿನಲ್ಲಿದ್ದಾರೆ.. ಹೊರಗೆ ಓಡಾಡ್ತಿಲ್ಲ ಅನ್ನೋದು ಬಿಟ್ರೆ ಜೈಲಿನಲ್ಲಿ ಎಲ್ಲಾ ಫೆಸಿಲಿಟಿಗಳು ಸಿಗ್ತಿರುವಂತಿದೆ.. ಹೊರಗಿನ ಫ್ರೆಂಡ್ಸ್ ವಾರಕ್ಕೊಮ್ಮೆ ಜೈಲಿಗೆ ಬಂದು ಮಾತಾಡಿಸ್ಕೊಂಡು ಹೋಗ್ತಿದ್ದಾರೆ.. ಹಾಗೆ ಹೊರಗಿಂದ ಬಂದವರೆದುರು, ದರ್ಶನ್ ಕಣ್ಣೀರು ಹಾಕ್ತಿದ್ದಾರಂತೆ.. ಬೇಸರ ಹೊರಹಾಕ್ತಿದ್ದಾರಂತೆ ಅಂತೆಲ್ಲಾ ಸುದ್ದಿಗಳು ಇಷ್ಟು ದಿನ ಬರುತ್ತಿದ್ದವು.. ಅದು ನಿಜ ಇದ್ದರೂ ಇರಬಹುದು. ಅದರಲ್ಲೂ ದರ್ಶನ್ ತನ್ನ ಪತ್ನಿಯ ಎದುರಂತೂ ಒಳ್ಳೆಯ ಗಂಡನಂತೆ ನಟನೆಯೂ ಮಾಡಿರಬಹುದು.. ನಾನು ಬದಲಾಗಿದ್ದೀನಿ ಕಣೇ ಎಂದು ತೋರಿಸಿಕೊಂಡಿರಬಹುದು.. ಪವಿತ್ರಾ ಗೌಡಳಿಂದಾಗಿಯೇ ಇಷ್ಟೆಲ್ಲಾ ಆಗೋಗಿದೆ.. ಇನ್ಮುಂದೆ ಹೀಗೆಲ್ಲಾ ಮಾಡಲ್ಲ.. ಸಭ್ಯನ ರೀತಿಯಲ್ಲೇ ಇರ್ತೇನೆ ಅಂತಲೂ ಹೆಂಡತಿಯೆದುರು ಫೋಸ್ ಕೊಟ್ಟಿರಬಹುದು.. ಆದ್ರೆ ದರ್ಶನ್ ಬದಲಾಗಿಲ್ಲ ಮತ್ತು ಬದಲಾಗೋದೂ ಇಲ್ಲ ಎಂಬುದು ಈಗ ವೈರಲ್ ಆಗಿರುವ ಫೋಟೋದಿಂದಲೇ ಗೊತ್ತಾಗಿದೆ.. ಯಾಕಂದ್ರೆ ದರ್ಶನ್ ಸುತ್ತಲೂ ಇರೋದು ರೌಡಿಗಳ ಗ್ಯಾಂಡ್.. ಇಷ್ಟು ದಿನ ಡಿ ಗ್ಯಾಂಗ್ ಎಂದು ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪ ಹೊತ್ತಿರುವ ದರ್ಶನ್ ಮತ್ತು ಅವರ ಜೊತೆಗಿದ್ದ ಉಳಿದ ಆರೋಪಿಗಳನ್ನು ಕರೆಯಲಾಗುತ್ತಿತ್ತು.. ಆದ್ರೀಗ ರಿಯಲ್ ರೌಡಿಗಳ ಜೊತೆಗೆ, ದರ್ಶನ್ ಸ್ನೇಹ ಸಂಪಾದಿಸಿರುವುದು ಗೊತ್ತಾಗಿದೆ.. ಅಲ್ಲಿಗೆ ಜೈಲಿನೊಳಗಿರುವ ರೌಡಿಗಳ ಪಾಲಿಗೆ ಸೆಲೆಬ್ರಿಟಿ ದರ್ಶನ್ ಬಾಸ್ ಆಗಿರುವುದು ಭಾಸವಾಗುತ್ತಿದೆ..
ಇದನ್ನೂ ಓದಿ: Kohli ಜರ್ಸಿ ಸೇಲ್.. ದಾಖಲೆ ಬರೆದ Rohit ಬ್ಯಾಟ್! -KL ರಾಹುಲ್ ಗೆ ಹಣದ ಹೊಳೆ..!
ಇಲ್ಲಿ ಕೆಲವು ಇಂಪಾರ್ಟೆಂಟ್ ವಿಷಯಗಳನ್ನು ಗಮನಿಸಬೇಕು.. ಜೈಲಿನಲ್ಲಿರುವ ದರ್ಶನ್ ಜುಲೈ 10ನೇ ತಾರೀಖಿನಂದು ರಾಜ್ಯದ ಹೈಕೋರ್ಟ್ನಲ್ಲೊಂದು ರಿಟ್ ಅರ್ಜಿ ಹಾಕಿದ್ದರು.. ಅದರಲ್ಲಿ ತನಗೆ ಜೈಲು ಸೇರಿದ್ಮೇಲೆ ಹುಷಾರಿಲ್ಲ.. ಇಲ್ಲಿನ ಫುಡ್ ಹಿಡಿಸ್ತಾ ಇಲ್ಲ.. ಇದ್ರಿಂದಾಗಿ ತೂಕ ಬೇರೆ ಇಳಿಕೆಯಾಗಿದೆ.. ನನ್ನ ಆರೋಗ್ಯ ಕಾಪಾಡಿಕೊಳ್ಳಲು ನನಗೆ ಪ್ರೋಟೀನ್ ಇರುವ ಆಹಾರ ಕೊಡ್ಬೇಕು.. ಹಾಗೆ ಮಲ್ಕೊಳ್ಳುವ ತಲೆಯ ಅಡಿಗೆ ಇಡೋದಿಕ್ಕೆ ಒಂದು ದಿಂಬು.. ಮಲ್ಲೊಳ್ಳೋಕೆ ಒಂದು ಹಾಸಿಗೆ ಕೊಟ್ರೆ ಒಳ್ಳೇದಾಗ್ತಿತ್ತು ಅಂತ ಬೇಡಿಕೊಂಡಿದ್ದರು.. ಆದ್ರೆ ತಮಾಷೆ ಅನ್ಬೇಕೋ ವ್ಯವಸ್ಥೆಯ ವಿಪರ್ಯಾಸ ಅನ್ನಬೇಕೋ ಗೊತ್ತಿಲ್ಲ.. ಜೈಲಲ್ಲಿ ಕುಳಿತು ಜುಮ್ಮಂತ ಧೂಮಪಾನ ಮಾಡ್ತಿರುವ ದರ್ಶನ್ಗೆ ಇನ್ನು ಪ್ರೋಟೀನ್ ಇರುವ ಆಹಾರ ಅಂದ್ರೆ ಒಳ್ಳೆಯ ಚಿಕನ್ ಊಟ ಸಿಗ್ತಿಲ್ಲ ಅಂತ ಹೇಳಿದ್ರೆ ನಂಬೋಕೆ ಸಾಧ್ಯಾನಾ? ಈಗಾಗ್ಲೇ ಕೆಲವು ಸುದ್ದಿ ಚಾನೆಲ್ಗಳು ವರದಿ ಮಾಡಿದ್ದನ್ನು ನಂಬೋದಾದ್ರೆ ದರ್ಶನ್ಗೆ ನೇರವಾಗಿ ಬೆಂಗಳೂರಿನ ಬನಶಂಕರಿಯಲ್ಲಿರುವ ಶಿವಾಜಿ ಮಿಲ್ಟ್ರಿ ಹೋಟೇಲ್ನಿಂದಲೇ ಬಿರಿಯಾನಿ ಸಪ್ಲೈ ಆಗ್ತಿದ್ಯಂತೆ.. ಹೊಟೇಲ್ ಊಟ ತಿಂದೂ ತಿಂದೂ ಅಭ್ಯಾಸ ಆದವರಿಗೆ ಮನೆಯೂಟ ಯಾಕೆ ಸ್ವಾಮಿ ಅಂತ ಈಗ್ಲಾದ್ರೂ ಜನರಿಗೆ ಅರ್ಥ ಆಗಿರಬಹುದು.. ಇದರ ಜೊತೆಗೆ ಕುಡಿಯೋದಿಕ್ಕೂ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗ್ತಿದೆ.. ಇಷ್ಟೆಲ್ಲಾ ಇದ್ಮೇಲೆ ದರ್ಶನ್ಗೆ ಈಗಿನ ಜೈಲು ಒಂಥರಾ ಶೂಟಿಂಗ್ ನಡುವೆ ರಿಲಾಕ್ಸ್ ಆಗೋದಿಕ್ಕೆ ಸಮಯ ಸಿಕ್ಕಂತಿದೆ.. ಇವರ ಪರವಾಗಿ ಕನ್ನಡ ಇಂಡಸ್ಟ್ರಿಯ ಹಲವರು ಈಗಾಗ್ಲೇ ಮೊಸಳೆ ಕಣ್ಣೀರು ಸುರಿಸ್ತಾ ಇದ್ರು.. ಅದ್ರಲ್ಲೂ ದಚ್ಚು ಮೀಟ್ ಮಾಡಿ ಬಂದಿದ್ದ ರಚ್ಚು.. ರಾಜ ಎಲ್ಲಿದ್ದರೂ ರಾಜನ ತರಾನೇ ಇರಬೇಕು..ಅವರನ್ನು ರಾಜನ ಥರ ನೋಡೋದಿಕ್ಕೆ ನಾನು ಬಯಸ್ತೀನಿ ಅಂತೆಲ್ಲಾ ಹೇಳಿದ್ದರು.. ಈಗಿರುವ ಮಾಹಿತಿಯ ಪ್ರಕಾರ ರಚಿತಾ ರಾಮ್ ಜೈಲಲ್ಲಿ ಭೇಟಿಯಾಗಿ ಬಂದ ಸಂಜೆಯೇ ದರ್ಶನ್ ಜೈಲಿನಲ್ಲಿ ವಿಲ್ಸನ್ ಗಾರ್ಡನ್ ನಾಗನ ಜೊತೆ ಕುಳಿತು ರಾಜನ ರೀತಿಯಲ್ಲಿ ಕಾಫಿ ಕುಡೀತಾ ರಿಲಾಕ್ಸ್ ಆಗಿದ್ದು ಎನ್ನಲಾಗಿದೆ..
ಈಗ ಸರ್ಕಾರದವರು ಅಚಾನಕ್ಕಾಗಿ ಇವೆಲ್ಲಾ ಆಗೋಗಿದೆ.. ನಮ್ಗೆ ಇದೆಲ್ಲಾ ಗೊತ್ತೇ ಇರಲಿಲ್ಲ.. ಜೈಲಲ್ಲಿ ದರ್ಶನ್ಗೆ ಹೀಗೆಲ್ಲಾ ಫೆಸಿಲಿಟಿ ಕೊಡ್ತಿದ್ದವರನ್ನು ಸಸ್ಪೆಂಡ್ ಮಾಡ್ತಿದ್ದೀವಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.. ಇದೇನೋ ದೊಡ್ಡ ಘೋಷಣೆಯೂ ಅಲ್ಲ.. ಕಠಿಣ ಕ್ರಮವೂ ಅಲ್ಲ.. ಸರ್ಕಾರದ ವೈಫಲ್ಯವನ್ನು ಮುಚ್ಚಿಕೊಳ್ಳುವ ಒಂದು ಸಾಮಾನ್ಯ ಪ್ರಯತ್ನ ಅಷ್ಟೇ ಅನ್ನುವಂತದ್ದೂ ಎಲ್ಕೆಜಿ ಓದುವ ಮಕ್ಕಳಿಗೂ ಅರ್ಥ ಆಗಬಹುದು.. ಯಾಕಂದ್ರೆ ಜೈಲಲ್ಲಿ ಇಷ್ಟೆಲ್ಲಾ ಫೆಸಿಲಿಟಿ ದರ್ಶನ್ನಂತಹ ಒಬ್ಬ ಸೆಲೆಬ್ರಿಟಿಗೆ ಸಿಗುತ್ತದೆ ಎನ್ನುವುದು ಸರ್ಕಾರದ ಗಮನಕ್ಕೆ ಬರೋದೇ ಇಲ್ವಾ? ಅದೆಲ್ಲೋಭೂಗತನಾಗಿರುವ ಉಗ್ರನ ಬಗ್ಗೆ ಮಾಹಿತಿ ಹುಡುಕಿ ತೆಗೆಯುವ ನಮ್ಮ ಇಂಟೆಲಿಜೆನ್ಸ್ ವ್ಯವಸ್ಥೆಗೆ ಜೈಲಲ್ಲಿ ಏನು ನಡೀತಿದೆ ಎನ್ನವುದು ಗೊತ್ತಾಗಲ್ವಾ? ನಿಮಗೆ ಗೊತ್ತಿರಲಿ.. ನಮ್ಮ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿದವರೂ ಕೈದಿಗಳಾಗಿದ್ದಾರೆ.. ಹಾಗಿದ್ದರೆ ಅಲ್ಲೂ ಏನ್ ನಡೀತಿದೆ ಎನ್ನುವುದರ ಬಗ್ಗೆ ಗುಪ್ತಚರ ಇಲಾಖೆ ಕಣ್ಣಿಟ್ಟಿರಲ್ವಾ? ಅಷ್ಟು ಸುಲಭವಾಗಿ ದರ್ಶನ್ಗೆ ಇಷ್ಟೆಲ್ಲಾ ಫೆಸಿಲಿಟಿ ಕೊಡೋದಿಕ್ಕೆ ಸಾಧ್ಯ ಇದ್ಯಾ? ಇಂತಹ ಹಲವು ಪ್ರಶ್ನೆಗಳು ಕೂಡ ಇಲ್ಲಿ ಮೂಡಿವೆ.. ಈಗ ದರ್ಶನ್ ಅವರನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವ ಬಗ್ಗೆ ಸರ್ಕಾರ ಯೋಚಿಸ್ತಿದೆ.. ದರ್ಶನ್ನನ್ನು ಬಳ್ಳಾರಿ ಜೈಲಿಗೋ ಅಥವಾ ಕಲಬುರಗಿ ಜೈಲಿಗೋ ಕಳಿಸಿದ್ರೆ ನಿಜವಾದ ಜೈಲಿನ ದರ್ಶನ ಆಗಬಹುದೇನೋ.. ಅದು ಬಿಟ್ಟು ಕೊಲೆ ಆರೋಪಿಗೆ ವಿವಿಐಪಿ ಫೆಸಿಲಿಟಿ ಕೊಡೋದಿದ್ರೆ ಜೈಲಿನ ಬದಲು ಯಾವುದಾದ್ರೂ ಫೈಸ್ ಸ್ಟಾರ್ ಹೊಟೇಲ್ನಲ್ಲಿ ಬಿಟ್ಟು ಬಿಡೋದು ಒಳ್ಳೇದೇನೋ ಎನ್ನುವ ಹಾಗಾಗಿದೆ ನಮ್ಮ ವ್ಯವಸ್ಥೆ.