ರೈಲ್ವೆ ಇಲಾಖೆ ಸಿಬ್ಬಂದಿಗೆ ಕೇಂದ್ರದಿಂದ ಸಿಹಿಸುದ್ದಿ- ಶೀಘ್ರವೇ ವೇತನ ಹೆಚ್ಚಳ

ರೈಲ್ವೆ ಇಲಾಖೆ ಸಿಬ್ಬಂದಿಗೆ ಕೇಂದ್ರದಿಂದ ಸಿಹಿಸುದ್ದಿ- ಶೀಘ್ರವೇ ವೇತನ ಹೆಚ್ಚಳ

ನವದೆಹಲಿ: ಸುಮಾರು 80 ಸಾವಿರ ರೈಲ್ವೆ ಇಲಾಖೆ ಸಿಬ್ಬಂದಿಗೆ ಕೇಂದ್ರ ಸರಕಾರ ಸಿಹಿ ಸುದ್ದಿ ನೀಡಿದ್ದು, ಶೀಘ್ರವೇ ನೌಕರರ ವೇತನವು 2,500 ರಿಂದ 4000 ರೂ.ವರೆಗೆ ಹೆಚ್ಚಳವಾಗಲಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಭಾರತಕ್ಕೆ ಭೇಟಿ – ಭಾರತಕ್ಕೇನು ಲಾಭ?

ಈ ಬಗ್ಗೆ ಮಾತನಾಡಿರುವ ರೈಲ್ವೆ ಮಂಡಳಿ ಮುಖ್ಯಸ್ಥ ವಿ.ಕೆ. ತ್ರಿಪಾಠಿ ಅವರು, ವೇತನ ಏರಿಕೆಯಿಂದ ಆರ್ಥಿಕ ಹೊರೆ ಆಗುವುದಿಲ್ಲ. ಯಾಕೆಂದರೆ ವಿವಿಧ ಸುಧಾರಣೆ ಕ್ರಮಗಳಿಂದ ಇಲಾಖೆಯಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಲಾಗಿದೆ ಎಂದಿದ್ದಾರೆ.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ವರ್ಗ-7ರ ನೌಕರರ (ಸೂಪರ್‌ವೈಸರ್‌ ಗ್ರೇಡ್‌) ವೇತನ ಸ್ತಬ್ಧವಾಗಿರುವುದನ್ನು ಗಮನಿಸಿ, ಶೀಘ್ರವೇ ಅವರಿಗೆಲ್ಲ ಗ್ರೂಪ್‌-ಎ ಅಧಿಕಾರಿಗಳಂತೆ ವೇತನ ಏರಿಸುವ ಪ್ರಸ್ತಾವನೆಯನ್ನು ಪ್ರಧಾನಿಗೆ ಕಳುಹಿಸಿಕೊಟ್ಟಿದ್ದರು. ಇದಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ ನೀಡಿದ್ದಾರೆ ಎಂದು ಹೇಳಿದರು.

ವೇತನ ಹೆಚ್ಚಳದಿಂದ ಪ್ರತಿಯೊಬ್ಬರಿಗೂ ಸರಾಸರಿ ತಿಂಗಳಿಗೆ 2,500 ರೂ.ನಿಂದ 4,000 ರೂ.ವರೆಗೆ ಹೆಚ್ಚುವರಿ ವೇತನ ಸಿಗುತ್ತದೆ. ಇದರಿಂದ ವೇತನದ ಬಿಲ್ 10 ಸಾವಿರ ಕೋಟಿ ರೂ ಆಗಲಿದ್ದು, ಈ ಕ್ರಮವು ಆರ್ಥಿಕವಾಗಿ ತಟಸ್ಥವಾಗಿರುತ್ತದೆ. ಏಕೆಂದರೆ ರೈಲ್ವೆ ತನ್ನ ಡೀಸೆಲ್ ಬಿಲ್‌ನಲ್ಲಿ ಮಾಡುವ ಉಳಿತಾಯದಿಂದ ಇದನ್ನು ಹೆಚ್ಚಾಗಿ ಸರಿದೂಗಿಸಲಾಗುತ್ತದೆ. ಇದು ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಸ್ & ಟಿ ಟ್ರಾಫಿಕ್ ಕೆಮಿಕಲ್ ಮತ್ತು ಎಸ್ & ಟಿ, ಮೆಟಲರ್ಜಿಕಲ್, ಸ್ಟೋರ್ಸ್ ಮತ್ತು ಕಮರ್ಷಿಯಲ್ ವಿಭಾಗದ ಮೇಲ್ವಿಚಾರಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

suddiyaana