ಮಕ್ಕಳ ಮೇಲಿನ ದೌರ್ಜನ್ಯ ದೃಶ್ಯ – ಯೂಟ್ಯೂಬ್‌ ಸೇರಿ ಸೋಶಿಯಲ್‌ ಮೀಡಿಯಾಗಳಿಗೆ ಕೇಂದ್ರ ಖಡಕ್ ಸೂಚನೆ!

ಮಕ್ಕಳ ಮೇಲಿನ ದೌರ್ಜನ್ಯ ದೃಶ್ಯ – ಯೂಟ್ಯೂಬ್‌ ಸೇರಿ ಸೋಶಿಯಲ್‌ ಮೀಡಿಯಾಗಳಿಗೆ ಕೇಂದ್ರ ಖಡಕ್ ಸೂಚನೆ!

ನವದೆಹಲಿ: ಯೂಟ್ಯೂಬ್‌, ಟ್ವಿಟರ್‌ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಚಾರಗಳನ್ನು ತೆಗೆದುಹಾಕುವಂತೆ ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೂಚನೆ ನೀಡಿದೆ. ಒಂದು ವೇಳೆ ನಿಯಮ ಪಾಲಿಸದೇ ಇದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಮಕ್ಕಳ ಮೇಲಿನ ದೌರ್ಜನ್ಯದ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಬೇಕು. ಒಂದು ವೇಳೆ ಈ ನಿಯಮವನ್ನು ಪಾಲಿಸದೇ ಇದ್ದಲ್ಲಿ ಸಾಮಾಜಿಕ ಜಾಲತಾಣಗಳ ಸಂಸ್ಥೆಗಳು ತೆಗೆದುಕೊಳ್ಳದಿದ್ದಲ್ಲಿ ಐಟಿ ಕಾಯಿದೆಯ (IT Act) ಸೆಕ್ಷನ್ 79ರ ಅಡಿಯಲ್ಲಿ ನೋಟಿಸ್ ನೀಡುವ ಎಚ್ಚರಿಕೆಯನ್ನು ನೀಡಲಾಗಿದೆ. ಅಲ್ಲದೇ ನಿಯಮಗಳನ್ನು ಅನುಸರಿಸದಿರುವುದು ಐಟಿ ಕಾಯ್ದೆ 2021ರ 3(1) (ಬಿ) ಮತ್ತು ನಿಯಮ 4 (4)ರ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಮಾಸಗಳು ಕಳೆದರೂ ಮಾಸದ ಹೃದಯದೊಳಗಿನ ಈ ಮಂದಹಾಸ – ಪತ್ನಿ ಸ್ಪಂದನಾ ನೆನಪಲ್ಲಿ ಚಿನ್ನಾರಿ ಮುತ್ತ ಭಾವುಕ

ಐಟಿ ಕಾಯಿದೆಯ ಸೆಕ್ಷನ್ 66ಇ, 67ಎ ಮತ್ತು 67ರ ಅಡಿಯಲ್ಲಿ ಅಶ್ಲೀಲ ವಿಷಯವನ್ನು ಆನ್‍ಲೈನ್‍ನಲ್ಲಿ ಪ್ರಸಾರ ಮಾಡಿದರೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ. ಅಲ್ಲದೇ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂತಹ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದೆ.

ಅಪ್ರಾಪ್ತ ವಯಸ್ಕರಿಗೆ ಅಪಾಯವನ್ನುಂಟು ಮಾಡುವ ಯಾವುದೇ ರೀತಿಯ ವಿಷಯವನ್ನು ನಾವು ಸಹಿಸುವುದಿಲ್ಲ. ಆನ್‍ಲೈನ್‍ನಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯ ವಿರುದ್ಧ ಹೋರಾಡಲು ನಾವು ತಂತ್ರಜ್ಞಾನ ಮತ್ತು ತಂಡಗಳ ಮೇಲೆ ಹೆಚ್ಚು ಹೂಡಿಕೆ ಮಾಡಿದ್ದೇವೆ. ಸಾಧ್ಯವಾದಷ್ಟು ಬೇಗ ಇದರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವಾಲಯ ತಿಳಿಸಿದೆ.

ಈ ನಿಯಮದ ಉಲ್ಲಂಘನೆಗಾಗಿ ನಾವು 94,000 ಚಾನಲ್‍ಗಳು ಮತ್ತು 20.5 ಲಕ್ಷ ವೀಡಿಯೊಗಳನ್ನು ತೆಗೆದುಹಾಕಿದ್ದೇವೆ. ಅಪ್ರಾಪ್ತ ವಯಸ್ಕರು ಮತ್ತು ಕುಟುಂಬಗಳಿಗೆ ಸಾಧ್ಯವಾದಷ್ಟು ಉತ್ತಮ ರಕ್ಷಣೆಯನ್ನು ಒದಗಿಸಲು ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಯೂಟ್ಯೂಬ್ ವಕ್ತಾರರು ಸಚಿವಾಲಯದ ಸೂಚನೆಗೆ ಪ್ರತಿಕ್ರಿಯಿಸಿದ್ದಾರೆ.

ಅಕ್ಟೋಬರ್ ಮೊದಲ ಐದು ದಿನಗಳಲ್ಲಿ 8,198 ಗುಂಪುಗಳು ಮತ್ತು ಚಾನೆಲ್‍ಗಳನ್ನು ನಿಷೇಧಿಸಲಾಗಿದೆ ಎಂದು ಟೆಲಿಗ್ರಾಮ್ ವಕ್ತಾರ ರೆಮಿ ವಾಘನ್ ತಿಳಿಸಿದ್ದಾರೆ.

Shwetha M