ದೀಪಾವಳಿಗೆ ಕೇಂದ್ರ ಸರ್ಕಾರದಿಂದ ಬಂಪರ್‌ – ಸರ್ಕಾರಿ ನೌಕರರಿಗೆ ಸಿಗಲಿದೆ 7,000 ರೂಪಾಯಿ ಬೋನಸ್‌!

ದೀಪಾವಳಿಗೆ ಕೇಂದ್ರ ಸರ್ಕಾರದಿಂದ ಬಂಪರ್‌ – ಸರ್ಕಾರಿ ನೌಕರರಿಗೆ ಸಿಗಲಿದೆ 7,000 ರೂಪಾಯಿ ಬೋನಸ್‌!

ನವದೆಹಲಿ: ಕೇಂದ್ರ ಸರ್ಕಾರ ಈ ವರ್ಷದ ದೀಪಾವಳಿಗೆ ಬಂಪರ್‌ ಕೊಡುಗೆಯೊಂದನ್ನು ಘೋಷಿಸಿದೆ. ಹಬ್ಬದ ಪ್ರಯುಕ್ತ ಸರ್ಕಾರಿ ನೌಕರರಿಗೆ 7,000 ರೂಪಾಯಿ ಬೋನಸ್‌ ನೀಡಲು ಮುಂದಾಗಿದೆ.

ಹೌದು, ದೀಪಾವಳಿಗೆ ಕೇಂದ್ರ ಸರ್ಕಾರ ಸರ್ಕಾರಿ ನೌಕರರಿಗೆ ಬೋನಸ್‌ ನೀಡುತ್ತಿದೆ. ಆದರೆ ಇದು ಎಲ್ಲಾ ನೌಕರರಿಗೆ ಸಿಗುವುದಿಲ್ಲ. ಈ ಬೋನಸ್‌ ಕೇವಲ ಕೇಂದ್ರ ಸರ್ಕಾರದ ಗ್ರೂಪ್ ಸಿ ನೌಕರರು ಹಾಗೂ ನಾನ್ ಗೆಜೆಟೆಡ್ ಗ್ರೂಪ್ ಬಿ ದರ್ಜೆಯ ಅಧಿಕಾರಿಗಳಿಗೆ ಸಿಗುತ್ತಿದೆ. ಅರೆಸೇನಾ ಪಡೆಗಳೂ ಈ ಬೋನಸ್ ಫಲಾನುಭವಿಗಳ ಪಟ್ಟಿಯಲ್ಲಿದ್ದಾರೆ. ವರದಿ ಪ್ರಕಾರ ಈ ಕೇಂದ್ರ ಸರ್ಕಾರಿ ನೌಕರರಿಗೆ 2022-23ರ ಸಾಲಿಗೆ 7,000 ರೂ ಮಿತಿಯ ಬೋನಸ್ ಅನ್ನು ಕೇಂದ್ರ ಹಣಕಾಸು ಸಚಿವಾಲಯ ನಿಗದಿಪಡಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮದುವೆ ಸಮಾರಂಭವೊಂದರಲ್ಲಿ ಸಚಿವರ ಕಾಲ ಕೆಳಗೆ ರಾಶಿ ರಾಶಿ ನೋಟು – ಶಿವಾನಂದ ಪಾಟೀಲ್ ವಿರುದ್ಧ ಸಾರ್ವಜನಿಕರ ಆಕ್ರೋಶ

ಉತ್ಪನ್ನತೆ ಆಧಾರಿತ ಬೋನಸ್ ಸ್ಕೀಮ್​ನ ವ್ಯಾಪ್ತಿಗೆ ಸೇರದ ಕೇಂದ್ರ ಸರ್ಕಾರದ ಗ್ರೂಪ್ ಸಿ ಮತ್ತು ಗ್ರೂಪ್ ಬಿ ಶ್ರೇಣಿಯ ನಾನ್ ಗೆಜೆಟೆಡ್ ಉದ್ಯೋಗಿಗಳಿಗೆ 2022-23ರ ಅಕೌಂಟಿಂಗ್ ವರ್ಷಕ್ಕೆ 30 ದಿನಗಳ ಭತ್ಯೆಗೆ ಸಮವಾದ ಬೋನಸ್ ಅನ್ನು ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಸೇರಿದ ವೆಚ್ಚ ಇಲಾಖೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಬೋನಸ್ ನೀಡಲು ಕೆಲ ಷರತ್ತುಗಳು..

ಮೇಲೆ ತಿಳಿಸಿದ ವರ್ಗದ ಉದ್ಯೋಗಿಗಳು 2023ರ ಮಾರ್ಚ್ 31ರಲ್ಲಿ ಸೇವೆಯಲ್ಲಿರಬೇಕು. ಹಾಗೂ 2022-23ರ ಹಣಕಾಸು ವರ್ಷದಲ್ಲಿ ಕನಿಷ್ಠ 6 ತಿಂಗಳು ನಿರಂತರ ಸೇವೆಯಲ್ಲಿರಬೇಕು. ಇಂಥವರು ಬೋನಸ್​​ಗೆ ಅರ್ಹರಾಗಿರುತ್ತಾರೆ.

ಎಲ್ಲರಿಗೂ ಸಮಾನವಾಗಿ 7,000 ರೂ ಬೋನಸ್ ಸಿಗುವುದಿಲ್ಲ. ಸರಾಸರಿ ಭತ್ಯೆ ಅಥವಾ ನಿಗದಿಪಡಿಸಿದ ಬೋನಸ್ ಮಿತಿಯಲ್ಲಿ ಯಾವುದು ಕಡಿಮೆಯೋ ಅಷ್ಟನ್ನು ನೀಡಲಾಗುತ್ತದೆ.

ತಾತ್ಕಾಲಿಕ ಹುದ್ದೆಯ ನೌಕರರಾದರೆ ವಾರದಲ್ಲಿ 6 ದಿನ ಕೆಲಸ ಇರುವ ಕಚೇರಿಗಳಲ್ಲಿ ವರ್ಷಕ್ಕೆ ಕನಿಷ್ಠ 240 ದಿನಗಳು ಸೇವೆಯಲ್ಲಿ ಹಾಜರಾತಿ ಹೊಂದಿರಬೇಕು. ಈ ರೀತಿ 3 ಹಾಗೂ ಹೆಚ್ಚು ವರ್ಷ ಕರ್ತವ್ಯ ನಿಭಾಯಿಸಿರಬೇಕು. ಒಂದು ವೇಳೆ ವಾರಕ್ಕೆ 5 ದಿನ ಕೆಲಸ ಇರುವ ಕಚೇರಿಯಲ್ಲಾದರೆ ಇವರು ವರ್ಷಕ್ಕೆ 206 ದಿನಗಳಂತೆ ಕನಿಷ್ಠ 3 ವರ್ಷ ಕೆಲಸಕ್ಕೆ ಹಾಜರಿದ್ದಿರಬೇಕು.

Shwetha M