ಅನಿಮಲ್‌ ಚಿತ್ರತಂಡಕ್ಕೆ ಬಿಗ್‌ ಶಾಕ್!‌ – ರಣಬೀರ್, ರಶ್ಮಿಕಾ ಜೋಡಿಯ ಹಸಿಬಿಸಿ ದೃಶ್ಯಗಳಿಗೆ ಕತ್ತರಿ!

ಅನಿಮಲ್‌ ಚಿತ್ರತಂಡಕ್ಕೆ ಬಿಗ್‌ ಶಾಕ್!‌ – ರಣಬೀರ್, ರಶ್ಮಿಕಾ ಜೋಡಿಯ ಹಸಿಬಿಸಿ ದೃಶ್ಯಗಳಿಗೆ ಕತ್ತರಿ!

ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ಅನಿಮಲ್‌ ಡಿಸೆಂಬರ್‌ 1 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹಾಗೂ ರಣಬೀರ್‌ ಕಪೂರ್‌ ಸಿಕ್ಕಾಪಟ್ಟೆ ಬೋಲ್ಡ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಪಾತ್ರಗಳು ತುಂಬಾ ರೋಮ್ಯಾಂಟಿಕ್ ಆಗಿ ಮೂಡಿಬಂದಿದ್ದು,  ಸಿನಿಮಾದಲ್ಲಿ ಆಗಾಗ ಚುಂಬನದ ದೃಶ್ಯಗಳು ಕಾಣಿಸಿಕೊಂಡಿವೆ. ಅದರಲ್ಲೂ ಪ್ರೈವೇಟ್ ಜೆಟ್‌ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ಅವರು ಲಿಪ್ ಲಾಕ್ ಮಾಡಿರುವ ದೃಶ್ಯ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಸಿನಿಮಾ ಬಿಡುಗಡೆಯ ಖುಷಿಯಲ್ಲಿದ್ದ ಚಿತ್ರತಂಡಕ್ಕೆ ಶಾಕಿಂಗ್‌ ಸುದ್ದಿಯೊಂದು ಹೊರಬಂದಿದೆ.  ರಶ್ಮಿಕಾ ಮತ್ತು ರಣಬೀರ್ ಜೋಡಿಯ ಹಸಿಬಿಸಿ ದೃಶ್ಯಗಳಿಗೆ ಸೆನ್ಸಾರ್‌ ಮಂಡಳಿ ಕತ್ತರಿ ಹಾಕಿದೆ.

ಇದನ್ನೂ ಓದಿ: ವಿಮಾನದಲ್ಲೇ ದಂಪತಿ ಮಧ್ಯೆ ಮಾರಾಮಾರಿ – ಬ್ಯಾಂಕಾಕ್‍ಗೆ ಹೊರಟಿದ್ದ ವಿಮಾನ ದೆಹಲಿಯಲ್ಲಿ ತುರ್ತು ಭೂಸ್ಪರ್ಶ!

ಹೌದು, ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಅನಿಮಲ್ ಡಿಸೆಂಬರ್‌ 1 ರಂದು ತೆರೆಗೆ ಬರಲು ಸಿದ್ಧವಾಗಿದೆ. ಸಂದೀಪ್ ರೆಡ್ಡಿ ವಂಗ ನಿರ್ದೇಶನದ  ಹಾಗೂ ರಣ್ ಬೀರ್ ಕಪೂರ್, ಕನ್ನಡತಿ ರಶ್ಮಿಕಾ ಮಂದಣ್ಣ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ರಿಲೀಸ್‌ ಖುಷಿಯಲ್ಲಿದ್ದ ಸಿನಿಮಾ ತಂಡ ಹಾಗೂ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಚಿತ್ರಕ್ಕೆ ಸೆನ್ಸಾರ್ (Censor) ಆಗಿದ್ದು, ‘ಎ’ ಪ್ರಮಾಣ ಪತ್ರವನ್ನು ನೀಡಲಾಗಿದೆ. ಜೊತೆಗೆ ರಶ್ಮಿಕಾ ಮತ್ತು ರಣಬೀರ್ ಜೋಡಿಯ ಹಸಿಬಿಸಿ ದೃಶ್ಯಗಳನ್ನೂ ತೆಗೆದು ಹಾಕುವಂತೆ ಸೂಚಿಸಲಾಗಿದೆ.

ನಿಮಲ್ ಸಿನಿಮಾಗೆ ನೀಡಿದ ಸರ್ಟಿಫಿಕೇಟ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಟಿಸಿಆರ್ 02:28:37 ರಲ್ಲಿ ರಣಬೀರ್ ಮತ್ತು ರಶ್ಮಿಕಾ ಕ್ಲೋಸ್-ಅಪ್ ಶಾರ್ಟ್‌ಗಳನ್ನು ಕಟ್ ಮಾಡುವಂತೆ ತಿಳಿಸಲಾಗಿದೆ. ಅನಿಮಲ್ ಸಿನಿಮಾದ ಹುವಾ ಮೈನ್ ಹಾಡನ್ನು ನೋಡಿದ ಪ್ರೇಕ್ಷಕರು ಕೂಡ ಚಿತ್ರದಲ್ಲಿ ರೊಮ್ಯಾಂಟಿಕ್ ಸೀನ್ ಕೊಂಚ ಹೆಚ್ಚಾಗಿಯೇ ಇರಲಿದೆ ಎಂದು ಭಾವಿಸಿದ್ರು. ಸೆನ್ಸಾರ್ ಮಂಡಳಿಯು ಹಿಂದಿ ಪದವಾದ ವಸ್ತ್ರ ಪದವನ್ನು ಬದಲಿಸುವಂತೆ ಕೂಡ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ. ಹಾಡು ಮತ್ತು ಟ್ರೈಲರ್ ನಲ್ಲಿ ಕಾಣಿಸಿಕೊಂಡಿದ್ದ ಕೆಲ ಚಿತ್ರಿಕೆಗಳು ಸಿನಿಮಾದಲ್ಲಿ ಇರೋಲ್ಲ ಎನ್ನುವುದೇ ಅಭಿಮಾನಿಗಳಿಗೆ ಬೇಸರದ ಸಂಗತಿ.

Shwetha M