ಈ ಬೆಕ್ಕನ್ನು ನೋಡಲೆಂದೇ ಪ್ರವಾಸಿಗರು ಬರ್ತಾರೆ – 5 ಸ್ಟಾರ್ ರೇಟಿಂಗ್ ಪಡೆದಿರುವ Cat ಬಗ್ಗೆ ಗೊತ್ತಾ?

ಈ ಬೆಕ್ಕನ್ನು ನೋಡಲೆಂದೇ ಪ್ರವಾಸಿಗರು ಬರ್ತಾರೆ – 5 ಸ್ಟಾರ್ ರೇಟಿಂಗ್ ಪಡೆದಿರುವ Cat ಬಗ್ಗೆ ಗೊತ್ತಾ?

ಪ್ರವಾಸಿಗರು ಟೂರ್ ಪ್ಲ್ಯಾನ್ ಮಾಡುವಾಗ ಬೆಟ್ಟ, ಗುಡ್ಡ, ದೇವಸ್ಥಾನ, ಬೀಚ್ ಅಂತಾ ಹೋಗ್ತಾರೆ. ಆದ್ರೆ ಈ ಬೆಕ್ಕನ್ನ ನೋಡೋಕಂತ್ಲೇ ಜನ ಬರ್ತಾರೆ. ಬೆಕ್ಕುಗಳು ಅಂದ್ರೆ ಮನೆಗಳಲ್ಲಿ ಸಾಕಿರುತ್ತಾರೆ. ಎಲ್ರೂ ನೋಡೇ ಇರ್ತಾರೆ. ಆದ್ರೆ ಈ ಕ್ಯಾಟ್ ಮಾತ್ರ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲೂ ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಪೋಲೆಂಡ್‌ನಲ್ಲಿರುವ ಗ್ಯಾಸೆಕ್ ಹೆಸರಿನ ಬೆಕ್ಕನ್ನ ನೋಡಲು ಪ್ರವಾಸಿಗರು ಬರ್ತಾರೆ.

ಇದನ್ನೂ ಓದಿ : ಬಿಸಾಕಬೇಕಿದ್ದ ಪೇಂಟಿಂಗ್ ಬೆಲೆ ₹208 ಕೋಟಿ – ಕಸ ಅಂದುಕೊಂಡ ಚಿತ್ರ ಅದೃಷ್ಟವನ್ನೇ ಬದಲಿಸಿತು!  

ಗ್ಯಾಸೆಕ್ ಹೆಸರಿನ ಈ ಬೆಕ್ಕು ಪೋಲೆಂಡ್‌ನ ಅತಿ ಹೆಚ್ಚು ದರದ ಪ್ರವಾಸಿಗರ ಆಕರ್ಷಣೆಗಳಲ್ಲಿ ಒಂದಾಗಿದೆ. 2020 ರ ಸಾಕ್ಷ್ಯಚಿತ್ರದಲ್ಲಿ Gacek ಮೊದಲು ಕಾಣಿಸಿಕೊಂಡಿತು. ನಂತರ ಅದರ ಜನಪ್ರಿಯತೆ ಹೆಚ್ಚಾಯಿತು. ಕಪ್ಪು ಮತ್ತು ಬಿಳಿ ಬಣ್ಣ ಇರುವ ಗ್ಯಾಸೆಕ್ ಹೆಸರಿನ ಈ ಕ್ಯಾಟ್ ತನ್ನ ತೂಕ ಮತ್ತು ಸೌಂದರ್ಯದಿಂದಾಗಿ ಜನಪ್ರಿಯತೆ ಪಡೆದುಕೊಂಡಿದೆ. ತನ್ನದೇ ಆದ Instagram ಪುಟವನ್ನು ಹೊಂದಿದ್ದು, Google Maps ನಲ್ಲಿ 5-ಸ್ಟಾರ್ ರೇಟಿಂಗ್  ಪಡೆದಿದೆ. ಬ್ಯುಸಿನೆಸ್ ಇನ್‌ಸೈಡರ್‌ ವರದಿ ಪ್ರಕಾರ ಈ ಗ್ಯಾಸೆಕ್ ಬೆಕ್ಕು ತನ್ನ ರೇಟಿಂಗ್ ನಲ್ಲಿ ಪೋಲಿಷ್ ನಗರದಲ್ಲೇ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ವಿದೇಶಗಳಿಂದಲೂ ಈ ಬೆಕ್ಕನ್ನ ನೋಡೋಕಂತಲೇ ಪ್ರವಾಸಿಗರು ಬರ್ತಾರೆ. ಹಿಂದಿನ ಕಾಲದಲ್ಲಿ ಬೆಕ್ಕನ್ನ ಕಂಡ್ರೆ ಅಪಶಕುನ ಅಂತಿದ್ರು. ಈಗ ನೋಡಿ ಬೆಕ್ಕನ್ನ ಹುಡುಕಿಕೊಂಡು ಹೋಗಿ ನೋಡ್ತಿದ್ದಾರೆ. ನಿಜಕ್ಕೂ ಇದು ಒಳ್ಳೆಯ ಬೆಳವಣಿಗೆಯೇ ಸರಿ.

Shantha Kumari