ಸ್ಟಾರ್ ಗಳ ಡಿವೋರ್ಸ್ ಸೀಕ್ರೆಟ್ ರಿವೀಲ್! ಹೀಗ್ಯಾಕೆ ಮಾಡಿದ್ರು ಪಾಂಡ್ಯಾ – ರೆಹಮಾನ್? – 3 ಬಾರಿ ಮದುವೆ.. ಉಳಿಯಲಿಲ್ಲ 3 ಗಂಟು!
2024 ಕ್ಕೆ ಬೈಬೈ ಹೇಳಿ 2025 ಹಾಯ್ ಹಾಯ್ ಹೇಳೋ ಟೈಮ್ ಬಂದೇ ಬಿಡ್ತು.. ಈ ಒಂದು ವರ್ಷ ಎಷ್ಟು ಬೇಗ ಕಳೆದುಹೊಯ್ತು ಅಂತಾ ಗೊತ್ತೇ ಆಗಿಲ್ಲ ಅಲ್ವಾ? 2024 ರಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಈ ವರ್ಷ ಹಲವು ಸೆಲೆಬ್ರಿಟಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುದ್ದಿಯಾಗಿದ್ರೆ, ಇನ್ನೂ ಕೆಲ ಸೆಲೆಬ್ರಿಟಿಗಳ ಡಿವೋರ್ಸ್ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.. ಈ ವರ್ಷ ಹಲವು ಸೆಲೆಬ್ರಿಟಿಗಳು ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ.. ಹಾಗಾದ್ರೆ ಯಾವ್ಯಾವ ಸೆಲೆಬ್ರಿಟಿಗಳು ಯಾವ ಕಾರಣ ಕೊಟ್ಟು ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ರು? ಈ ಬಗ್ಗೆ ಡಿಟೇಲ್ಸ್ ಇಲ್ಲಿದೆ.
ಇದನ್ನೂ ಓದಿ: IND Vs AUS.. ಮಳೆಗೆ ಪಂದ್ಯ ರದ್ದು.. ಭಾರತಕ್ಕೆ ನಷ್ಟ.. ಆಸಿಸ್ ಗೆ ಲಾಭ ಹೇಗೆ? – WTC ಕನಸಿಗೆ ಎಳ್ಳುನೀರು ಬಿಡುತ್ತಾ?
ಗಂಡ ಹೆಂಡ್ತಿ ನಡುವೆ ಹೊಂದಾಣಿಕೆ ಇಲ್ದೇ ಇದ್ದಾಗ ಡಿವೋರ್ಸ್ ತಗೊಳ್ಳೊದು ಇತ್ತೀಚೆಗೆ ಕಾಮನ್ ಆಗ್ತಿದೆ. ಅದರಲ್ಲೂ ಸೆಲೆಬ್ರಿಟಿಗಳ ವಿಚ್ಚೇದನ ಹೆಚ್ಚು ಹೈಲೈಟ್ ಆಗ್ತಿರುತ್ತೆ… ಯಾಕಂದ್ರೆ ಸ್ಟಾರ್ ಕ್ರಿಕೆಟರ್, ಸ್ಟಾರ್ ನಟ ನಟಿಯರು ಜೊತೆಗೆ ಸುದೀರ್ಘ ದಾಂಪತ್ಯ ಜೀವನ ನಡೆಸಿದ್ದ ಮ್ಯೂಸಿಕ್ ಡೆರೆಕ್ಟರ್, ಸಿಂಗರ್ ಕೂಡ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದು ಅಭಿಮಾನಿಗಳಿಗೆ ಶಾಕ್ ಆಗಿತ್ತು.. ಹಾಗಾದ್ರೆ ಯಾರೆಲ್ಲ ಈ ವರ್ಷ ಡಿವೋರ್ಸ್ ಪಡೆದುಕೊಂಡಿದ್ದಾರೆ ಅನ್ನೋದನ್ನ ಹೇಳ್ತಾ ಹೋಗ್ತೀನಿ..
4 ವರ್ಷದ ದಾಂಪತ್ಯಕ್ಕೆ ಬ್ರೇಕ್ ಹಾಕಿದ ಚಂದು – ನಿವಿ
ಮುದ್ದು ಮುದ್ದಾಗಿ ಮಾತನಾಡುತ್ತಾ ಮಗುವಿನ ಮನಸ್ಸಿನ ಗೊಂಬೆ ನಿವೇದಿಳನ್ನಾ ನೋಡಿ ಚಂದನವನದ ಚಂದನ್ ಮನಸೋತ್ತಿದ್ದರು. ಬಿಗ್ ಬಾಸ್ ಸೀಸನ್ 5ರಲ್ಲಿ ಈ ಜೋಡಿಯನ್ನು ನೋಡಿ ಸಂತೋಷಪಡದವರೇ ಇಲ್ಲ. ಚಂದನ್ ಶೆಟ್ಟಿ ಹಾಡು ಹಾಡ್ತಾಇದ್ದರೆ, ನಿವೇದಿತಾ ಗೊಂಬೆಯಂತೇ ಮುದ್ದು ಮುದ್ದಾಗಿ ಡ್ಯಾನ್ಸ್ ಮಾಡ್ತಾ ಇದ್ರು.. ಪ್ರೀತಿಸಿದ ಈ ಜೋಡಿ ಮನೆಯವರ ಸಮ್ಮುಖದಲ್ಲಿ ಮದುವೆ ಕೂಡ ಆಗಿದ್ರು. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ 2020ರ ಫೆಬ್ರವರಿ 26ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಾಲ್ಕು ವರ್ಷಗಳ ಕಾಲ ಸಹಜೀವನ ನಡೆಸಿದ್ದ ಈ ಜೋಡಿ ಒಂದು ಸುಳಿವು ಕೂಡ ನೀಡದೇ ವಿಚ್ಚೇಧನ ಪಡೆದಿದ್ರು.. 2024ರ ಜೂನ್ 7ರಂದು ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡರು. ಡಿವೋರ್ಸ್ ಬಳಿಕ ನಿವೇದಿತಾ ಮೇಲೆ ಸಾಕಷ್ಟು ಆರೋಪ ಕೇಳಿಬಂದ್ರು ಕೂಡ ಚಂದನ್ ಆಕೆಯನ್ನ ಬಿಟ್ಟುಕೊಟ್ಟಿರ್ಲಿಲ್ಲ.. ಇಬ್ಬರು ಒಟ್ಟಿಗೆ ಬಂದು ಹರಿದಾಡುತ್ತಿದ್ದ ಗಾಸಿಪ್ ಗಳಿಗೆ ಬ್ರೇಕ್ ಹಾಕಿ ಜಾಣತನ ಮೆರೆದಿದ್ರು.. ಆದ್ರೂ ಫ್ಯಾನ್ಸ್ ಈ ಜೋಡಿ ಮತ್ತೆ ಒಂದಾಗ್ಲಿ ಅಂತಾ ಬಯಸ್ತಾ ಇದ್ದಾರೆ.
ಬಾರಿ ಮದುವೆ.. ಆದ್ರೂ ಉಳಿಯಲ್ಲಿಲ್ಲ ಪಾಂಡ್ಯ ಮೂರು ಗಂಟು!!
ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ 2024 ಬರೀ ಕಹಿಯ ವರ್ಷವೇ ಆಗಿತ್ತು.. ಸಮುದ್ರದ ಅಲೆಗಳಂತೆ ಪಾಂಡ್ಯನನ್ನ ಸಮಸ್ಯೆಗಳು ಹುಡುಕಿಕೊಂಡು ಬಂದಿದ್ದವು. ತಮ್ಮ ಕ್ರಿಕೆಟ್ ವೃತ್ತಿಬದುಕು, ವೈಯಕ್ತಿಕ ಬದುಕಿನಲ್ಲೂ ಏರುಪೇರಾಗಿತ್ತು.. ಮೂರು ಬಾರಿ ಮದುವೆಯಾಗಿದ್ರೂ ಹಾರ್ದಿಕ್ ನತಾಶ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಹಾರ್ದಿಕ್ ಪಾಂಡ್ಯ ಹಾಗೂ ನತಾಶ ಡಿವೋರ್ಸ್ ಮೂಲಕ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ರು.. 2024ರ ಜುಲೈ ತಿಂಗಳಲ್ಲಿ ಈ ಜೋಡಿ ಕೂಡ ವಿಚ್ಛೇದನ ಪಡೆದುಕೊಂಡಿತು.
ಒಂದಾಗಲಿಲ್ಲ ರಜನಿಕಾಂತ್ ಮಗಳು–ಅಳಿಯ!!
ಕಾಲಿವುಡ್ ನಟ ಧನುಷ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ 2004ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಈ ಜೋಡಿಗೆ ಯಾತ್ರಾ ಹಾಗೂ ಲಿಂಗ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. 2022ರಲ್ಲಿ ಪರಸ್ಪರ ಬೇರೆಯಾಗುವುದಕ್ಕೆ ನಿರ್ಧರಿಸಿದ್ದ ಧನುಷ್ & ಐಶ್ವರ್ಯಾ, ಕೋರ್ಟ್ ಮೆಟ್ಟಿಲೇರಿದ್ದರು. 2024ರಲ್ಲಿ ಕೋರ್ಟ್ ಅಧಿಕೃತವಾಗಿ ಈ ಜೋಡಿಗೆ ಡಿವೋರ್ಸ್ ನೀಡಿದ್ದು, 20 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದಾರೆ.
29 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಎ ಆರ್ ರೆಹಮಾನ್
ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಹಾಗೂ ಸೈರಾ ಬಾನು ಜೋಡಿಯ ಡಿವೋರ್ಸ್ ಅಭಿಮಾನಿಗಳಿಗೆ ಶಾಕ್ ಉಂಟು ಮಾಡಿತ್ತು. 1995ರಲ್ಲಿ ವಿವಾಹವಾಗಿದ್ದ ಈ ಜೋಡಿಗೆ ಖತೀಜಾ, ರಹೀಮಾ ಹಾಗೂ ಅಮೀನಗ್ ಎಂಬ ಮೂವರು ಮಕ್ಕಳಿದ್ದರು. 29 ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿದ್ದ ಈ ಜೋಡಿ, 2024 ನವೆಂಬರ್ ನಲ್ಲಿ ಪರಸ್ಪರ ದೂರವಾದರು.
15 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ ನಟ ಜಯಂ ರವಿ
ತಮಿಳು ಸಿನಿಮಾರಂಗದ ಖ್ಯಾತ ನಟ ಜಯಂ ರವಿ ಹಾಗೂ ಅವರ ಪತ್ನಿ ಆರತಿ ಇತ್ತೀಚೆಗಷ್ಟೇ ಬೇರೆಯಾಗಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ತಮ್ಮ 15 ವರ್ಷದ ದಾಂಪತ್ಯಕ್ಕೆ ಕೊನೆ ಹಾಡಿದ್ದಾರೆ. ಆದರೆ, ಅವರ ಪತ್ನಿ ತಮ್ಮನ್ನು ಕೇಳದೇ ಈ ನಿರ್ಧಾರ ಮಾಡಿದ್ದಾರೆಂದು ಆರೋಪಿಸುತ್ತಿದ್ದಾರೆ. ಈ ಕೇಸ್ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಅಂತಾ ಕಾದು ನೋಡ್ಬೇಕು.
ಸೆಲೆಬ್ರಿಟಿಗಳ ವಿವಾಹ ಸಂಬಂಧ ಕಡಿತಗೊಳ್ಳಲು ವಿವಾಹೇತರ ರಿಲೇಷನ್ ಶಿಪ್ ಗಳೇ ಕಾರಣ ಎಂಬ ಮಾತು ಈ ಎಲ್ಲಾ ಜೋಡಿಗಳ ಡಿವೋರ್ಸ್ ವೇಳೆಯೂ ಕೇಳಿ ಬಂದಿದ್ವು.. ಆದ್ರೆ ನಿಖರ ಕಾರಣಗಳನ್ನು ಯಾರೂ ಬಯಲು ಮಾಡಿಲ್ಲ.. ಅದೇನೆ ಇರಲಿ ಕೂಡಿ ಬಾಳಿದರೆ ಸ್ವರ್ಗ ಸುಖ ಅಂತಾರೆ. ಅದಕ್ಕೆ ಪರಸ್ಪರ ಹೊಂದಾಣಿಕೆ ಬಗ್ಗೆ ಸೆಲೆಬ್ರಿಟಿ ಗಳಿರಲಿ ಸಾಮಾನ್ಯ ಜನರೇ ಅಗಿರಲಿ ಆದ್ಯತೆ ನೀಡಲೇ ಬೇಕು ಅನ್ನೋದಷ್ಟೇ ಈ ಜೋಡಿಗಳ ಡಿವೋರ್ಸ್ ಗಳು ಹೇಳ್ತಿರುವ ಪಾಠ.