150ನೇ ವರ್ಷದ ವಂದೇ ಮಾತರಂ ಸಂಭ್ರಮಾಚರಣೆ – ಶ್ರೀ ವೀಣಾವಾಣಿ ಸಂಗೀತ ಶಾಲೆಯಿಂದ ಸಮೂಹ ಗಾಯನ

ಶ್ರೀ ವೀಣಾವಾಣಿ ಸಂಗೀತ ಶಾಲೆ ವತಿಯಿಂದ 150 ವರ್ಷಗಳ ವಂದೇ ಮಾತರಂ ಸಂಭ್ರಮಾಚರಣೆ ಕಾರ್ಯಕ್ರಮ ಬೆಂಗಳೂರಿನ ಬನಶಂಕರಿಯಲ್ಲಿ ನಡೆಯಿತು. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ವೇಳೆ ವೀಣಾ ವಾಣಿ ಸಂಗೀತ ಶಾಲೆಯ ನೂರಕ್ಕು ಹೆಚ್ಚು ವಿದ್ಯಾರ್ಥಿಗಳು ವಂದೇಮಾತರಂ ಗೀತೆಯನ್ನು ಕೀಬೋರ್ಡ್, ಗಿಟಾರ್, ವೀಣೆ, ಕೊಳಲು ಮೂಲಕ ನುಡಿಸಿದರು. ಜೊತೆಗೆ ಗಾಯನ ಕೂಡಾ ನೆರೆದಿದ್ದವರನ್ನು ರೋಮಾಂಚನ ಗೊಳಿಸಿತು.

ಇದನ್ನೂ ಓದಿ:ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಇನ್ಮುಂದೆ ಹೊಸ ರೂಲ್ಸ್! – ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಫೈನ್!
ಶ್ರೀ ವೀಣಾವಾಣಿ ಸಂಗೀತ ಶಾಲೆ ವಿದ್ಯಾರ್ಥಿಗಳ ಜೊತೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ದನಿ ಸೇರಿಸಿದ್ದು ವಿಶೇಷವಾಗಿತ್ತು. ಇನ್ನು ವೇದಿಕೆಯಲ್ಲಿ ವಿಜಯ್ ಪ್ರಕಾಶ್ ಅವರು ಜೈ ಹೋ, ಗೊಂಬೆ ಹೇಳುತೈತೆ, ಹುಟ್ಟಿದರೆ ಕನ್ನಡನಾಡಿನಲ್ಲಿ ಹುಟ್ಟಬೇಕು ಎಂಬ ಹಾಡು ಹಾಡಿ ನೆರೆದಿದ್ದವರನ್ನು ರಂಜಿಸಿದರು. ಪ್ರತಿಪಕ್ಷನಾಯಕ ಆರ್.ಆಶೋಕ್ , ಮತ್ತು ಸಂಸದ ತೇಜಸ್ವಿ ಸೂರ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶ್ರೀ ವೀಣಾ ವಾಣಿ ಸಂಗೀತ ಶಾಲೆಯ ನಿರ್ದೇಶಕರಾದ ಡಾ. ಗಿರೀಶ್ ಕುಮಾರ್ ಅವರು ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ವಿಶೇಷವಾಗಿತ್ತು.


ನೋಡಿರಿ

