ಡ್ರಗ್ಸ್‌ ಕೇಸ್‌ ನಲ್ಲಿ ಸ್ಯಾಂಡಲ್‌ವುಡ್‌ ನಟಿಯರಿಗೆ ಸಿಸಿಬಿ ಶಾಕ್‌ – ಮತ್ತೆ ಅರೆಸ್ಟ್‌ ಆಗ್ತಾರಾ ಸಂಜನಾ, ರಾಗಿಣಿ?

ಡ್ರಗ್ಸ್‌ ಕೇಸ್‌ ನಲ್ಲಿ ಸ್ಯಾಂಡಲ್‌ವುಡ್‌ ನಟಿಯರಿಗೆ ಸಿಸಿಬಿ ಶಾಕ್‌ – ಮತ್ತೆ ಅರೆಸ್ಟ್‌ ಆಗ್ತಾರಾ ಸಂಜನಾ, ರಾಗಿಣಿ?

ರಾಜ್ಯದಲ್ಲಿ ನಟಿ ರನ್ಯಾ ರಾವ್ ಕೇಸ್‌ ಭಾರಿ ಸದ್ದು ಮಾಡ್ತಿದೆ. ದಿನೇ ದಿನೇ ಹೊಸ ಹೊಸ ತಿರುವು ಪಡೆದುಕೊಳ್ತಿದೆ. ಈ ಪ್ರಕರಣದ ಬೆನ್ನಲ್ಲೇ ಸ್ಯಾಂಡಲ್‌ವುಡ್ ನಲ್ಲಿ ಮತ್ತೊಂದು ಕೇಸ್‌ ಸದ್ದು ಮಾಡ್ತಿದೆ. ಸ್ಯಾಂಡಲ್‌ ವುಡ್‌ ನಟಿಯರಿಗೆ ಮಾಸ್ಟರ್ ಸ್ಟ್ರೋಕ್ ಎದುರಾಗಿದೆ. ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸಲ್ಲಿ ಇಬ್ಬರು ನಟಿಯರಿಗೆ ಸಿಸಿಬಿ ಶಾಕ್ ನೀಡಿದೆ.

ಇದನ್ನೂ ಓದಿ: ಕಪ್​ ಸಿಗ್ಲಿಲ್ಲ.. ದುಡ್ಡೂ ಬರ್ಲಿಲ್ಲ – PAK​ಗೆ ಲಾಭಕ್ಕಿಂತ ನಷ್ಟವೇ ಆಯ್ತಾ?

ಟಿ ಸಂಜನಾ ಮತ್ತು ರಾಗಿಣಿ ಎಫ್‌ಐಆರ್ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಿಸಿಬಿ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಸಿಸಿಬಿ ಡ್ರಗ್ಸ್ ಕೇಸಲ್ಲಿ ಎಫ್‌ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ ನಟಿಯರು ಅರ್ಜಿ ಸಲ್ಲಿಸಿದ್ದರು. ನಟಿ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಹಾಗೂ ವೀರೇನ್ ಖನ್ನಾನ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದು ಮಾಡಿತ್ತು.

ಗೃಹ ಇಲಾಖೆ ಮತ್ತು ಕಾನೂನು ಇಲಾಖೆಯ ಸಮ್ಮತಿ ಬಳಿಕ ಸುಪ್ರೀಂಗೆ ಸಿಸಿಬಿ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋಗಲು ಕಾನೂನು ಇಲಾಖೆ ಅಸ್ತು ಎಂದಿತ್ತು. ಆ ಬಳಿಕ ಗೃಹ ಇಲಾಖೆಯಿಂದ ಅನುಮತಿ ಪಡೆದು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದೆ. ಹೈಕೋರ್ಟ್ ಆದೇಶ ರದ್ದುಗೊಳಿಸುವಂತೆ ಸಿಸಿಬಿ, ಸುಪ್ರೀಂ ಮೊರೆ ಹೋಗಿದೆ.

Shwetha M

Leave a Reply

Your email address will not be published. Required fields are marked *