ದರ್ಶನ್‌ಗೆ ಜೈಲಿನ ರಾಜಾತಿಥ್ಯ ಕೇಸ್‌! – ಆಪ್ತ ಗೆಳೆಯ ನಟ ಧನ್ವೀರ್‌ಗೆ ಕಾನೂನು ಸಂಕಷ್ಟ!

ದರ್ಶನ್‌ಗೆ ಜೈಲಿನ ರಾಜಾತಿಥ್ಯ ಕೇಸ್‌! – ಆಪ್ತ ಗೆಳೆಯ ನಟ ಧನ್ವೀರ್‌ಗೆ ಕಾನೂನು ಸಂಕಷ್ಟ!

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೈದಿಗಳಿಗೆ ರಾಜಾತಿಥ್ಯದ ವಿಡಿಯೋ ಬಿಡುಗಡೆಯಾದ ಬೆನ್ನಲ್ಲೇ ದರ್ಶನ್‌ ಆಪ್ತ ಗೆಳೆಯ ನಟ ಧನ್ವೀರ್‌ಗೆ ಈಗ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ವಧು-ವರ ಇಬ್ಬರಿಗೂ ಕುಜ ದೋಷವಿದ್ದರೆ ವಿವಾಹ ಮಾಡಬಹುದಾ? – ಶಾಸ್ತ್ರ ಏನ್ ಹೇಳುತ್ತೆ?

ವಿಡಿಯೋ ಬಿಡುಗಡೆಯಾದ ಪ್ರಕರಣ ಪೊಲೀಸ್‌ ಇಲಾಖೆಗೆ ಮುಜುಗರ ತಂದ ಬೆನ್ನಲ್ಲೇ ಸಿಸಿಬಿ ಪೊಲೀಸರು ಈಗ ಧನ್ವೀರ್‌ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವಿಡಿಯೋಗಳನ್ನು ಧನ್ವೀರ್‌ ಬಿಡುಗಡೆ ಮಾಡಿದ್ದಾರೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಭಾನುವಾರದಿಂದ ಪೊಲೀಸರು ವಿಚಾರಣೆ ನಡೆಸುತ್ತಿದ್ದು ಧನ್ವೀರ್‌ ಅವರ ಮೊಬೈಲ್‌ ಅನ್ನು ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸಲಾಗಿದೆ. ಅನುಮಾನದ ಮೇರೆಗೆ ಧನ್ವೀರ್‌ ಅವರನ್ನು ಸಿಸಿಬಿ ಡ್ರಿಲ್‌ ಮಾಡುತ್ತಿದ್ದು ಸೋಮವಾರವೂ ಸಿಸಿಬಿ ವಶದಲ್ಲೇ ಇದ್ದಾರೆ ಎಂದು ಹೇಳಲಾಗ್ತಿದೆ.

ದರ್ಶನ್‌ಗೆ ದಿಂಬು, ಹಾಸಿಗೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ದರ್ಶನ್‌ ಪರ ವಕೀಲರು ಬೇರೆ ಕೈದಿಗಳಿಗೆ ಜೈಲಿನಲ್ಲಿ ವಿಶೇಷ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಆದರೆ ದರ್ಶನ್‌ ಅವರಿಗೆ ಸವಲತ್ತುಗಳು ಸಿಗುತ್ತಿಲ್ಲ ಎಂದು ವಾದಿಸಿದ್ದರು.

Shwetha M