CBSE 12 ನೇ ತರಗತಿ ಫಲಿತಾಂಶ ಪ್ರಕಟ – ತಿರುವನಂತಪುರ ಫಸ್ಟ್, ಬೆಂಗಳೂರಿಗೆ 2 ನೇ ಸ್ಥಾನ

CBSE 12 ನೇ ತರಗತಿ ಫಲಿತಾಂಶ ಪ್ರಕಟ – ತಿರುವನಂತಪುರ ಫಸ್ಟ್, ಬೆಂಗಳೂರಿಗೆ 2 ನೇ ಸ್ಥಾನ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 12 ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಶುಕ್ರವಾರ ಪ್ರಕಟಿಸಿದೆ.

2022 – 23ನೇ ಸಾಲಿನಲ್ಲಿ ಒಟ್ಟು 16,60,511 ವಿದ್ಯಾರ್ಥಿಗಳು ಸಿಬಿಎಸ್‌ಇ 12 ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆದಿದ್ದರು.  ಇದರಲ್ಲಿ 14,50,174 ಅಂದರೆ, 87.33 ಶೇಕಡಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಪಾಸ್‌ ಆದವರ ಪ್ರಮಾಣ ಶೇ. 92.71ರಷ್ಟಿದ್ದರೆ, ಈ ವರ್ಷ ಇದರ ಪ್ರಮಾಣ ಕಡಿಮೆಯಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಎಡಗೈನಲ್ಲಿ ಊತ.. ವೈದ್ಯರಿಂದ ಚಿಕಿತ್ಸೆ – 15 ದಿನ ವಿಶ್ರಾಂತಿ ಪಡೆಯುವಂತೆ ಸಲಹೆ!

ಇನ್ನು ಸಿಬಿಎಸ್‌ಇ 12 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ತಿರುವನಂತಪುರದಲ್ಲಿ  99.91% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಪ್ರಯಾಗ್ರಾಜ್ 78.05% ನೊಂದಿಗೆ ಪಟ್ಟಿಯ ಕೊನೆಯ ಸ್ಥಾನದಲ್ಲಿದೆ. ಬೆಂಗಳೂರು 2ನೇ ಸ್ಥಾನ ಪಡೆದುಕೊಂಡಿದ್ದು, ಒಟ್ಟಾರೆ 98.64ರಷ್ಟು ಫಲಿತಾಂಶ ದಾಖಲಾಗಿದೆ.

ಸಿಬಿಎಸ್ಇಯ 10 ನೇ ತರಗತಿ ಬೋರ್ಡ್ ಪರೀಕ್ಷೆಯು ಫೆಬ್ರವರಿ 15ರಿಂದ ಮಾರ್ಚ್ 21 ರವರೆಗೆ ನಡೆದಿದ್ದರೆ, 12 ನೇ ತರಗತಿ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15 ರಿಂದ ಏಪ್ರಿಲ್ 5ರವರೆಗೆ ನಡೆದಿತ್ತು. ಈ ವರ್ಷದ ಜನವರಿ 2 14 ರ ನಡುವೆ 10 ಮತ್ತು 12 ನೇ ತರಗತಿಗಳಿಗೆ ಸಿಬಿಎಸ್ಇ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿತ್ತು. ಅನಾರೋಗ್ಯಕರ ಸ್ಪರ್ಧೆಯನ್ನು ತಪ್ಪಿಸುವ ನಿಟ್ಟಿನಲ್ಲಿ ತನ್ನ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಅಥವಾ ಮೂರನೇ ಡಿವಿಶನ್ ಗಳನ್ನು ನೀಡುವುದಿಲ್ಲ ಎಂದು ಮಂಡಳಿ ಹೇಳಿದೆ. ಆದರೆ ಹೆಚ್ಚಿನ ಅಂಕಗಳನ್ನು ಗಳಿಸಿದ 0.1 ಪ್ರತಿಶತ ವಿದ್ಯಾರ್ಥಿಗಳಿಗೆ ಮೆರಿಟ್ ಪ್ರಮಾಣಪತ್ರವನ್ನು ನೀಡುತ್ತದೆ.

ಸಿಬಿಎಸ್‌ಇ 12 ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಅಧಿಕೃತ ವೆಬ್‌ ಸೈಟ್‌ ಗಳಾದ  http://cbse.nic.in ಮತ್ತು http://cbse.gov.in  ನಲ್ಲಿ ಪೋಸ್ಟ್ ಮಾಡಲಾಗಿದೆ. ವಿದ್ಯಾರ್ಥಿಗಳು ಇಲ್ಲಿ ಫಲಿತಾಂಶಗವನ್ನು ನೋಡಬಹುದು.

suddiyaana