ರಾಜ್ಯ ರಾಜಧಾನಿ ಜನರಿಗೆ ಮತ್ತೆ ಶಾಕ್! – ಮೆಟ್ರೋ ಬೆನ್ನಲ್ಲೇ ಕಾವೇರಿ ನೀರಿನ ದರವೂ ಏರಿಕೆ!

ದುನಿಯಾ ಸಿಕ್ಕಾಪಟ್ಟೆ ದುಬಾರಿಯಾಗಿದೆ. ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗಿದೆ. ಇದೀಗ ಬೆಂಗಳೂರು ಮಂದಿಗೆ ಮತ್ತೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ನಮ್ಮ ಮೆಟ್ರೋ ದರ ಏರಿಕೆಯಾದ ಬೆನ್ನಲ್ಲೇ ಈಗ ಕಾವೇರಿ ನೀರಿನ ದರವೂ ಏರಿಕೆಯಾಗಲಿದೆ.
ಇದನ್ನೂ ಓದಿ: ಮತ್ತೊಂದು ರೀಲ್ಸ್ ಮೂಲಕ ವಿವಾದಕ್ಕೆ ಗುರಿಯಾದ ಬಿಗ್‌ಬಾಸ್ ರಜತ್! – ವಿಲನ್ ಲುಕ್‌ಗೆ ಫ್ಯಾನ್ಸ್ ಆಕ್ರೋಶ!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಾವೇರಿ ನೀರಿನ ದರ ಏರಿಕೆಯಾಗಲಿದೆ. ಶೀಘ್ರವೇ 3% ನೀರಿನ ದರ ಏರಿಕೆಯಾಗುವ ಸಾಧ್ಯತೆಯಿದೆ. ಪ್ರತಿ ವರ್ಷ ನೀರಿನ ದರ ಏರಿಕೆ ಆಗಬೇಕು ಎಂದು ಆಡಳಿತ ಸುಧಾರಣಾ ಸಮಿತಿ ಶಿಫರಾಸ್ಸು ಮಾಡಿತ್ತು. ಈ ಶಿಫಾರಸಿನ ಅನ್ವಯ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೀರಿನ ದರವನ್ನು ಏರಿಕೆ ಮಾಡಲು ಮುಂದಾಗಿದೆ. ಏಪ್ರಿಲ್1 ರಿಂದ ನೀರಿನ ದರ ಏರಿಕೆಯಾಗುವ ಸಾಧ್ಯತೆಯಿದೆ.
ಕಳೆದ ವರ್ಷದ ಏಪ್ರಿಲ್‌ನಲ್ಲಿ ಗೃಹ ಬಳಕೆದಾರರಿಗೆ ಪ್ರತಿ ಲೀಟರ್ ಗೆ ಕನಿಷ್ಠ 0.15 ಪೈಸೆ ಗರಿಷ್ಠ 1 ಪೈಸೆ ಹೆಚ್ಚಳ ಮಾಡಿದ್ದರೆ ವಾಣಿಜ್ಯ ಬಳಕೆಗೆ ಪ್ರತಿ ಲೀಟರ್ ಗರಿಷ್ಠ 1.90 ಪೈಸೆಯವರೆಗೆ ಏರಿಕೆ ಮಾಡಲಾಗಿತ್ತು.

ನೋಡಿರಿ

