ಕಾವೇರಿ ನೀರಿಗಾಗಿ ಮತ್ತೆ ಕ್ಯಾತೆ ತೆಗೆದ ತಮಿಳು ನಾಡು – ಸುಪ್ರೀಂ ಕೋರ್ಟ್ ಗೆ ಇಂದು ಕರ್ನಾಟಕ ಮೇಲ್ಮನವಿ ಸಲ್ಲಿಕೆ

ಕಾವೇರಿ ನೀರಿಗಾಗಿ ಮತ್ತೆ ಕ್ಯಾತೆ ತೆಗೆದ ತಮಿಳು ನಾಡು – ಸುಪ್ರೀಂ ಕೋರ್ಟ್ ಗೆ ಇಂದು ಕರ್ನಾಟಕ ಮೇಲ್ಮನವಿ ಸಲ್ಲಿಕೆ

ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ವಿಚಾರ ಮತ್ತೆ ವಿವಾದ ಉಂಟು ಮಾಡಿದೆ. ತನ್ನ ಪಾಲಿನ ಕಾವೇರಿ ನದಿ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ರಾಜ್ಯದ ವಸ್ತುಸ್ಥಿತಿ ವಿವರಿಸಲು ರಾಜ್ಯ ಸರ್ಕಾರವೂ ಇಂದು ಮೇಲ್ಮನವಿ ಸಲ್ಲಿಸಲಿದೆ. ಹೀಗಾಗಿ ಎರಡು ರಾಜ್ಯಗಳು ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಎಲ್ಲರ ಚಿತ್ತ ಕೋರ್ಟ್​ನತ್ತ ನೆಟ್ಟಿದೆ.

ಇದನ್ನೂ ಓದಿ : ಸರ್ಕಾರದ ವೈಫಲ್ಯಗಳಿಂದಾಗಿ ರಾಜ್ಯದ ಅಭಿವೃದ್ಧಿ ರಿವರ್ಸ್ ಗೇರ್‌ನಲ್ಲಿದೆ – ಬಿಜೆಪಿ ಕಿಡಿ

ಕಾವೇರಿ ನದಿ ನೀರಿಗಾಗಿ (Cauvery water) ಕರ್ನಾಟಕ ಮತ್ತು ತಮಿಳುನಾಡು ನಡುವೆ ಶತಮಾನಗಳಿಂದಲೂ ವಿವಾದ ನಡೆದುಕೊಂಡು ಬಂದಿದೆ. ಇದೀಗ ಮತ್ತೆ ತಮಿಳುನಾಡು(Tamil Nadu) ಸರ್ಕಾರ ಕ್ಯಾತೆ ತೆಗೆದಿದ್ದು, ಕಾವೇರಿ ನದಿ ನೀರು ಬಿಡುಗಡೆ ಆಗ್ರಹಿಸಿ ತಮಿಳುನಾಡು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ. ತುರ್ತು ವಿಚಾರಣೆಗೆ ಇಂದು ಸಿಜೆಐ ಪೀಠದ ಮುಂದೆ ತಮಿಳುನಾಡು ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಅರ್ಜಿ ಪ್ರಸ್ತಾಪಿಲು ಸಿದ್ಧತೆ ನಡೆಸಿದ್ದಾರೆ. ಇತ್ತ ರಾಜ್ಯ ಸರ್ಕಾರವು ಸಹ ಕರ್ನಾಟಕದಲ್ಲಿನ ನೀರಿನ ವಸ್ತುಸ್ಥಿತಿ ವಿವರಿಸಲು ಇಂದು (ಆಗಸ್ಟ್ 21) ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಲಿದೆ. ಕರ್ನಾಟಕದ ವಾಸ್ತವ ಪರಿಸ್ಥಿತಿ ಮನವರಿಕೆಗೆ ಮಾಡಿಕೊಡಲು ತಯಾರಿ ನಡೆದಿವೆ. ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಮಳೆ ಕೊರತೆ , ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವ ಬಗ್ಗೆ ಮಾಹಿತಿ, ಹಾಗೂ ಡ್ಯಾಂಗಳಲ್ಲಿ ನೀರಿನ ಕೊರತೆ ಬಗ್ಗೆ ಕರ್ನಾಟಕ ಪರ ವಕೀಲ ಶ್ಯಾಮ್ ದಿವಾನ್​​ ವಾದ ಮಂಡಿಸಲಿದ್ದಾರೆ.

ಕಳೆದ ಆಗಸ್ಟ್​​​​​ 14 ರಂದು ಸುಪ್ರೀಂಕೋರ್ಟ್​​ ಮೆಟ್ಟಿಲೇರಿದ್ದ ತಮಿಳುನಾಡು, ಹಾಲಿ ಇರೋ ಬೆಳೆಗಳ ರಕ್ಷಣೆಗಾಗಿ ನಿತ್ಯ 24 ಸಾವಿರ ಕ್ಯೂಸೆಕ್​​​​​​​​ ಕಾವೇರಿ ನದಿ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಸಲ್ಲಿಸಿತ್ತು. ಸುಪ್ರೀಂ ಸೂಚನೆಯಂತೆ ಕೆಆರ್​​ಎಸ್​​​​ ಡ್ಯಾಂನಿಂದ ನೀರನ್ನ ಹರಿಬಿಡಲಾಗಿತ್ತು. ಆದ್ರೆ, ಇದೀಗ ಕೆಆರ್​ಎಸ್​ನಲ್ಲಿ ನೀರಿನ ಕೊರತೆ ಎದುರಾಗಿದೆ. ಹೀಗಾಗಿ ನೀರಿಗಾಗಿ ಎರಡು ರಾಜ್ಯಗಳು ಸುಪ್ರೀಂಕೋರ್ಟ್​ನಲ್ಲಿ ವಾದ ಮಂಡಿಸಲಿದ್ದು, ಅಂತಿಮವಾಗಿ ಕೋರ್ಟ್ ಯಾವ ತೀರ್ಪು ನೀಡಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆ ಆರ್ ಎಸ್ ಜಲಾಶಯದ ನೀರಿನ ಮಟ್ಟ 105 ಅಡಿಗೆ ಕುಸಿದಿದೆ. ಜಲಾಶಯದ ಗರಿಷ್ಟಮಟ್ಟ 124.80 ಅಡಿ ಇದ್ದು, ಸದ್ಯ ಜಲಾಶಯದ ನೀರಿನ ಮಟ್ಟ 105.70 ಅಡಿ ಇದೆ. ಒಳ ಹರಿವು 4983 ಕ್ಯೂಸೆಕ್ ಇದ್ದು, ಹೊರ ಹರಿವು 15,247 ಕ್ಯೂಸೆಕ್ ಇದೆ.

suddiyaana