ತಲಕಾವೇರಿಯಲ್ಲಿ ತೀರ್ಥೋದ್ಭವ – ತೀರ್ಥಸ್ವರೂಪಿಣಿಯಾಗಿ ಭಕ್ತರಿಗೆ ದರುಶನ ನೀಡಿದ ಕಾವೇರಿ!

ದಕ್ಷಿಣ ಭಾರತದ ಪುಣ್ಯನದಿ ಕಾವೇರಿ. ತಲಕಾವೇರಿಯಲ್ಲಿ ಹುಟ್ಟಿ ನಾಡಿನ ದಾಹ ತಣಿಸಿ ಪಕ್ಕದ ತಮಿಳುನಾಡಿಗೂ ನೀರುಣಿಸುವ ಕಾವೇರಿ ಪ್ರತೀ ವರ್ಷದಂತೆ ಈ ವರ್ಷವೂ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ತೀರ್ಥೋದ್ಭವ ಜರುಗಿದೆ.
ಇದನ್ನೂ ಓದಿ: ಶವ ಹೂತಿಟ್ಟ ಕೇಸ್! – ಧರ್ಮಸ್ಥಳದ ಪೊಲೀಸರಿಗೂ ಶಾಕ್ ಕೊಟ್ಟ ಎಸ್‌ಐಟಿ!
ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಇಂದು ತೀರ್ಥೋದ್ವವಾಗಿದೆ. ಮಧ್ಯಾಹ್ನ 1:44 ಗಂಟೆಗೆ ಮಕರ ಲಗ್ನದಲ್ಲಿ ಪವಿತ್ರ ತೀರ್ಥೋಧ್ಭವಾಗಿದೆ. ಇಂದು ಮುಂಜಾನೆಯಿಂದಲೇ ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರದಲ್ಲಿ ನಾನಾ ಪೂಜಾ ಕೈಂಕರ್ಯಗಳನ್ನ ನಡೆಸಲಾಗಿದೆ. ಅರ್ಚಕರ ತಂಡ ಕೂಡ ಕಾವೇರಿ ಮಾತೆಗೆ ಭವ್ಯ ಸ್ವಾಗತ ಮಾಡಿದ್ದಾರೆ.
ವರ್ಷಕ್ಕೊಮ್ಮೆ ನಡೆಯುವ ಈ ವಿಸ್ಮಯವನ್ನ ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸಿದ್ದು, ತೀರ್ಥಸ್ವರೂಪಿಣಿಯಾದ ಕಾವೇರಿ ಮಾತೆಯ ದರ್ಶನವನ್ನು ಪಡೆಯುತ್ತಿದ್ದಾರೆ. ಭಕ್ತರು ಕಾವೇರಿಯ ಪವಿತ್ರ ಕೊಳದಲ್ಲಿ ಮಿಂದೆದ್ದಿದ್ದಾರೆ. ಇನ್ನು ಭಕ್ತ ಸಂಖ್ಯೆ ಹೆಚ್ಚಾಗುತ್ತಿದ್ದು, ಹಿನ್ನಲೆ ಯಾವುದೇ ರೀತಿಯಲ್ಲಿ ನೂಕು ನುಗ್ಗಲು ಉಂಟಾಗದಂತೆ ಏಕಮುಖ ಸಂಚಾರದಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ.

ನೋಡಿರಿ

