ತಲಕಾವೇರಿಯಲ್ಲಿ ತೀರ್ಥರೂಪಿಣಿಯಾದ ಕಾವೇರಿ ಮಾತೆ!

ತಲಕಾವೇರಿಯಲ್ಲಿ ತೀರ್ಥರೂಪಿಣಿಯಾದ ಕಾವೇರಿ ಮಾತೆ!

ತಲಕಾವೇರಿ ಪುಣ್ಯಕ್ಷೇತ್ರದಲ್ಲಿ ಇಂದು ಬೆಳಗ್ಗೆ ಕಾವೇರಿ ಪವಿತ್ರ ತೀರ್ಥೋದ್ಭವ ನೆರವೇರಿತು. ಭಕ್ತರಿಗೆ ತೀರ್ಥರೂಪಿಣಿಯಾಗಿ ಕಾವೇರಿ ದರ್ಶನ ನೀಡಿದಳು.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಲಕಾವೇರಿ ಪುಣ್ಯಕ್ಷೇತ್ರದಲ್ಲಿ ಇಂದು ಬೆಳಗ್ಗೆ 7 ಗಂಟೆ 40 ನಿಮಿಷ ತುಲಾ ಲಗ್ನದಲ್ಲಿ ತೀರ್ಥೋದ್ಭವವಾಯಿತು. ವರ್ಷಕ್ಕೊಮ್ಮೆ ಜರುಗುವ ದೇಶದ ಪವಿತ್ರ ತೀರ್ಥೋದ್ಭವ ಸಂಭ್ರಮ ಇಂದು ನಡೆಯಿತು. ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ದರ್ಶನವಾದಳು.

ಇದನ್ನೂ ಓದಿ:  ಹಳಸಿದ ಕೆನಡಾ- ಭಾರತ ಸಂಬಂಧ – ನಿಜ್ಜರ್ ಹತ್ಯೆಗೆ ಅಮಿತ್ ಶಾ ಒಪ್ಪಿಗೆ?

ನಿಗದಿಯಂತೆ 7:40ಕ್ಕೆ ಸೂರ್ಯ ಕನ್ಯಾ ಲಗ್ನದಿಂದ ತುಲಾ ಲಗ್ನಕ್ಕೆ ಪ್ರವೇಶಿಸುತ್ತಿದ್ದಂತೆ ತೀರ್ಥೋದ್ಭವ ನೆರವೇರಿತು. ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿ, ಮೂರು ಬಾರಿ ಉಕ್ಕಿ ಬಂದಳು. ಬಳಿಕ ಅರ್ಚಕರು ನೆರೆದಿರುವ ಭಕ್ತರಿಗೆ ಬ್ರಹ್ಮಕುಂಡಿಕೆಯಿಂದ ತೀರ್ಥ ಪ್ರೋಕ್ಷಣೆ ಮಾಡಿದರು. ತೀರ್ಥೋದ್ಭವಕ್ಕೆ ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಆಗಮಿಸಿದ್ದರು.

ಬೆಳಗ್ಗೆ 7 ಗಂಟೆ 40 ನಿಮಿಷಕ್ಕೂ ಮೊದಲು ಒಂದು ಗಂಟೆಯಿಂದ ನಿರಂತರವಾಗಿ ಅರ್ಚಕ ಗುರುರಾಜ್ ಆಚಾರ್ ನೇತೃತ್ವದಲ್ಲಿ ವಿಶೇಷ ಪೂಜಾ ಪುನಸ್ಕಾರಗಳು ನಡೆದವು. ಜೊತೆಗೆ ಅರ್ಚಕ ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಅರ್ಚಕರ ತಂಡ ಬ್ರಹ್ಮಕುಂಡಿಕೆಯ ಬಳಿ ಕಾವೇರಿ ತೀರ್ಥೋದ್ಭವಕ್ಕೆ ಪೂಜೆ ನಡೆಸಿದರು. ಕಾವೇರಿ ಮಾತೆಯನ್ನು ಆಹ್ವಾನಿಸಲು ವಿವಿಧ ಪೂಜಾ ಕೈಂಕಾರ್ಯಗಳನ್ನು ಅರ್ಚಕರ ತಂಡ ಕೈಗೊಂಡಿತ್ತು.

ರಾಜ್ಯದ ಬೇರೆ ಬೇರೆ ಭಾಗಗಳಿಂದ ಮಂಡ್ಯ, ಮೈಸೂರು, ಹಾಸನ ಹಾಗೂ ಬೇರೆ ರಾಜ್ಯಗಳಾದ ತಮಿಳುನಾಡು, ಕೇರಳದಿಂದ ಸಹಸ್ರ ಸಂಖ್ಯೆಯಲ್ಲಿ ಭಕ್ತರ ಆಗಮಿಸಿದ್ದರು. ಇನ್ನೂ ತೀರ್ಥ ರೂಪಿಣಿ ಕಾವೇರಿ ಮಾತೆಯನ್ನು ಕಣ್ತುಂಬಿಕೊಳ್ಳಲು ಭಕ್ತಗಣ ಕಾತುರದಿಂದ ಕಾದು, ಉಕ್ಕಿ ಬಾ ಕಾವೇರಮ್ಮೆ, ಕಾವೇರಿ ಬಾಳು ಎಂದು ಭಜಿಸುತ್ತಿದ್ದರು. ಬ್ರಹ್ಮಕುಂಡಿಕೆಯ ಬಳಿ ಸಾವಿರಾರು ಜನ ಭಕ್ತರು ನೆರೆದಿದ್ದರು. ಕೊಡವ ಧಿರಿಸಿನಲ್ಲಿ ಬಂದ ಭಕ್ತರು ದುಡಿಕೊಟ್ಟು ಪಾಟ್ ಬಡಿಯುತ್ತಾ ಕಾವೇರಿ ಸ್ಮರಣೆ ಮಾಡಿದರು.

Shwetha M

Leave a Reply

Your email address will not be published. Required fields are marked *