ಕಾವೇರಿದ ಕಾವೇರಿ ಕಿಚ್ಚು.. ಹೇಗಿದೆ ಬೆಂಗಳೂರು ಬಂದ್‌?

ಕಾವೇರಿದ ಕಾವೇರಿ ಕಿಚ್ಚು.. ಹೇಗಿದೆ ಬೆಂಗಳೂರು ಬಂದ್‌?

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕಾವೇರಿ ಕಿಚ್ಚು ತೀವ್ರಗೊಂಡಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೀಡಿರುವ ‘ಬೆಂಗಳೂರು ಬಂದ್‌’ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಇಂದು (ಮಂಗಳವಾರ) ಬೆಳಗ್ಗೆಯಿಂದಲೇ ರಾಜಧಾನಿ ಸ್ತಬ್ಧವಾಗಿದೆ.

ಬೆಂಗಳೂರು ಬಂದ್‌ ಹಿನ್ನೆಲೆ ನಗರದಲ್ಲಿ ಸಂಚಾರ ವಿರಳವಾಗಿದೆ. ಬಿಎಂಟಿಸಿ ಬಸ್‌ ಗಳು ಸೇರಿದಂತೆ ಆಟಫ, ಖಾಸಗಿ ಕ್ಯಾಬ್‌ಗಳ ಸಂಚಾರ ಎಂದಿನಂತೆ ಇದೆ. ಬಂದ್‌ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದರಿಂದ ಬೆಳಗ್ಗಿನ ಅವಧಿಯಲ್ಲಿ ನಗರದಲ್ಲಿ ವಾಹನ ದಟ್ಟಣೆ ಕಡಿಮೆಯಾಗಿದ್ದು, ಜನರ ಕೂಡ ಕಡಿಮೆಯಿದೆ.  ನಗರಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​ ಕೈಗೊಳ್ಳಲಾಗಿದ್ದು, 144 ಸೆಕ್ಷನ್​ ಜಾರಿ ಮಾಡಲಾಗಿದೆ. ಸಿಎಂ ನಿವಾಸಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕುವ ಸಾಧ್ಯತೆ ಇರುವುದರಿಂದ ಸಿಎಂ ಅವರ ಕಾವೇರಿ ನಿವಾಸದ ಬಳಿ ಭಾರಿ ಭದ್ರತೆ ನಿಯೋಜಿಸಲಾಗಿದೆ.

ಇದನ್ನೂ ಓದಿ: ಮತ್ತೊಮ್ಮೆ ಜಗತ್ತನ್ನು ಕಾಡಲಿದ್ಯಾ ಕೊರೋನಾ ರೂಪಾಂತರಿ? – ಚೀನಾದ ಖ್ಯಾತ ವೈರಾಣು ತಜ್ಞೆ ಎಚ್ಚರಿಕೆ!

ತಮಿಳುನಾಡಿಗೆ ಹೊರಟ ಬಸ್

ರಾಜಧಾನಿಯಿಂದ ತಮಿಳುನಾಡಿಗೆ ಮೊದಲ ಕೆಎಸ್​ಆರ್​ಟಿಸಿ ಬಸ್ ಸ್ಯಾಟಲೈಟ್​ ಬಸ್​ ನಿಲ್ದಾಣದಿಂದ ಹೊರಟಿದೆ. ಯಾವುದೇ ಅಹಿತಕರ ಘಟನೆ ನಡೆಯದಿದ್ದರೆ ಮತ್ತಷ್ಟು‌ ಬಸ್ ಆಪರೇಟ್ ಮಾಡಲು ತೀರ್ಮಾನಿಸಲಾಗಿದೆ. ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ತಮಿಳುನಾಡು ಬಸ್​ ಹೊಸೂರಿಗೆ

ಬೆಂಗಳೂರು ಬಂದ್ ಹಿನ್ನಲೆಯಲ್ಲಿ ತಮಿಳುನಾಡಿನ ಬಸ್​ಗಳು ಸ್ಯಾಟಲೈಟ್ ಬಸ್ ನಿಲ್ದಾಣದ ಕಡೆ ಮುಖ‌ ಮಾಡಿಲ್ಲ. ನಿನ್ನೆ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬಂದ ತಮಿಳುನಾಡು ಬಸ್​ಗಳು ಸಹ ವಾಪಸ್ಸಾಗುತ್ತಿವೆ. ಪ್ರತಿ ದಿನ ಬೆಳಗ್ಗೆ ಸುಮಾರು 50 ತಮಿಳುನಾಡು ಬಸ್ ಆಪರೇಟ್ ಆಗುತ್ತದೆ. ಆದರೆ, ಈಗ ಒಂದು ಬಸ್​ ಕೂಡ ಇಲ್ಲ. ಎಲ್ಲ ಬಸ್​ಗಳು ತಮಿಳುನಾಡಿನ ಹೊಸೂರು ಕಡೆ ಹೊರಟಿವೆ.

ಸಿಎಂ ನಿವಾಸಕ್ಕೆ ಭದ್ರತೆ

ಬಂದ್​ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಮುತ್ತಿಗೆ ಹಾಕುವ ಸಾಧ್ಯತೆ ಇರುವುದರಿಂದ ಸಿಎಂ ನಿವಾಸದ ಬಳಿ ಬಿಗಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿದೆ. ಕೆಎಸ್​ಆರ್​ಪಿ ತುಕಡಿ ಸೇರಿ 50 ಪೊಲೀಸರನ್ನು ನಿಯೋಜಿಸಲಾಗಿದೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ಇಂದು ಮೈಸೂರಿಗೆ ತೆರಳಲಿದ್ದಾರೆ. ಬೆಳಗ್ಗೆ 9.30ಕ್ಕೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ಮೈಸೂರಿಗೆ ಹೋಗಲಿದ್ದಾರೆ.

Shwetha M