ದಾಳಿ ಮಾಡಿದ ಹುಲಿಯನ್ನೇ ಹಿಮ್ಮೆಟ್ಟಿಸಿದ ಹಸುಗಳು! – ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು ಮತ್ತೆ ಸಾಬೀತು

ದಾಳಿ ಮಾಡಿದ ಹುಲಿಯನ್ನೇ ಹಿಮ್ಮೆಟ್ಟಿಸಿದ ಹಸುಗಳು! – ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು ಮತ್ತೆ ಸಾಬೀತು

ವನ್ಯಜೀವಿಗಳು ಆಗಾಗ ಜನವಸತಿ ಪ್ರದೇಶಗಳಿಗೆ ಆಗಮಿಸುತ್ತವೆ. ಸಾಕು ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತವೆ. ಇತ್ತೀಚಿನ ದಿನಗಳಲ್ಲಂತೂ ಹುಲಿ, ಚಿರತೆ ಹಳ್ಳಿಗಳಿಗೆ ನುಗ್ಗಿ ಸಾಕು ಪ್ರಾಣಿಗಳು ಬೇಟೆಯಾಡುತ್ತಿರುತ್ತವೆ. ಕೆಲವೊಂದು ಬಾರಿ ಸಾಕು ಪ್ರಾಣಿಗಳು ಹುಲಿ, ಚಿರತೆಗೆ ಚಳ್ಳೆಹಣ್ಣು ತಿನ್ನಿಸುತ್ತವೆ. ಇಂತಹ ಸಾಕಷ್ಟು ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತವೆ. ಇದೀಗ ಇಲ್ಲೊಂದು ಆಶ್ಚರ್ಯಕಾರಿ ಘಟನೆ ನಡೆದಿದೆ. ಹಸುಗಳ ಹಿಂಡೊಂದು ಹುಲಿಯೊಂದನ್ನು ಧೈರ್ಯವಾಗಿ ಹಿಮ್ಮೆಟ್ಟಿಸಿದೆ. ಇದರ ವಿಡಿಯೋ ಭಾರಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ:ಹೆಲ್ಮೆಟ್ ಧರಿಸೋ ಮುನ್ನ ಎಚ್ಚರ – ವೈರಲ್ ಆದ ವಿಡಿಯೋ ನೋಡಿದ್ರೆ ಬೆಚ್ಚಿಬೀಳೋದು ಪಕ್ಕಾ! 

ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಗಾದೆ ಮಾತನ್ನು ನಾವು ಕೇಳಿದ್ದೇವೆ. ನಮ್ಮ ಸುತ್ತಮುತ್ತಲಿರುವವರೊಂದಿಗೆ ನಾವು ಅನ್ಯೋನ್ಯವಾಗಿದ್ದರೆ ಎಂತಹ ಕಷ್ಟವನ್ನು ಕೂಡ ಸುಲಭವಾಗಿ ಎದುರಿಸಬಹುದು ಎಂದು ನಮ್ಮ ಹಿರಿಯರು ಆಗಾಗ ಹೇಳುತ್ತಿರುತ್ತಾರೆ. ಇಲ್ಲೊಂದು ಹಸುಗಳ ಹಿಂಡೊಂದು ಹುಲಿಯನ್ನು ಧೈರ್ಯವಾಗಿ ಹಿಮ್ಮೆಟ್ಟಿಸಿರುವ ಘಟನೆ ಭೋಪಾಲ್​​ನ ಕೆರ್ವಾ ಎಂಬ ಪ್ರದೇಶದಲ್ಲಿ ನಡೆದಿದೆ. ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್‌ ಆಗಿದೆ.

ಕೆರ್ವಾದಲ್ಲಿರುವ ಹಸುಗಳ ಫಾರಮ್​ ಒಂದರಲ್ಲಿ ನಡೆದಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ಹಸು ಒಂದರ ಮೇಲೆ ಹುಲಿಯೊಂದು ದಾಳಿ ಮಾಡುತ್ತದೆ. ಇದನ್ನು ಕಂಡ ಗುಂಪಿನಲ್ಲಿದ್ದ ಇತರೆ ಹಸುಗಳು ಹುಲಿಯ ವಿರುದ್ಧ ತಿರುಗಿ ಬೀಳುತ್ತವೆ. ಸುಮಾರು ಮೂರು ಘಂಟೆಗಳ ಕಾಲ ಹುಲಿ ತನ್ನ ಬೇಟೆಗಾಗಿ ಹೊಂಚು ಹಾಕಿ ಕಾದರೂ ಯಾವುದೇ ಪ್ರಯೋಜನವಿಲ್ಲದೆ ವಾಪಸ್​ ಹೋಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಫಾರಮ್​ನ ಮಾಲೀಕ ಕಳೆದ ಆರು ತಿಂಗಳ ಅವಧಿಯಲ್ಲಿ ಐದು ಬಾರಿ ಹುಲಿ ಕಾಣಿಸಿಕೊಂಡಿದೆ. ಜಮೀನಿನ ಸುತ್ತ ಅಳವಡಿಸಿರುವ 14 ಅಡಿ ಉದ್ದದ ತಂತಿ ಬೇಲಿಯನ್ನು ನಾಶ ಮಾಡಿದೆ. ಈ ಪ್ರದೇಶದಲ್ಲಿ ಹುಲಿ ದಾಳಿ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ಧಾರೆ.

76 ಎಕರೆ ಪ್ರದೇಶದಲ್ಲಿ ಸುಮಾರು 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹುಲಿ ದಾಳಿಗೆ ತುತ್ತಾಗಿರುವ ಹಸುವನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಫಾರಮ್​ನ ಮಾಲೀಕ ತಿಳಿಸಿದ್ಧಾರೆ.

suddiyaana