ಕಾರಲ್ಲಿ‌ ಬರುವ ಕಳ್ಳಿಯರ‌ ಕರಾಮತ್ತು – ಸಿಸಿಟಿವಿಯಲ್ಲಿ  ರೆಕಾರ್ಡ್ ಆಗಿದ್ದೇನು‌ ಗೊತ್ತಾ?

ಕಾರಲ್ಲಿ‌ ಬರುವ ಕಳ್ಳಿಯರ‌ ಕರಾಮತ್ತು – ಸಿಸಿಟಿವಿಯಲ್ಲಿ  ರೆಕಾರ್ಡ್ ಆಗಿದ್ದೇನು‌ ಗೊತ್ತಾ?

ಇವರಿಬ್ಬರನ್ನ ನೋಡಿದಾಗ ತುಂಬಾ ಓದಿರೋ ವಿದ್ಯಾವಂತರ ತರ ಕಾಣಿಸ್ತಾರೆ. ಪಾಂಟ್, ಟೀ ಶರ್ಟ್ ಧರಿಸಿ ತುಂಬಾ ಸ್ಟೈಲಿಶ್ ಆಗಿ ಕಾಣುತ್ತಿದ್ದಾರೆ. ಕಾರಿನಲ್ಲೇ ಓಡಾಡ್ತಾರೆ. ತುಂಬಾ ಸ್ಮಾರ್ಟ್ ಆಗಿ ಕಾಣುತ್ತಿರೋ ಇವರಿಬ್ಬರು ಮಾಡೋ ಕೆಲಸ ನೋಡಿದ್ರೆ ಎಂತವರೂ ಶಾಕ್ ಆಗ್ತಾರೆ. ಇದೀಗ ಚಾಲಾಕಿ ಕಳ್ಳಿಯರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಷ್ಕಕ್ಕೂ ಯುವತಿಯರು ಮಾಡಿದ್ದೇನು?

ಕಳ್ಳರ ಕಣ್ಣಿಗೆ ಯಾವುದಾದರೂ ದುಬಾರಿ ವಸ್ತು ಕಂಡ್ರೆ ಸಾಕು. ಆ ವಸ್ತು ತಮ್ಮ ಪಾಲಾಗುವ ತನಕ ಸುಮ್ಮನೆ ಕೂರೋದಿಲ್ಲ. ಹೇಗಾದರೂ ಮಾಡಿ ಆ ವಸ್ತುವನ್ನು ಎಗರಿಸಿ ಬಿಡುತ್ತಾರೆ. ಇಲ್ಲಿಬ್ಬರು ಮಹಾನ್ ಕಳ್ಳಿಯರು ತಮ್ಮ ಕೈಚಳಕ ತೋರಿಸಿದ್ದಾರೆ. ಕಾರಿನಲ್ಲಿ ಬಂದು ಮನೆ ಮುಂದೆ ಇಟ್ಟಿದ್ದ ಹೂವಿನ ಕುಂಡಗಳನ್ನು ಕದ್ದಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಾರಿ ವೈರಲ್ ಆಗಿದೆ.

ಇದನ್ನೂ ಓದಿ:

ಈ ಘಟನೆ ಪಂಜಾಬ್ ನ ಮೊಹಾಲಿಯಲ್ಲಿ ನಡೆದಿದೆ. ವೈರಲ್ ಆದ ವಿಡಿಯೋದಲ್ಲಿ ಇಬ್ಬರು ಮಹಿಳೆಯರು ಕಾರಿನಲ್ಲಿ ಬಂದು ಮನೆಯ ಎದುರು ಕಾರು ನಿಲ್ಲಿಸುತ್ತಾರೆ. ಬಳಿಕ ಮನೆ ಮುಂದೆ ಯಾರಾದರೂ ಇದ್ದಾರಾ ಎಂದು ಸುತ್ತಮುತ್ತ ನೋಡುತ್ತಾರೆ. ಬಳಿಕ ಯುವತಿಯೊಬ್ಬಳು ಬಂದು ಮನೆಯ ಮುಂದೆ ಇಟ್ಟಿದ್ದ ಹೂವಿನ ಕುಂಡಗಳನ್ನು ಎಗರಿಸಿ ಕಾರಿನಿಂದ ಎಸ್ಕೇಪ್ ಆಗುತ್ತಾಳೆ. ಬಳಿಕ ಅದೇ ಕಾರಿನಲ್ಲಿ ಮತ್ತೆ ಇಬ್ಬರು ಯುವತಿಯರು ಆ ಮನೆ ಮುಂದೆ ಬರುತ್ತಾರೆ. ಕಾರಿನಿಂದ ಇಳಿದ ಇಬ್ಬರು ಯುವತಿಯರು ಮನೆಯ ಕಾಂಪೌಂಡ್ ಮೇಲೆ ಇದ್ದ ಹೂವಿನ ಕುಂಡವನ್ನು ಎಗರಿಸಿ ಕೂಡಲೇ  ಸ್ಥಳದಿಂದ ಪರಾರಿಯಾಗಿದ್ದಾರೆ. ಹೂವಿನ ಕುಂಡಗಳನ್ನು ಕದಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಒಂದೇ ವಾರದಲ್ಲಿ ಹತ್ತು ಪ್ರಕರಣ!

ಮೊಹಾಲಿಯಲ್ಲಿ ಹೂವಿನ ಕುಂಡಗಳ ಕಳ್ಳತನ ಪ್ರಕರಣ ವರದಿಯಾಗುತ್ತಲೇ. ಕಳೆದ ಒಂದು ವಾರದಲ್ಲಿ ಹತ್ತನೇ ಪ್ರಕರಣ ಇದಾಗಿದೆ. ಹೂಕುಂಡಗಳನ್ನು ಕದಿಯುತ್ತಿರುವ ದೃಶ್ಯ ಮನೆಯ ಹೊರಭಾಗದಲ್ಲಿನ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Shwetha M