ಮಕ್ಕಳ ಬುಕ್ ರಿಲೀಸ್ ಮಾಡಿದ ಬೆಕ್ಕು!

ಮಕ್ಕಳ ಬುಕ್ ರಿಲೀಸ್ ಮಾಡಿದ ಬೆಕ್ಕು!

ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಎಂದಾಕ್ಷಣ, ಅದನ್ನು ರಿಲೀಸ್ ಮಾಡುವವರು ಯಾರು ಎಂಬ ಕುತೂಹಲ ಇದ್ದೇ ಇರುತ್ತೆ. ಅದಕ್ಕಾಗಿ, ಗಣ್ಯ ವ್ಯಕ್ತಿಗಳನ್ನು ಆಯ್ಕೆ ಮಾಡಿ ಅವರ ಕೈಯಲ್ಲಿ ಪುಸ್ತಕ ಬಿಡುಗಡೆ ಮಾಡುವುದು ವಾಡಿಕೆಯಾಗಿ ಬಂದಿದೆ. ಆದರೆ ಇಲ್ಲೊಬ್ಬರು ತಾವು ಬರೆದ ಪುಸ್ತಕವನ್ನು ಬೆಕ್ಕುಗಳ ಕೈಯಲ್ಲಿ ರಿಲೀಸ್ ಮಾಡಿಸಿದ್ದಾರೆ. ವಿಶೇಷವಾಗಿ ಬೆಕ್ಕುಗಳ ಕೈಯಲ್ಲಿ ಪುಸ್ತಕ ರಿಲೀಸ್ ಮಾಡುವುದಕ್ಕೂ ಒಂದು ಕಾರಣವಿದೆ.

ಇದನ್ನೂ ಓದಿ: ಇದು ಪೆನ್ ಅಲ್ಲ, ಮೊಬೈಲ್! – ಪರೀಕ್ಷೆಯಲ್ಲಿ ಕಾಪಿ ಹೊಡೆಯುವ ಹೊಸ ಟೆಕ್ನಿಕ್

ಹೌದು, ಕೇರಳದ ಎರ್ನಾಕುಲಂನ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಹರೀಶ್ ಆರ್ ನಂಬೂತಿರಿಪ್ಪಾಡ್ ಎಂಬವರು ‘ಚೊಟ್ಟುವುಂ ಮೀಟುವುಂ’ಎಂಬ ಮಕ್ಕಳ ಕತೆ ಪುಸ್ತಕ ಬರೆದಿದ್ದಾರೆ. ಇದು ಅವರ 41ನೇ ಪುಸ್ತಕವಾಗಿದ್ದು, ಇದರಲ್ಲಿ ಬೆಕ್ಕುಗಳ ಕುರಿತಾಗಿದೆ. ಹಾಗಾಗಿ ಈ ಪುಸ್ತಕವನ್ನು ಎರಡು ಪರ್ಷಿಯನ್ ಬೆಕ್ಕುಗಳಾದ ಮಿಯೋ ಮತ್ತು ಕಾಥು ಕೈಯಲ್ಲಿ ಬಿಡುಗಡೆ ಮಾಡಿಸಿದ್ದಾರೆ.

ಪಂಪಾಕುಡದ ಫಾದರ್ ವರ್ಗೀಸ್ ಅವರ ಬೆಕ್ಕುಗಳು ಈ ಪುಸ್ತಕ ಬಿಡುಗಡೆ ಮಾಡಿವೆ. ಫಾದರ್ ಮತ್ತು ಅವರ ಪತ್ನಿ ಬೆಕ್ಕುಗಳಿಗೆ ಪುಸ್ತಕವನ್ನು ಹಸ್ತಾಂತರಿಸಿ ಲೋಕಾರ್ಪಣೆ ಕಾರ್ಯಕ್ರಮ ನಡೆಸಿದ್ದಾರೆ. ಈ ಪುಸ್ತಕವು 25 ಮಕ್ಕಳ ಕಥೆಗಳಿಂದ ಕೂಡಿರುವ ಪುಟ್ಟ ಕಥಾ ಸಂಕಲನವಾಗಿದೆ.

ಇದೇ ರೀತಿ ಮೇಕೆಗಳ ಪಾತ್ರಧಾರಿಯಾಗಿರುವ ಇನ್ನೊಂದು ಪುಸ್ತಕ ‘ಅಮ್ಮುವಿಂದೆ ಕುಂಜುಮಲು’ ಹಾಗೂ ‘ತಕ್ಕಲಿ ಕಲ್ಯಾಣಂ’ (ಟೊಮೆಟೋ ಮದುವೆ) ಹೆಸರಿನ ಪುಸ್ತಕವನ್ನು ತರಕಾರಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ.

ವಿವಿಧ ಪುಸ್ತಕಗಳನ್ನು ಬರೆಯುವುದರ ಜೊತೆಗೆ ಲೇಖಕ ನಂಬೂತಿರಿಪ್ಪಾಡ್ ಅವರು ಕಳೆದ ಮೂರು ವರ್ಷಗಳಿಂದ, ಆಡಿಯೊ ಸ್ವರೂಪಗಳಲ್ಲಿ ಮಕ್ಕಳ ಕಥೆಗಳು ಮತ್ತು ಕವಿತೆಗಳನ್ನು ರಚಿಸುತ್ತಿದ್ದಾರೆ. ಇದೀಗ ಬೆಕ್ಕುಗಳಿಂದ ಪುಸ್ತಕ ಬಿಡುಗಡೆಗೊಳಿಸಿ ಸುದ್ದಿಯಲ್ಲಿದ್ದಾರೆ.

suddiyaana