ಮೀನು ಹಿಡಿಯಿರಿ, ಅದೇ ಮೀನಿನ ಖಾದ್ಯ ಸವಿಯಿರಿ..!
ಯಾವ ಮೀನು ಬೇಕೋ ಅದೇ ಮೀನಿನ ಮೆನು ರೆಡಿ..!

ಮೀನು ಹಿಡಿಯಿರಿ, ಅದೇ ಮೀನಿನ ಖಾದ್ಯ ಸವಿಯಿರಿ..!ಯಾವ ಮೀನು ಬೇಕೋ ಅದೇ ಮೀನಿನ ಮೆನು ರೆಡಿ..!

ಜಪಾನ್ : ಮೀನು ಇಷ್ಟಪಡುವವರು ತಮಗಿಷ್ಟವಾದ ಮೀನೂಟವನ್ನ ಹುಡುಕಿಕೊಂಡು ಹೋಗಿಯೇ ಹೋಗ್ತಾರೆ. ಅವ್ರಿಗೆ ಎಲ್ಲೇ ಹೋದರೂ ವೆರೈಟಿ ವೆರೈಟಿ ಫಿಶ್ ತಿನ್ನಲು ಬೇಕೇ ಬೇಕು. ಫಿಶ್ ಫ್ರೈ, ಫಿಶ್ ಕರಿ, ಫಿಶ್ ಕಬಾಬ್ ತಿನ್ನೋದಕ್ಕೆ ಸಾಕಷ್ಟು ರೆಸ್ಟೋರೆಂಟ್‌ಗಳಿವೆ. ಆದರೆ, ನೀವೇನಾದರೂ ಹೊಸ ಅನುಭವದೊಂದಿಗೆ ಮೀನು ಸವಿಯಲು ಬಯಸಿದ್ರೆ ಅದಕ್ಕಾಗಿಯೇ ಒಂದು ಸ್ಪೆಷಲ್ ರೆಸ್ಟೋರೆಂಟ್ ಇದೆ. ಈ ವಿಶಿಷ್ಟ ಹೋಟೆಲ್ ಇರುವುದು ಜಪಾನ್‌ನಲ್ಲಿ.    ಜಪಾನಿನ ಒಸಾಕಾದಲ್ಲಿರುವ ಝೌವೋ ಫಿಶಿಂಗ್ ರೆಸ್ಟೋರೆಂಟ್‌ಗೆ ಬರುವ ಗ್ರಾಹಕರಿಗೆ ಮೀನೂಟದ ರುಚಿಯ ಜೊತೆಗೆ ವಿಶಿಷ್ಟ ಅನುಭವ ಸಿಗುತ್ತಿದೆ. ಇಲ್ಲಿ ಗ್ರಾಹಕರಿಗೆ ಅವರೇ ಹೇಳಿದ ಮೀನು ಸಿಗೋದು ಮಾತ್ರವಲ್ಲ. ಗ್ರಾಹಕರೇ ಮೀನನ್ನು ಹಿಡಿದು ತಿನ್ನುವ ಹೊಸ ಅನುಭವ ಸಿಗಲಿದೆ. ಈ ಹೋಟೆಲ್‌ಗೆ ಬರುವ ಗ್ರಾಹಕರು  ತಮಗೆ ಬೇಕಾದ ಮೀನುಗಳಿಗೆ ಗಾಳ ಹಾಕಿ ಹಿಡಿಯಬಹುದು. ಮೀನು ಹಿಡಿಯಲು ರೆಸ್ಟೋರೆಂಟ್ ಸಿಬ್ಬಂದಿ ಸಹಾಯ ಮಾಡುತ್ತಾರೆ. ಮೀನು ಹಿಡಿದ ಮೇಲೆ ಖುಷಿಯಾದರೆ ಡ್ರಮ್ ಬಾರಿಸಬಹುದು.

ಇದನ್ನೂ ಓದಿ : ದಾಂಪತ್ಯಜೀವನಕ್ಕೆ ಕಾಲಿಟ್ಟ ನಾಯಿಗಳು! ಸಂಪ್ರದಾಯದಂತೆ ನಡೆದ ಶ್ವಾನಗಳ ಕಲ್ಯಾಣ!

ಇನ್ನು ಗ್ರಾಹಕರು ಹಿಡಿದ ಮೀನು ಸೀದಾ ರೆಸ್ಟೋರೆಂಟ್ ಅಡುಗೆ ಮನೆ ಸೇರುತ್ತದೆ. ನಂತರ ಗ್ರಾಹಕರು ಆರ್ಡರ್ ಮಾಡಿದ ರೀತಿಯಲ್ಲೇ ಮೀನಿನ ರೆಸಿಪಿ ರೆಡಿಯಾಗುತ್ತದೆ. ನಂತರ ಗ್ರಾಹಕರು ಕೂತಿರುವ ಜಾಗಕ್ಕೆ ಖಾದ್ಯ ರೆಡಿಯಾಗಿ ಬರುತ್ತದೆ. ಇನ್ನು ರೆಸ್ಟೋರೆಂಟ್ ಒಳಾಂಗಣ ವಿನ್ಯಾಸವೂ ಸುಂದರವಾಗಿದೆ. ಫಿಶಿಂಗ್ ಮಾಡಬೇಕು ಅನ್ನೋ ಆಸೆಯಿದ್ದವರು. ಗಾಳ ಹಾಕಿ ಮೀನು ಹಿಡಿಯುತ್ತೇವೆ ಅಂತಾ ಹಠ ಮಾಡುವ ಮಕ್ಕಳಿಗೆ ಈ ರೆಸ್ಟೋರೆಂಟ್‌ನಲ್ಲಿ ಅವಕಾಶವಿದೆ. ಜೊತೆಗೆ ಅವರು ಹಿಡಿದ ಮೀನಿನ ಖಾದ್ಯ ತಿನ್ನುವ ಖುಷಿಯೂ ಇದೆ.

suddiyaana