ಇದು ಸ್ಪೈಡರ್‌ ಮ್ಯಾನ್‌ ಅಲ್ಲ.. ಸ್ಪೈಡರ್‌ ಕ್ಯಾಟ್‌! – ಸರಸರನೇ ಗೋಡೆ ಏರುತ್ತೆ ಈ ಬೆಕ್ಕು!

ಇದು ಸ್ಪೈಡರ್‌ ಮ್ಯಾನ್‌ ಅಲ್ಲ.. ಸ್ಪೈಡರ್‌ ಕ್ಯಾಟ್‌! – ಸರಸರನೇ ಗೋಡೆ ಏರುತ್ತೆ ಈ ಬೆಕ್ಕು!

ಬೆಕ್ಕುಗಳು ಮನುಷ್ಯರ ಅತ್ಯಂತ ನೆಚ್ಚಿನ ಸಾಕುಪ್ರಾಣಿ ಎಂದೇ ಹೇಳಬಹುದು. ಹೀಗಾಗಿ ಅನೇಕರು ಮನೆಯಲ್ಲಿ ಬೆಕ್ಕುಗಳನ್ನು ಸಾಕುತ್ತಾರೆ. ಅವುಗಳು ಮಾಡುವ ತುಂಟಾಟ, ತರಲೆಗಳು ಪ್ರತಿಯೊಬ್ಬರಿಗೂ ಇಷ್ಟವಾಗುತ್ತವೆ. ಹೀಗಾಗಿಯೇ ಅವುಗಳನ್ನು ಮುದ್ದಿಸಲು ಅನೇಕರು ಇಷ್ಟಪಡುತ್ತಾರೆ. ಇನ್ನು ಬೆಕ್ಕಿನ ಮರಿಗಳಂತೂ ನಿಂತಲ್ಲಿ ನಿಲ್ಲಲ್ಲ. ಕೂತಲ್ಲಿ ಕೂರಲ್ಲ. ಅತ್ತಿಂದಿತ್ತ ಓಡಾಡುತ್ತ ತುಂಟಾಟ ಮಾಡುತ್ತಲೇ ಇರುತ್ತವೆ. ಏನಾದರೂ ವಸ್ತುಗಳು ಕಣ್ಣಿಗೆ ಕಂಡ್ರೆ ಅದರ ಜೊತೆ ಆಟವಾಡುತ್ತವೆ. ಇದೀಗ ಇಲ್ಲೊಂದು ಬೆಕ್ಕು ಲೇಸರ್‌ ಕಿರಣದ ಜೊತೆ ಆಟವಾಡುತ್ತಿವೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ:ಸುಂದರಿಯ ಬಾಳಲ್ಲಿ ವಿಧಿಯ ಘೋರ ಆಟ! – ತನ್ನ ಸಾವನ್ನು ತಾನೇ ಘೋಷಿಸಿದ ಮಹಿಳೆ!

ಸಾಮಾನ್ಯವಾಗಿ ಬೆಕ್ಕುಗಳು ತಮ್ಮ ಮುದ್ದಾದ ವರ್ತನೆಯಿಂದಲೇ ಮನಗೆಲ್ಲುತ್ತವೆ. ಇಲ್ಲೊಂದು ಮನೆಯಲ್ಲಿ ಮುದ್ದಾದ ಮೂರು ಬೆಕ್ಕಿನ ಮರಿಗಳು ಆಟವಾಡುತ್ತಿವೆ. ಬೆಕ್ಕು ಮರಿಗಳ ಮಾಲೀಕ ಲೇಸರ್‌ ಕಿರಣಗಳನ್ನು ನೆಲದ ಮೇಲೆ ಬಿಟ್ಟಿದ್ದಾರೆ. ಈ ವೇಳೆ ಬೆಕ್ಕಿನ ಮರಿಯೊಂದು ಸ್ಪೈಡರ್‌ ಮ್ಯಾನ್‌ ಹಾಗೆ ಗೋಡೆಯ ಮೇಲೆ ಹತ್ತಿದೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ವೈರಲ್‌ ಆದ ವಿಡಿಯೋದಲ್ಲಿ ಮೂರು ಬೆಕ್ಕಿನ ಮರಿಗಳು ಆಟವಾಡುತ್ತಿರುತ್ತವೆ. ಈ ವೇಳೆ ಬೆಕ್ಕಿನ ಮಾಲೀಕ ಲೇಸರ್‌ ಕಿರಣವನ್ನು ಬಿಟ್ಟಿದ್ದಾರೆ. ಇದನ್ನು ಕಂಡ ಬೆಕ್ಕಿನ ಮರಿಗಳು ಆ ಕಿರಣವನ್ನು ಹಿಡಿಯಲು ಪ್ರಯತ್ನಿಸಿವೆ. ಅದನ್ನು ಹಿಂಬಾಲಿಸುತ್ತಾ ಹಿಂಬಾಲಿಸುತ್ತಾ ಮುಂದಕ್ಕೆ ಹೋಗುತ್ತಿವೆ. ಈ ವೇಳೆ ಮಾಲೀಕ ಲೇಸರ್‌ ಕಿರಣಗಳನ್ನು ಗೋಡೆ ಮೇಲೆ ಬಿಟ್ಟಿದ್ದಾರೆ. ಈ ವೇಳೆ ಬೆಕ್ಕಿನ ಮರಿಗಳು ಹಿಂಬಾಲಿಸಿವೆ. ಲೇಸರ್‌ ಕಿರಣವನ್ನು ಎತ್ತರಕ್ಕೆ ಬಿಡುತ್ತಿದ್ದಂತೆ ಎರಡು ಬೆಕ್ಕಿನ ಮರಿಗಳು ತಮ್ಮ ಪ್ರಯತ್ನವನ್ನು ಅರ್ಧಕ್ಕೆ ನಿಲ್ಲಿಸಿವೆ. ಆದ್ರೆ ಇನ್ನೊಂದು ಬೆಕ್ಕಿನ ಮರಿ ಮಾತ್ರ ಲೇಸರ್‌ ಕಿರಣ ಮೇಲಕ್ಕೆ ಹೋಗುತ್ತಿದ್ದಂತೆ ಸ್ಪೈಡರ್‌ ಮ್ಯಾನ್‌ ತರ ಸರ ಸರನೇ ಗೋಡೆ ಮೇಲೆ ಹತ್ತಿ ಸೀಲಿಂಗ್​ ಕೂಡ ತಲುಪಿಬಿಡುತ್ತದೆ. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಬೆಕ್ಕಿನ ಸಾಮರ್ಥ್ಯವನ್ನು ಸೋಶಿಯಲ್‌ ಮೀಡಿಯಾ ಬಳಕೆದಾದರು ಕೊಂಡಾಡಿದ್ದಾರೆ.

Shwetha M