ಯುದ್ಧ ನೌಕೆ ಮೇಲೆ INS ವಿಕ್ರಾಂತ್ ಮೊದಲ ಜೆಟ್ ಲ್ಯಾಂಡಿಂಗ್ – ವಾಯುಪಡೆ ಪಾಲಿಗೆ ಐತಿಹಾಸಿಕ ಮೈಲುಗಲ್ಲು!

ಯುದ್ಧ ನೌಕೆ ಮೇಲೆ INS ವಿಕ್ರಾಂತ್ ಮೊದಲ ಜೆಟ್ ಲ್ಯಾಂಡಿಂಗ್ – ವಾಯುಪಡೆ ಪಾಲಿಗೆ ಐತಿಹಾಸಿಕ ಮೈಲುಗಲ್ಲು!

ಸ್ವದೇಶಿ ನಿರ್ಮಿತ ಯುದ್ಧ ನೌಕೆ ಐಎನ್ಎಸ್ ವಿಕ್ರಾಂತ್ ಮೇಲೆ ಇದೇ ಮೊದಲ ಬಾರಿಗೆ ಯುದ್ಧ​ ವಿಮಾನ ಯಶಸ್ವಿಯಾಗಿ ಲ್ಯಾಂಡ್​ ಆಗಿ, ಬಳಿಕ ಟೇಕಾಫ್ ಕೂಡ ಆಗಿದೆ. ಆತ್ಮನಿರ್ಭರ ಭಾರತದ ಪ್ರತೀಕವಾಗಿರುವ ಐಎನ್​ಎಸ್ ವಿಕ್ರಾಂತ್, 20 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು. 262 ಮೀಟರ್ ಉದ್ದ, 62 ಮೀಟರ್ ಅಗಲವಿರುವ ವಿಕ್ರಾಂತ್ ನೌಕೆಯನ್ನ ಕಳೆದ ವರ್ಷ ಸೆಪ್ಟೆಂಬರ್​​ನಲ್ಲಿ ಪ್ರಧಾನಿ ಮೋದಿ ಸೇನೆಗೆ ಸೇರ್ಪಡೆಗೊಳಿಸಿದ್ರು. ಇದೀಗ ಈ ಯುದ್ಧ ಹಡಗಿನಲ್ಲಿ ಮೊಟ್ಟ ಮೊದಲ ಬಾರಿ ಯುದ್ಧ ವಿಮಾನ ಲ್ಯಾಂಡ್ ಆಗಿದೆ. 30 ಫೈಟರ್​ ಜೆಟ್ ಮತ್ತು ಹೆಲಿಕಾಪ್ಟರ್​​ಗಳನ್ನ ಹೊತ್ತೊಯ್ಯುವ ಸಾಮರ್ಥ್ಯವನ್ನ ವಿಕ್ರಾಂತ್ ಯುದ್ಧ ನೌಕೆ ಹೊಂದಿದೆ.

ಇದನ್ನೂ ಓದಿ : ಜಗತ್ತಿಗೆ ಕೊರೊನಾ ವೈರಸ್ ಹರಡಲು ಬಿಲ್ ಗೇಟ್ಸ್ ಕಾರಣನಾ!? – ಶ್ರೀಮಂತನ ಸುತ್ತ ಏನಿದು ವಿವಾದ..?

ನೌಕಾ ಪೈಲಟ್‌ಗಳು ಐಎನ್‌ಎಸ್ ವಿಕ್ರಾಂತ್ ಹಡಗಿನಲ್ಲಿ ಇಳಿಯುತ್ತಿದ್ದಂತೆ ಹೊಸ ಇತಿಹಾಸ ಬರೆದಿದೆ. ಭಾರತೀಯ ನೌಕಾಪಡೆಯು ಆತ್ಮ ನಿರ್ಭರ್ ಭಾರತ್ ಕಡೆಗೆ ಸಾಧಿಸಿದ ಐತಿಹಾಸಿಕ ಮೈಲಿಗಲ್ಲು. ಇದು ಸ್ವದೇಶಿ ಫೈಟರ್ ಏರ್‌ಕ್ರಾಫ್ಟ್‌ನೊಂದಿಗೆ ಸ್ವದೇಶಿ ವಿಮಾನವಾಹಕ ನೌಕೆಯನ್ನು ವಿನ್ಯಾಸಗೊಳಿಸಲು, ಅಭಿವೃದ್ಧಿಪಡಿಸಲು, ನಿರ್ಮಿಸಲು ಮತ್ತು ನಿರ್ವಹಿಸಲು ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ ಎಂದು ನೌಕಾಪಡೆ ತಿಳಿಸಿದೆ.

₹ 20,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 45,000 ಟನ್ ತೂಕದ ಐಎನ್‌ಎಸ್ ವಿಕ್ರಾಂತ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಾರ್ಯಾರಂಭ ಮಾಡಿತ್ತು. 262 ಮೀಟರ್ ಉದ್ದ ಮತ್ತು 62 ಮೀಟರ್ ಅಗಲದ ಐಎನ್‌ಎಸ್ ವಿಕ್ರಾಂತ್ ಭಾರತದಲ್ಲಿ ನಿರ್ಮಿಸಲಾದ ಅತಿದೊಡ್ಡ ಯುದ್ಧ ನೌಕೆಯಾಗಿದೆ. ಬಾಂಗ್ಲಾದೇಶದ ವಿಮೋಚನೆಗಾಗಿ ಪಾಕಿಸ್ತಾನದ ವಿರುದ್ಧ 1971 ರ ಯುದ್ಧದ ಸಮಯದಲ್ಲಿ ಪ್ರಮುಖ ಪಾತ್ರ ವಹಿಸಿದ ಯುದ್ಧ ವಿಮಾನದ ಹೆಸರನ್ನೇ INS ವಿಕ್ರಾಂತ್ ಗೆ ಇಡಲಾಗಿದೆ.

suddiyaana