ರೆಕಾರ್ಡಿಂಗ್ ವೇಳೆ ಕಾಫಿ ಶಾಪ್ ಗೆ ನುಗ್ಗಿದ ಕಾರು – ಬೆಚ್ಚಿಬೀಳಿಸುವಂತಿದೆ ವಿಡಿಯೋ

ರೆಕಾರ್ಡಿಂಗ್ ವೇಳೆ ಕಾಫಿ ಶಾಪ್ ಗೆ ನುಗ್ಗಿದ ಕಾರು – ಬೆಚ್ಚಿಬೀಳಿಸುವಂತಿದೆ ವಿಡಿಯೋ

ವಾಷಿಂಗ್ಟನ್: ಕಾಫಿ ಶಾಪ್ ನಲ್ಲಿ ಯುವಕರಿಬ್ಬರು ಪಾಡ್ ಕಾಸ್ಟ್ ಮಾಡುತ್ತಿರುವ ವೇಳೆ ಕಾರೊಂದು ವೇಗವಾಗಿ ಬಂದು ಕಿಟಕಿಗೆ ಡಿಕ್ಕಿ ಹೊಡೆದಿದೆ. ಈ ಭಯಾನಕ ದೃಶ್ಯ ಸೆರೆಯಾಗಿದೆ.

ಟೆಕ್ಸಾಸ್ ನ ಹೂಸ್ಟನ್ ಎಂಬಲ್ಲಿ ಮಾರ್ಚ್ 5 ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.  ಕಾಫಿ ಶಾಪ್ ವೊಂದರಲ್ಲಿ ಅಲೆಕ್ಸೈ ರೆಯೀಸ್ ಮತ್ತು ನಾಥನ್ ರೀವ್ಸ್ ಪಾಡ್ ಕಾಸ್ಟ್ ರೆಕಾರ್ಡಿಂಗ್ ನಲ್ಲಿ ನಿರತರಾಗಿದ್ದರು. ಆಗ ಅತೀ ವೇಗದಲ್ಲಿ ಬಂದ ಕಪ್ಪುಬಣ್ಣದ ಚೆವ್ರೋಲೆಟ್ ಕಾರು ಈ ಇಬ್ಬರು ಕುಳಿತಿದ್ದ ಕಾಫಿ ಶಾಪ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಕಿಟಕಿ ಗಾಜುಗಳೆಲ್ಲಾ ಪುಡಿ, ಪುಡಿಯಾಗಿದೆ. ಅದೃಷ್ಟವಶಾತ್ ಇಬ್ಬರು ಸಣ್ಣ,ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಭಯಾನಕ ದೃಶ್ಯ ಈಗ ಭಾರಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಸ್ಮಾರ್ಟ್ ಫೋನ್ ಖರೀದಿಸಿದರೆ 2 ಕ್ಯಾನ್ ಬಿಯರ್ ಫ್ರೀ – ಮೊಬೈಲ್ ಗಾಗಿ ಬಂದವರಿಗೆ ಸಿಕ್ಕಿದ್ದು ಲಾಠಿ ಏಟು!

ಏಕಾಏಕಿ ಕಾರು ಕಾಫಿ ಶಾಪ್ ನ ಮೇಲೆ ಡಿಕ್ಕಿ ಹೊಡೆದಿದೆ. ಶಬ್ದ ಕೇಳಿ ಗಾಬರಿಯಾಗಿಬಿಟ್ಟಿದ್ದೆವು. ಹಿಂಬದಿ ತಿರುಗಿ ನೋಡಿದಾಗ ಕಾರು ಹಿಂದಕ್ಕೆ ಹೋಗುತ್ತಿತ್ತು. ಸದ್ಯ ನಮಗೆ ಏನೂ ಪ್ರಾಣಾಪಾಯವಾಗಿಲ್ಲ ಎಂದು ರೆಯೀಸ್ ಮತ್ತು ರೀವ್ಸ್ ತಿಳಿಸಿದ್ದಾರೆ.

ಘಟನೆ ನಡೆದ ಕೂಡಲೇ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವುದೇ ವಿವರವನ್ನು ನೀಡಿಲ್ಲ. ಈ ವಿಡಿಯೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದು, “ಪಾಡ್ ಕಾಸ್ಟ್ ರೆಕಾರ್ಡಿಂಗ್ ಮಾಡುತ್ತಿದ್ದ ವೇಳೆ ಕೆಫೆಗೆ ನುಗ್ಗಿದ ಕಾರು”ಎಂದು ಬರೆದುಕೊಂಡಿದ್ದಾರೆ.

suddiyaana