15 ದಿನಗಳಿಂದ ಚಿರತೆಯದ್ದೇ ಚಿಂತೆ- ಅರಣ್ಯ ಇಲಾಖೆಯ ಖೆಡ್ಡಾದಲ್ಲಿ ಕೊನೆಗೂ ಸೆರೆ

15 ದಿನಗಳಿಂದ ಚಿರತೆಯದ್ದೇ ಚಿಂತೆ- ಅರಣ್ಯ ಇಲಾಖೆಯ ಖೆಡ್ಡಾದಲ್ಲಿ ಕೊನೆಗೂ ಸೆರೆ

ಮೈಸೂರು : ನಂಜನಗೂಡು ತಾಲೂಕಿನ ಏಚಗಳ್ಳಿ ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಬೋನಿಗೆ ಬಿದ್ದಿದೆ. ಪದೇ ಪದೇ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆ ಗ್ರಾಮಸ್ಥರಿಗೆ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಅದು ಕೂಡಾ ಕಳೆದ 15 ದಿನಗಳಿಂದ ಏಚಗಳ್ಳಿ ಗ್ರಾಮದ ಜನ ಹೊರ ಬರಲು ಕೂಡಾ ಹೆದರುವಂತಾ ಸ್ಥಿತಿ ನಿರ್ಮಾಣವಾಗಿತ್ತು. ಸಾಕು ಪ್ರಾಣಿಗಳನ್ನ ಕಾಪಾಡಿಕೊಳ್ಳುವುದು ಕೂಡಾ ತುಂಬಾ ಕಷ್ಟವಾಗಿತ್ತು. ದಿನಕ್ಕೊಂದು ಸಾಕು ಪ್ರಾಣಿಗಳನ್ನ ಹಿಡಿಯುತ್ತಿದ್ದ ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೂ ಮೊರೆಯಿಟ್ಟಿದ್ದರು. ಕೊನೆಗೂ ಕಾಡುತ್ತಿದ್ದ ಚಿರತೆ ಬೋನಿಗೆ ಬಿದ್ದಿದೆ.

ಇದನ್ನೂ ಓದಿ :  ಗುಜರಾತ್ ಮುಖ್ಯಮಂತ್ರಿಯಾಗಿ ಡಿಸೆಂಬರ್ 12ರಂದು ಭೂಪೇಂದ್ರ ಪಟೇಲ್ ಪ್ರಮಾಣವಚನ

ಕಳೆದ 15 ದಿನಗಳಿಂದ ಏಚಗಳ್ಳಿ ಗ್ರಾಮದಲ್ಲಿರುವ ಸಾಕು ಪ್ರಾಣಿಗಳು ಒಂದೊಂದಾಗಿ ಕಣ್ಮರೆಯಾಗುತ್ತಿದ್ದವು. ಇದಕ್ಕೆ ಸರಿಯಾಗಿ ಗ್ರಾಮಸ್ಥರು ಕೂಡಾ ಚಿರತೆ ಕಂಡು ಭಯಗೊಂಡಿದ್ದರು. ಒಂದೆಡೆ ಸಾಕಿದ ಪ್ರಾಣಿಗಳು, ಮತ್ತೊಂದೆಡೆ ಚಿರತೆಯ ಚಿಂತೆಯಿಂದಾಗಿ ಗ್ರಾಮಸ್ಥರ ಪಾಡು ಹೇಳತೀರದಾಗಿತ್ತು. ಚಿರತೆ ಗ್ರಾಮಕ್ಕೆ ನುಗ್ಗಿರುವ ವಿಚಾರವನ್ನು ಅರಣ್ಯ ಇಲಾಖೆಗೂ ತಿಳಿಸಿದ್ದರು. ಅರಣ್ಯ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಬಂದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ನಂತರ ಚಿರತೆ ಸೆರೆ ಹಿಡಿಯಲು ಬೋನ್ ಇಡಲಾಗಿತ್ತು. ಬೋನಿನೊಳಗೆ ನಾಯಿಯನ್ನು ಇರಿಸಲಾಗಿತ್ತು. ಆಹಾರ ಅರಸಿಕೊಂಡು ಬಂದ ಚಿರತೆ ನಾಯಿಯನ್ನ ಕಂಡಿದ್ದೇ ತಡ, ಬೋನಿಗೆ ನುಗ್ಗಿ ಅಲ್ಲಿಯೇ ಸೆರೆಯಾಗಿದೆ. ಅರಣ್ಯ ಇಲಾಖೆಯವರು ನೀಡಿರುವ ಮಾಹಿತಿ ಪ್ರಕಾರ, ಸೆರೆಸಿಕ್ಕಿರುವ ಚಿರತೆ ಹೆಣ್ಣಾಗಿದೆ. ಈ ಚಿರತೆ ಇತ್ತೀಚಿಗೆ ಮೂರು ಮರಿಗಳನ್ನು ಹಾಕಿರುವ ಶಂಕೆಯೂ ಇದೆ.

suddiyaana