ನೀನು ಇಲ್ಲಿ ಹೀರೋ ಆಗಬೇಕಂತಿಲ್ಲ – ಸರ್ಫರಾಜ್ ಖಾನ್‌ಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಕ್ಲಾಸ್
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಕ್ಕೆ ಎಂಟ್ರಿಯಾಗುತ್ತಿದ್ದಂತೆ ಯುವ ದಾಂಡಿಗ ಸರ್ಫರಾಜ್ ಖಾನ್ ಫುಲ್ ಶೈನ್ ಆಗಿದ್ದಾರೆ. ಸಿಕ್ಕಾಪಟ್ಟೆ ಜೋಶ್‌ನಲ್ಲಿಯೇ ಅಂಗಣಕ್ಕೆ ಇಳಿದಿದ್ದಾರೆ. ಬಿಸಿ ರಕ್ತ, ಆಡುವ ಉತ್ಸಾಹ, ಫುಲ್ ಜೋಶ್‌ನಲ್ಲಿದ್ದ ಸರ್ಫರಾಜ್ ಖಾನ್ ಚಿಕ್ಕ ಎಡವಟ್ಟು ಮಾಡಿಕೊಂಡು ಕ್ಯಾಪ್ಟನ್ ರೋಹಿತ್ ಶರ್ಮಾರಿಂದ ಬೈಸಿಕೊಂಡಿದ್ದಾರೆ. ಇದು ಕ್ಯಾಪ್ಟನ್ ತನ್ನ ಸಹ ಆಟಗಾರನ ಒಳ್ಳೆಯದಕ್ಕೆ ಹೇಳಿದ್ದು ಅನ್ನೋದೇ ಪ್ಲಸ್ ಪಾಯಿಂಟ್.
ಇದನ್ನೂ ಓದಿ: ಇಂಗ್ಲೆಂಡ್ ಮೋಸದಾಟ ಕಂಟಿನ್ಯೂ! – ಕುಲ್ ದೀಪ್ ಬ್ಲಾಕ್..RO ಶಾಕ್?
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ರಾಂಚಿಯಲ್ಲಿ ನಡೆಯುತ್ತಿದೆ. ಗೆಲುವು ಕೂಡಾ ಟೀಮ್ ಇಂಡಿಯಾದ್ದೇ. ಆದರೆ ಅದಕ್ಕೂ ಮೊದಲು ಆಂಗ್ಲರು ಬ್ಯಾಟಿಂಗ್ ಮಾಡುವ ವೇಳೆ ಕ್ಯಾಪ್ಟನ್ ರೋಹಿತ್ ಶರ್ಮಾ, ಯುವ ದಾಂಡಿಗ ಸರ್ಫರಾಜ್ ಖಾನ್‌ಗೆ ಕ್ಲಾಸ್ ತಗೊಂಡಿರುವ ವಿಡಿಯೋ ವೈರಲ್ ಆಗಿದೆ. ಇಂಗ್ಲೆಂಡ್‌ನ ಎರಡನೇ ಇನ್ನಿಂಗ್ಸ್ ಕೇವಲ 145 ರನ್‌ಗಳಿಗೆ ಅಂತ್ಯಗೊಂಡಿತು. ಇದರ ನಡುವೆ ಇಂಗ್ಲೆಂಡ್ ಬ್ಯಾಟಿಂಗ್ ಮಾಡುವಾಗ ನಡೆದ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ರೋಹಿತ್ ಶರ್ಮಾ, ಸರ್ಫರಾಜ್ ಖಾನ್ ಗೆ ಬುದ್ದಿ ಹೇಳುತ್ತಾರೆ. ಇಂಗ್ಲೆಂಡ್ ಬ್ಯಾಟಿಂಗ್ ಇನ್ನಿಂಗ್ಸ್ ನಡೆಯುತ್ತಿರುತ್ತದೆ. ನಾಯಕ ರೋಹಿತ್ ಶರ್ಮಾ ಅವರು ಸರ್ಫರಾಜ್ ಖಾನ್ ಅವರನ್ನು ಬ್ಯಾಟ್ಸ್‌ಮನ್ ಪಕ್ಕದಲ್ಲಿ ಫೀಲ್ಡಿಂಗ್‌ಗೆ ನಿಲ್ಲಿಸಿದರು. ಆದರೆ, ಸರ್ಫರಾಜ್ ಫೀಲ್ಡರ್ ಹೆಲ್ಮೆಟ್ ಅಥವಾ ಯಾವುದೇ ಇತರ ರಕ್ಷಣಾತ್ಮಕ ಕವಚ ಇಲ್ಲದೆ ಬಂದು ನಿಲ್ಲುತ್ತಾರೆ. ಇದರಿಂದ ಕೋಪಗೊಂಡ ರೋಹಿತ್ ಅವರು ಸರ್ಫರಾಜ್ ಅವರ ಮೇಲೆ ರೇಗಾಡಿದ್ದಾರೆ. ನೀನು ಇಲ್ಲಿ ಹೀರೋ ಆಗಬೇಕಂತಿಲ್ಲ ಎಂದು ಹೇಳಿ ರಕ್ಷಣಾತ್ಮಕ ಕವಚ ಧರಿಸುವಂತೆ ಹೇಳಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ.
ಬ್ಯಾಟ್ಸ್‌ಮನ್ ಬಳಿ ನಿಂತಿರುವ ಫೀಲ್ಡರ್ ಹೆಲ್ಮೆಟ್ ಮತ್ತು ಶಿನ್ ಪ್ಯಾಡ್‌ಗಳನ್ನು ಧರಿಸುತ್ತಾರೆ. ಇದೇ ಕಾಳಜಿಯಲ್ಲಿ ರೋಹಿತ್ ಅವರು ಸರ್ಫರಾಜ್‌ಗೆ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್ ನಡೆಗೆ ಅವರಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ಟಂಪ್ ಮೈಕ್ನಲ್ಲಿ ರೋಹಿತ್ ಆಡಿದ ಮಾತು ಸೆರೆಯಾಗಿದೆ. ಬಳಿಕ ಕೆ.ಎಸ್.ಭರತ್ ಹೆಲ್ಮೆಟ್ ನೊಂದಿಗೆ ಮೈದಾನಕ್ಕೆ ಬಂದು ಸರ್ಫರಾಜ್ ಖಾನ್‌ಗೆ ನೀಡಿದರು. ಕ್ಯಾಪ್ಟನ್ ಮಾತು ಕೇಳಿ ಸರ್ಫರಾಜ್ ಕೂಡಾ ಒಂದು ಕ್ಷಣ ತಬ್ಬಿಬ್ಬಾದರು.