“ರಾತ್ರೋರಾತ್ರಿ 50 ಸಾವಿರ ಜನರನ್ನು ಒಕ್ಕಲೆಬ್ಬಿಸಲು ಸಾಧ್ಯವಿಲ್ಲ” ಎಂದ ಸುಪ್ರೀಂ ಕೋರ್ಟ್

“ರಾತ್ರೋರಾತ್ರಿ 50 ಸಾವಿರ ಜನರನ್ನು ಒಕ್ಕಲೆಬ್ಬಿಸಲು ಸಾಧ್ಯವಿಲ್ಲ” ಎಂದ ಸುಪ್ರೀಂ ಕೋರ್ಟ್

ನವದೆಹಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿರುವ ರೈಲ್ವೇ ಭೂಮಿಯಲ್ಲಿನ ಅತಿಕ್ರಮಣವನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಉತ್ತರಾಖಂಡ ಹೈಕೋರ್ಟ್ ಆದೇಶಿತ್ತು. ಈ ತೀರ್ಪನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ.

“ರಾತ್ರೋರಾತ್ರಿ 50 ಸಾವಿರ ಜನರನ್ನು ಒಕ್ಕಲೆಬ್ಬಿಸುವುದು ಸಾಧ್ಯವಿಲ್ಲ… ಇದು ಮಾನವೀಯ ವಿಚಾರ. ಇದಕ್ಕೆ ಕಾರ್ಯಗತಗೊಳ್ಳಬಹುದಾದಂತಹ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯವಿದೆ” ಎಂದು ಸುಪ್ರೀಂಕೋರ್ಟ್ ಹೇಳಿದೆ.

ಇದನ್ನೂ ಓದಿ: ವಿಧಾನಸೌಧದಲ್ಲಿ ಲಕ್ಷ ಲಕ್ಷ ಹಣ ಪತ್ತೆ – ಸರ್ಕಾರದ ವಿರುದ್ಧ ಸಿದ್ದು, ಡಿಕೆಶಿ ಗರಂ

ಜನರನ್ನು ತೆರವುಗೊಳಿಸಲು ಪಡೆಗಳನ್ನು ಬಳಸುವ ಕುರಿತಾದ ಹೈಕೋರ್ಟ್ ಸಲಹೆಯನ್ನು ಉಲ್ಲೇಖಿಸಿರುವ ಸುಪ್ರೀಂಕೋರ್ಟ್, “ಹಲವು ದಶಕಗಳಿಂದ ಅಲ್ಲಿ ವಾಸಿಸುತ್ತಿರುವ ಜನರನ್ನು ಒಕ್ಕಲೆಬ್ಬಿಸಲು ಅರೆಸೇನಾ ಪಡೆಗಳನ್ನು ನಿಯೋಜನೆ ಮಾಡಬೇಕೆಂಬುದು ಸರಿಯಲ್ಲ. ಜನರನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ರೂಪಿಸುವ ಅಗತ್ಯವಿದೆ” ಎಂದು ಹೇಳಿದೆ.

ವಿವಾದಿತ 29 ಎಕರೆ ಪ್ರದೇಶದಲ್ಲಿ ಪ್ರಸ್ತುತ ನಾಲ್ಕು ಸಾವಿರಕ್ಕೂ ಹೆಚ್ಚು ಮನೆಗಳು, ನಾಲ್ಕು ಸರ್ಕಾರಿ ಶಾಲೆಗಳು, 11 ಖಾಸಗಿ ಶಾಲೆಗಳು, ಒಂದು ಬ್ಯಾಂಕ್‌, 2 ಬೃಹತ್‌ ನೀರಿನ ಟ್ಯಾಂಕ್‌ ಗಳು, 10 ಮಸೀದಿ, 4 ದೇಗುಲ, ಹಲವು ವಾಣಿಜ್ಯ ಮಳಿಗೆಗಳು ದಶಕಗಳಿಂದ ಇವೆ. ಹಲ್ದಾನಿ ರೈಲು ನಿಲ್ದಾಣದ ಸಮೀಪದ ಗಫ‌ೂರ್‌ ಬಸ್ತಿ, ಡೋಲಾಕ್‌ ಬಸ್ತಿ ಮತ್ತು ಇಂದಿರಾ ನಗರ ಪ್ರದೇಶಗಳು ಇದರ ವ್ಯಾಪ್ತಿಗೆ ಬರುತ್ತವೆ. ಸುದೀರ್ಘ‌ ವಿಚಾರಣೆಯ ನಂತರ ಉತ್ತರಾಖಂಡ ಹೈಕೋರ್ಟ್‌ ಡಿ.20ರಂದು ತೀರ್ಪು ನೀಡಿದ್ದು, ಜ.9ರೊಳಗೆ ತಮಗೆ ಸೇರಿದ ವಸ್ತುಗಳನ್ನು ತೆಗೆದುಕೊಂಡು, ಸ್ಥಳವನ್ನು ತೆರವುಗೊಳಿಸಬೇಕು ಎಂದು ಅಲ್ಲಿನ ನಿವಾಸಿಗಳಿಗೆ ನೋಟಿಸ್‌ ನೀಡಿತ್ತು. ಆದರೆ ಅದಕ್ಕೆ ಸುಪ್ರೀಂಕೋರ್ಟ್ ಬ್ರೇಕ್ ಹಾಕಿದೆ.

suddiyaana