ತಂದೆ ಪಾಕಿಸ್ತಾನ, ತಾಯಿ ಬೆಂಗಳೂರು – ಭಾರತ ಪೌರತ್ವಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ್ದೇಕೆ?

ತಂದೆ ಪಾಕಿಸ್ತಾನ, ತಾಯಿ ಬೆಂಗಳೂರು – ಭಾರತ ಪೌರತ್ವಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ್ದೇಕೆ?

ಬೆಂಗಳೂರು: ತಂದೆ ಪಾಕಿಸ್ತಾನ, ತಾಯಿ ಬೆಂಗಳೂರು. ಈ ದಂಪತಿ ವಿಚ್ಚೇದನ ಪಡೆದುಕೊಂಡಿದ್ದಾರೆ. ಇದೀಗ ಬೆಂಗಳೂರು ಮೂಲದ ತಾಯಿ ತನ್ನ ಮಕ್ಕಳಿಗೆ ಭಾರತ ಪೌರತ್ವ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಭಾರತದ ಪೌರತ್ವ ಪಡೆಯಲು ಕಾನೂನಿನ ತೊಡಕು ಎದುರಾಗಿದೆ.

ಇದನ್ನೂ ಓದಿ: ಮಳೆ ಅವಾಂತರ ತಡೆಗೆ ಸಜ್ಜಾದ ಅಧಿಕಾರಿಗಳು – 200 ಪ್ರವಾಹ ಪ್ರದೇಶಗಳನ್ನು ಗರುತಿಸಿದ ಬಿಬಿಎಂಪಿ

ಈ ಅರ್ಜಿಯನ್ನು ಪರಿಶೀಲಿಸಿದ ಕರ್ನಾಟಕ ಹೈಕೋರ್ಟ್, ಭಾರತದ ಪೌರತ್ವ ನೀಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಪಾಕಿಸ್ತಾನ ಪೌರತ್ವ ತ್ಯಜಿಸಲು ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಎನ್ನುವ ನಿಯಮವಿದೆ. ಹೀಗಾಗಿ ಈ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.

ಏನಿದು ಪ್ರಕರಣ?

ಬೆಂಗಳೂರಿನ ಅಮೀನಾ ರಾಹೀಲ್, ಪಾಕಿಸ್ತಾನದ ಮೂಲದ ಅಸಾದ್ ಮಲಿಕ್ ಜೊತೆ 2002ರಲ್ಲಿ ದುಬೈನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಉದ್ಯೋಗ ಕಾರಣ ಅಸಾದ್ ಹಾಗೂ ಅಮೀನಾ ದುಬೈನಲ್ಲೇ ನೆಲೆಸಿದ್ದರು. ದಂಪತಿಗಳಿಗೆ 17 ವಯಸ್ಸು ಹಾಗೂ 14 ವರ್ಷದ ಇಬ್ಬರು ಮಕ್ಕಳಿದ್ದಾರೆ. ಆದ್ರೆ, 2014ರಲ್ಲಿ ಅಮೀನಾ ಹಾಗೂ ಅಸಾದ್ ದುಬೈ ನ್ಯಾಯಾಲಯದಿಂದ ವಿಚ್ಚೇದನ ಪಡೆದಿದ್ದರು. ಈ ವೇಳೆ ಮಕ್ಕಳ ಪಾಲನ ಹಾಗೂ ಎಲ್ಲಾ ಹಕ್ಕನ್ನು ತಾಯಿಗೆ ನೀಡಲಾಗಿತ್ತು. 2021ರಲ್ಲಿ ಅಮೀನಾ ದುಬೈ ಜೀವನ ಕಷ್ಟವಾದ ಕಾರಣ ತಾಯಿ ಮನೆಗೆ ಮರಳಲು ನಿರ್ಧರಿಸಿದ್ದರು. ಆದ್ರೆ, ತಾಯಿ ಅಮೀನಾ ಭಾರತದ ಪ್ರಜೆಯಾದರೂ, ಮಕ್ಕಳಿಬ್ಬರು ಪಾಕಿಸ್ತಾನದ ಪ್ರಜೆಗಳಾಗಿದ್ದಾರೆ. ತಂದೆ ಪಾಕಿಸ್ತಾನ ಪ್ರಜೆಯಾದ ಕಾರಣ ಮಕ್ಕಳಿಗೆ ಪಾಕಿಸ್ತಾನದ ಪೌರತ್ವ ಸಿಕ್ಕಿದೆ.

ಅಮೀನಾ ಹಾಗೂ ಮಕ್ಕಳು ಭಾರತದಲ್ಲಿ ಉಳಿಯಲು ನಿರ್ಧರಿಸಿದ್ದಾರೆ. ಇಬ್ಬರು ಅಪ್ರಾಪ್ತ ಮಕ್ಕಳ ಬಳಿ ಭಾರತದಲ್ಲಿ ಪಾಸ್‌ಪೋರ್ಟ್ ಇಲ್ಲದ ಕಾರಣ ಕಾನೂನು ತೊಡಕು ಎದುರಾಗಿತ್ತು. ಅಮೀನಾ ಹಾಗೂ ಮಕ್ಕಳು ಬೆಂಗಳೂರಿನಲ್ಲಿ ನೆಲಸಲು ಮಾನ್ಯತೆ ಇಲ್ಲದಾಗಿತ್ತು. ಈ ವೇಳೆ ಮಕ್ಕಳ ಪಾಕಿಸ್ತಾನ ಪಾಸ್‌ಪೋರ್ಟ್ ಕಚೇರಿಗೆ ಹಿಂದುರುಗಿಸಿ, ಮಾನವೀಯತೆ ಆಧಾರದಲ್ಲಿ ಭಾರತ ರಾಯಭಾರ ಕಚೇರಿ ತಾತ್ಕಾಲಿಕ ಪಾಸ್‌ಪೋರ್ಟ್ ನೀಡಿತ್ತು. ಬಳಿಕ ಬೆಂಗಳೂರಿಗೆ ಆಗಮಿಸಿದ ಅಮೀನಾ ಹಾಗೂ ಇಬ್ಬರು ಮಕ್ಕಳು ತಾಯಿ ಮನೆಯಲ್ಲಿ ವಾಸವಾಗಿದ್ದಾರೆ. 17 ವರ್ಷ ಹಾಗೂ 14 ವರ್ಷದ ಮಕ್ಕಳು ಪಾಕಿಸ್ತಾನ ಪೌರತ್ವ ತ್ಯಜಿಸಿ ಭಾರತದ ಪೌರತ್ವ ಪಡೆಯಬೇಕಿದೆ. ಆದರೆ ಅವರ ಬಳಿಯಿದ್ದ ತಾತ್ಕಾಲಿಕ ಪಾಸ್‌ಪೋರ್ಟ್ ಅವಧಿ ಅಂತ್ಯಗೊಂಡಿದೆ. ಹೀಗಾಗಿ ತಾಯಿ ಮಕ್ಕಳು ಗೃಹ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ. ಆದ್ರೆ ಈವರೆಗೂ ಗೃಹ ಸಚಿವಾಲಯದಿಂದ ಯಾವುದೇ  ಉತ್ತರ ಬಂದಿಲ್ಲ. ಹೀಗಾಗಿ ಅಪ್ರಾಪ್ತ ಮಕ್ಕಳಿಗೆ ಭಾರತ ಪೌರತ್ವ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.

suddiyaana