ಆನೆಯೊಂದಿಗೆ ಯುವತಿಯ ಚೆಲ್ಲಾಟ – ಚೆಂಡಿನಂತೆ ಎತ್ತಿ ಬಿಸಾಡಿದ ಗಜರಾಜ
ಆನೆಗಳ ಬಳಿ ತೆರಳುವಾಗ, ಅವುಗಳೊಂದಿಗೆ ಆಟ ಆಡುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಏಕೆಂದರೆ ಅವುಗಳು ಯಾವಾಗ ಬೇಕಾದರೂ ಕೆರಳಿ ನಮ್ಮ ಮೇಲೆ ದಾಳಿ ನಡೆಸಬಹುದು. ಇಂತಹ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇಲ್ಲೊಬ್ಬಳು ಯುವತಿ ಬಾಳೆಹಣ್ಣುಗಳನ್ನು ತಿನ್ನಿಸಲು ಆನೆ ಬಳಿ ತೆರಳಿದ್ದಾಳೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ: ವನ್ಯಜೀವಿಗಳ ಹೊಂದಾಣಿಕೆ ಪಾಠ – ಆನೆಗಳಿಗೆ ದಾರಿ ಬಿಟ್ಟುಕೊಟ್ಟ ಹುಲಿ
ಸಾಮಾನ್ಯವಾಗಿ ಸಾಕು ಆನೆಗಳು ಎಷ್ಟೇ ಸಾಧುವಾಗಿದ್ದರೂ ಕೂಡ ಅವುಗಳಿಗೆ ಕಿರಿಕಿರಿ ಉಂಟಾದರೆ ತನ್ನ ಸುತ್ತಮುತ್ತ ಇದ್ದವರ ಮೇಲೆ ದಾಳಿ ಮಾಡುತ್ತವೆ. ಇದೀಗ ವೈರಲ್ ಆದ ವಿಡಿಯೋದಲ್ಲಿ ಆನೆಯೊಂದು ಯುವತಿ ಮೇಲೆ ದಾಳಿ ಮಾಡಿದೆ. ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಸಂತ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ನದಿ ಬಳಿ ಆನೆ ನಿಂತಿರುತ್ತದೆ. ಈ ವೇಳೆ ಯುವತಿಯೊಬ್ಬಳು ಆನೆಗೆ ಬಾಳೆ ಹಣ್ಣನ್ನು ತಿನ್ನಿಸಲು ಹೋಗುತ್ತಾಳೆ. ಆನೆ ಬಾಳೆ ಹಣ್ಣನ್ನು ತಿನ್ನಲು ಸೊಂಡಿಲನ್ನು ಮುಂದೆ ಚಾಚುತ್ತಿದ್ದಂತೆ ಯುವತಿ ಬಾಳೆಹಣ್ಣನ್ನು ಕೊಡದೇ ಸತಾಯಿಸಿದ್ದಾಳೆ. ಮತ್ತೆ ಬಾಳೆ ಆನೆ ಬಾಳೆಹಣ್ಣನ್ನು ತಿನ್ನಲು ಬಂದಾಗ ಬಾಳೆ ಗೊನೆಯನ್ನು ಹಿಡಿದು ಆನೆಗೆ ತೋರಿಸಿ ತೋರಿಸಿ ಮುಂದಕ್ಕೆ ಚಲಿಸಿದ್ದಾಳೆ. ಇದರಿಂದ ಕೋಪಗೊಂಡ ಆನೆ ಯುವತಿಯನ್ನು ಚೆಂಡಿನಂತೆ ಎತ್ತಿ ಬಿಸಾಡಿದೆ.
ಈ ವಿಡಿಯೋವನ್ನು ಶೇರ್ ಮಾಡಿರುವ ಸುಸಂತ ನಂದಾ ಅವರು, “ಆನೆಯನ್ನು ಎಷ್ಟು ಪಳಗಿಸಿದರೂ ಅದನ್ನು ಮೋಸಗೊಳಿಸಲು ಸಾಧ್ಯವಿಲ್ಲ. ಸೆರೆಯಲ್ಲಿರುವ ಅತ್ಯಂತ ಬುದ್ಧಿವಂತ ಪ್ರಾಣಿಗಳಲ್ಲಿ ಆನೆಯೂ ಒಂದು ” ಅಂತಾ ಬರೆದುಕೊಂಡಿದ್ದಾರೆ.
You can’t fool an elephant even though he is tamed. They are one of the most intelligent animals to be in captivity. pic.twitter.com/rQXS6KYskN
— Susanta Nanda (@susantananda3) April 27, 2023