ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿ ಕೊಂದಿದ್ದು ಕ್ಯಾನ್ಸರ್ ಪೀಡಿತ ಪ್ರೇಮಿ- ಮಗಳನ್ನು ಗರ್ಭಿಣಿ ಮಾಡಿ ಕೊಂದ ಪಾಪಿಗೆ ಪೋಷಕರ ಹಿಡಿಶಾಪ

ಚಿತ್ರದುರ್ಗದಲ್ಲಿ ಮಂಗಳವಾರ ಸಂಜೆ ವಿದ್ಯಾರ್ಥಿನಿಯ ಕೊಲೆ ಸುದ್ದಿ ಕೇಳಿ ಜನ ಬೆಚ್ಚಿಬಿದ್ದಿದ್ದರು. ಬುಧವಾರ ಬೆಳಿಗ್ಗೆಯಿಂದಲೇ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಬೇಕು ಎಂದು ಪ್ರತಿಭಟನೆ ಕೂಡಾ ನಡೆಯುತ್ತಿತ್ತು. ಇದೇ ವೇಳೆ ವಿದ್ಯಾರ್ಥಿನಿ ಕೊಲೆಯ ರಹಸ್ಯ ಹೊರಬಿದ್ದಿದೆ. ಅದರಲ್ಲೂ ಕೊಲೆಗಾರ ವಿದ್ಯಾರ್ಥಿನಿಯ ಪ್ರೇಮಿ ಅನ್ನೋದು ಬಹಿರಂಗವಾಗಿದೆ. ಅಷ್ಟೇ ಅಲ್ಲ, ಕೊಲೆಗಾರ ಪ್ರೇಮಿ ಕ್ಯಾನ್ಸರ್ ಪೀಡಿತ ಅನ್ನೋದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಇದನ್ನೂ ಓದಿ:ದೆಹಲಿ ಸಿಎಂ ರೇಖಾ ಗುಪ್ತಾಗೆ ಹಲ್ಲೆ- ವ್ಯಕ್ತಿಯನ್ನ ವಶಕ್ಕೆ ಪಡೆದ ಪೊಲೀಸರು!
ಚಿತ್ರದುರ್ಗದ ಹೊರ ವಲಯದಲ್ಲಿ ಮಂಗಳವಾರ ಸಂಜೆ ವಿದ್ಯಾರ್ಥಿನಿ ವರ್ಷಿತಾ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 19 ವರ್ಷದ ಡಿಗ್ರಿ ವಿದ್ಯಾರ್ಥಿನಿ ವರ್ಷಿತಾ ಕೊಲೆಯಾಗಿದ್ದಳು. ಇದೀಗ ಈ ಕೊಲೆಗೆ ಸಂಬಂಧಪಟ್ಟಂತೆ ಪ್ರಿಯಕರ ಚೇತನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಚೇತನ್ ಪೊಲೀಸರ ಮುಂದೆ ಕೆಲವು ಗಂಭೀರ ಅಂಶಗಳನ್ನು ಬಹಿರಂಗಪಡಿಸಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ, ಚೇತನ್ ಈ ಕೃತ್ಯವನ್ನು ತಾನು ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಇದರ ನಡುವೆ ಆರೋಪಿಯಾಗಿರುವ ಚೇತನ್‌ಗೆ ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಬಗ್ಗೆಯೂ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಕ್ಯಾನ್ಸರ್ ಥರ್ಡ್ ಸ್ಟೇಜ್ನಲ್ಲಿರುವ ಯುವಕ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆರೋಪಿ ಚೇತನ್ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯ ಪ್ರರಾಕ ‘ಗಂಗಾವತಿಯ ಖಾಸಗಿ ಕಂಪನಿಯಲ್ಲಿ ನಾನು ಕೆಲಸ ಮಾಡುತ್ತಿದ್ದೆ. ಕಳೆದ ಎರಡು ವರ್ಷದಿಂದ ವರ್ಷಿತಾಳನ್ನು ಪ್ರೀತಿ ಮಾಡುತ್ತಿದ್ದೆ. ಆದರೆ, ಕೆಲ ತಿಂಗಳಿನಿಂದ ವರ್ಷಿತಾ ಬೇರೊಬ್ಬನ ಜೊತೆ ಸಂಬಂಧ ಹೊಂದಿದ್ದಳು. ಇತ್ತೀಚೆಗೆ ವರ್ಷಿತಾ ಗರ್ಭಿಣಿ ಆಗಿದ್ದಳೆಂದು ನನಗೆ ಗೊತ್ತಾಗಿತ್ತು. ವರ್ಷಿತಾ ಜತೆ ಮದುವೆಗೆ ಸಂಬಂಧಿಕರು ಒತ್ತಡ ಹೇರಿದ್ದರು. ಆಗಸ್ಟ್ 14ಕ್ಕೆ ವರ್ಷಿತಾ ಹಿರಿಯೂರಿನ ಸಂಬಂಧಿಕರ ಮನೆಗೆ ಹೋಗಿದ್ದಳು. ಆಗಸ್ಟ್ 18ರಂದು ವರ್ಷಿತಾ ಚಿತ್ರದುರ್ಗಕ್ಕೆ ವಾಪಾಸ್ ಆಗಿದ್ದಳು. ಆ.18ರ ಮಧ್ಯಾಹ್ನ 2 ಗಂಟೆಗೆ ಬೈಕ್ ನಲ್ಲಿ ಗೋನೂರು ಬಳಿ ಆಕೆಯನ್ನು ಕರೆದೊಯ್ದಿದ್ದೆ. ಚಿತ್ರದುರ್ಗ ತಾಲೂಕಿನ ಗೋನೂರು ಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿ 48ರ ನಿರ್ಜನ ಪ್ರದೇಶದಲ್ಲಿ ನಾವು ಕೆಲ ಹೊತ್ತು ಕುಳಿತಿದ್ದೆವು. ಈ ವೇಳೆ ವರ್ಷಿತಾ ಜೊತೆ ದೈಹಿಕ ಸಂಬಂದ ಬೆಳೆಸಿದ ಬಳಿಕ ನಾನು ಆಕೆಯ ತಲೆಗೆ ಹೊಡೆದಿದ್ದೆ. ನೆಲಕ್ಕೆ ಬಿದ್ದಾಗ ಕತ್ತು ಹಿಸುಕಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದೇನೆ. ಬಳಿಕ ಬೈಕ್‌ನಲ್ಲಿ ತಂದಿದ್ದ ಪೆಟ್ರೋಲ್ ಹಾಕಿ ಆಕೆಯ ದೇಹಕ್ಕೆ ಬೆಂಕಿ ಇಟ್ಟಿದ್ದೆ. ಆ.19ರ ಬೆಳಗ್ಗೆ ಮತ್ತೆ ಸ್ಥಳಕ್ಕೆ ಬಂದು ಪೆಟ್ರೋಲ್ ಸುರಿದು ಬೆಂಕಿ ಹಾಕಿದೆ. ಮೃತ ದೇಹದ ಮೇಲೆ ವರ್ಷಿತಾಳ ಚಪ್ಪಲಿಯಿಟ್ಟು ಹೋಗಿದ್ದೆ.’ ಎಂದು ಚೇತನ್ ಹೇಳಿದ್ದಾನೆ.
ಆರೋಪಿಯಾಗಿರುವ ಚೇತನ್ ಚಿತ್ರದುರ್ಗದ ಕೆಳಗೋಟೆ ಬಡಾವಣೆಯನು ಎನ್ನಲಾಗಿದೆ. ಹತ್ಯೆ ಖಂಡಿಸಿ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆದಿದೆ. ಚಿತ್ರದುರ್ಗದಲ್ಲಿ ದಲಿತಪರ ಸಂಘಟನೆಗಳು ಮತ್ತು ವರ್ಷಿತಾಳ ಸಂಬಂಧಿಕರು ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯು ತೀವ್ರಗೊಂಡ ಹಿನ್ನೆಲೆಯಲ್ಲಿ ನಗರದ ಡಾ. ಅಂಬೇಡ್ಕರ್ ವೃತ್ತ ಮತ್ತು ಜಿಲ್ಲಾಸ್ಪತ್ರೆ ಎದುರು ರಸ್ತೆ ತಡೆದು ಧರಣಿ ನಡೆಸಲಾಯಿತು. ಪ್ರತಿಭಟನೆಯಿಂದಾಗಿ ನಗರದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡಿದರು. ಚಳ್ಳಕೆರೆ ಗೇಟ್‌ನಿಂದ ಅಂಬೇಡ್ಕರ್ ವೃತ್ತದವರೆಗಿನ ಮಾರ್ಗವನ್ನು ಪೊಲೀಸರು ಬದಲಾಯಿಸಿ, ಸಂಚಾರಕ್ಕೆ ಸುಗಮ ವ್ಯವಸ್ಥೆ ಕಲ್ಪಿಸಿದರು.

ನೋಡಿರಿ

