18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಕೆನಡಾ ಪ್ರಧಾನಿ

18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಕೆನಡಾ ಪ್ರಧಾನಿ

ಒಟ್ಟಾವಾ: ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರೂಡೊ ಹಾಗೂ ಪತ್ನಿ ಸೋಫಿ ಗ್ರೆಗೊರಿ  ತಮ್ಮ 18 ವರ್ಷಗಳ ವೈವಾಹಿಕ ಜೀವನವನ್ನು ಮುರಿದುಕೊಳ್ಳುವುದಾಗಿ ಘೋಷಿಸಿದ್ದಾರೆ. ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಪತ್ನಿ ಸೋಫಿಯೊಂದಿಗೆ ವಿಚ್ಛೇದನ ನೀಡಿದ್ದಾರೆ.

ಜಸ್ಟಿನ್ ಟ್ರುಡೊ (51) ಹಾಗೂ ಸೋಫಿ (48) 2005ರ ಮೇ ಕೊನೆಯಲ್ಲಿ ವಿವಾಹವಾಗಿದ್ದರು. ಹಲವು ಅರ್ಥಪೂರ್ಣ ಹಾಗೂ ಕ್ಲಿಷ್ಟಕರ ಮಾತುಕತೆ ಬಳಿಕ ನಾವಿಬ್ಬರು ಬೇರೆಯಾಗುತ್ತಿದ್ದೇವೆ ಎನ್ನುವ ವಿಚಾರವನ್ನು ನಾನು ಮತ್ತು ಸೋಫಿ ಹಂಚಿಕೊಳ್ಳುತ್ತಿದ್ದೇವೆ‘ ಎಂದು ಟ್ರೂಡೊ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಇನ್ನುಮುಂದೆ ಮಕ್ಕಳಿಗೆ ದಿನಕ್ಕೆ 2 ಗಂಟೆ ಮಾತ್ರ ಮೊಬೈಲ್ ನೋಡಲು ಅವಕಾಶ!

ಪ್ರಧಾನಿ ಟ್ರುಡೊ ಹಾಗೂ ಅವರ ಪತ್ನಿ ಸೋಫಿ ಪ್ರತ್ಯೇಕಗೊಳ್ಳುತ್ತಿರುವ ನಿರ್ಧಾರಕ್ಕೆ ಸಂಬಂಧಿಸಿಂತೆ ಎಲ್ಲಾ ಕಾನೂನು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಕಚೇರಿ ತಿಳಿಸಿದೆ.

ದಂಪತಿಗೆ ಮೂವರು ಮಕ್ಕಳಿದ್ದಾರೆ. ಈಗ ಅವರು ನಿಕಟ ಕುಟುಂಬವಾಗಿ ಉಳಿಯಲಿದ್ದಾರೆ. ಪ್ರಧಾನಿ ಹಾಗೂ ಸೋಫಿ ತಮ್ಮ ಮಕ್ಕಳನ್ನು ಸುರಕ್ಷಿತ, ಪ್ರೀತಿ, ಸಹಯೋಗದ ವಾತಾವರಣದಲ್ಲಿ ಬೆಳೆಸುವತ್ತ ಗಮನಹರಿಸಲಿದ್ದಾರೆ. ಮುಂದಿನ ವಾರದಿಂದ ಕುಟುಂಬ ಜೊತೆಯಲ್ಲಿ ರಜೆಯನ್ನು ಕಳೆಯಲಿದೆ ಎಂದು ಕಚೇರಿ ಉಲ್ಲೇಖಿಸಿದೆ.

suddiyaana